Leed suddi-1(B)

 

 

ಮೂಡಿಗೆರೆ  ಎಂಜಿಎಂ ಸರ್ಕಾರಿ ಆಸ್ಪತ್ರೆಗೆ ಕ್ಷೇತ್ರದ ಶಾಸಕರಾದ ನಯನ ಮೋಟಮ್ಮ ಅವರು ಡಿಢೀರ್ ಭೇಟಿ ನೀಡಿ ರೋಗಿಗಳ ಅಹವಾಲು ಆಲಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಗೆ ಆಗಮಿಸಿದಾಗ ವೈದ್ಯರ ಕೊಠಡಿಗಳ ಮುಂದೆ ಕ್ಯೂ ನಿಂತಿದ್ದು ಕಾಣಿಸಿತು. ಆದರೆ ವೈದ್ಯರ ಕೊಠಡಿಯಲ್ಲಿ ವೈದ್ಯರು ನಾಪತ್ತೆಯಾಗಿದ್ದು ಕಂಡು ತೀವ್ರ ತರಾಟೆಗೆ ತೆಗೆದುಕೊಂಡರು.

ರೋಗಿಗಳಿಗೆ ತೊಂದರೆ ಯಾಗಬಾರದೆಂದು ಟೋಕನ್ ವ್ಯವಸ್ಥೆ ಮಾಡಲಾಗಿದೆ. ಆದರೆ ಟೋಕನ್ ಪಡೆದಂತ ರೋಗಿಗಳಿಗೆ ಅವರ ರೋಗಕ್ಕೆ  ಸಂಬಂದ ಪಟ್ಟ ವೈದ್ಯರು ರೆಸ್ಟ್ ಅಥವಾ ರಜೆಯಲ್ಲಿದ್ದರೆ ಬದಲಿ ವೈದ್ಯರನ್ನು ಕಾಣುವಂತೆ ತಿಳಿಸುವುದು ಬಿಟ್ಟು ಬಾರದೇ ಇರುವ ವೈದ್ಯರ ಕೋಠಡಿ ಮುಂದೆ ಕ್ಯೂನಲ್ಲಿ ನಿಂತಿದ್ದು, ಅದರಲ್ಲಿ ಕೆಲವರಿಗೆ ಅದೇ ವೈದ್ಯರ ಸಹಿ ಹಾಕಿದರೆ ಮಾತ್ರ ಚುಚ್ಚುಮದ್ದು ನೀಡುವುದು ಎಂದು ಕೆಲವು ನರ್ಸ್ ಗಳ ಕಾರ್ಯವೈಖರಿಗೆ ಕೆಂಡಮಂಡಲವಾದ ಶಾಸಕರು. ಅಲ್ಲಿದ್ದ ಡ್ಯೂಟಿ ನರ್ಸ್ ಗೆ ಸುಖಾಸುಮ್ಮನೆ ಬಡವರಿಗೇಕೆ ತೊಂದರೆ ಕೊಡುತ್ತೀರಿ ಆ ವೈದ್ಯರಿಲ್ಲದಿದ್ದರೆ ಬದಲಿ ವೈದ್ಯರ ಬಳಿ ತೋರಿಸುವಂತೆ ಮತ್ತು ಬದಲಿ ವೈದ್ಯರ ಸಲಹೆ ಪಡೆದು ಚೀಟಿಗೆ ಸಹಿ ಹಾಕಿಸಿ ಚುಚ್ಚು ಮದ್ದು ಹಾಕಿಸಿ ಎಂದು ಗಂಟಗಟ್ಟಲೆ ಕ್ಯೂನಲ್ಲಿ ಕಾಯುತ್ತಿದ್ದ ರೋಗಿಗಳನ್ನು ಇತರೆ ವೈದ್ಯರಿದ್ದಲ್ಲಿಗೆ ಕಳಿಸಿ ಆ ವೈದ್ಯರಿಗೆ ಚಿಕಿತ್ಸೆ ಮಾಡುವಂತೆ ತಿಳಿಸಿದರು.

ರಾತ್ರಿ 12 ಗಂಟೆಯವರೆಗೂ ಕರ್ತವ್ಯ ನಿರ್ವಹಿಸಿದ ವೈದ್ಯರು ಇಂದು ರೆಸ್ಟ್ ಗೆ ಹೋಗಿ ಮಧ್ಯಾಹ್ನ 1 ಗಂಟೆಗೆ ಬರುವವರಿದ್ದು. ಆದರೆ ಸಿಬ್ಬಂದಿಗಳು ಬೆಳಿಗ್ಗೆ 9 ಗಂಟೆಯಿಂದ ಅದೇ ವೈದ್ಯರು ಸಿಗುವುದಾಗಿ ನಾಮಫಲಕದಲ್ಲಿ ಹಾಕಿದ್ದು, ಆ ವೈದ್ಯರ ಕೊಠಡಿ ಮುಂದೆ ಬೆಳಿಗ್ಗೆ 9 ರಿಂದ ಸಾಲುಗಟ್ಟಿ ನಿಂತಿದ್ದು, ಈ ಬಗ್ಗೆ ನಾಮಫಲಕ ಹಾಕಿದವರನ್ನು ತರಾಟೆಗೆ ತೆಗೆದುಕೊಂಡು ಕರ್ತವ್ಯದಲ್ಲಿ ನಿರತರಾಗಿರುವ ವೈದ್ಯರ ಹೆಸರನ್ನು ಹಾಕುವಂತೆ ಸೂಚನೆ ನೀಡಿದರು.

ಒಳರೋಗಿಯಾಗಿ ದಾಖಲಾದ ರೋಗಿಯ  ಮಗನೊಬ್ಬ ನನ್ನ ತಂದೆಗೆ ಸೇರಿಸುವಾಗ ಇದ್ದ ವೈದ್ಯರು ಕಳೆದ ಮೂರು ದಿನಗಳಿಂದ ಬಂದಿಲ್ಲಾ  ಮತ್ತು ಈಗ ಡಿಸ್ ಚಾರ್ಜ್ ಮಾಡಲು ಅವರೇ ಬೇಕು ಎಂದು ಹೇಳುತ್ತಿದ್ದಾರೆ ಎಂದು ಶಾಸಕರ ಮುಂದೆ ಅಳಲು ತೋಡಿಕೊಂಡಾಗ ನರ್ಸ್ ನ್ನು ಕರೆದು ಯಾವ ವೈದ್ಯರು ಎಂದು ಕೇಳಿದಾಗ ಚೇತನ್ ಅವರು ಎಂದು ತಿಳಿಸಿದರು. ಅದೇ ನರ್ಸ್  ಚೇತನ್‍ ಅವರು ಕಿವಿಯ ಶಸ್ತ್ರ ಚಿಕಿತ್ಸೆಯಲಿದ್ದಾರೆ ಎಂದು ಶಾಸಕರಿಗೆ ತಿಳಿಸಿದರು.

ಶಾಸಕರು ನೇರವಾಗಿ ಶಸ್ತ್ರಚಿಕಿತ್ಸೆ ಕೊಠಡಿ ಗೆ ಹೋದಾಗ ಯಾವ ಆಪರೇಷನ್ನು ಇಲ್ಲಾ ವೈದ್ಯರಾದ ಚೇತನ್ ಬಂದಿಲ್ಲಾ ಎಂದು ತಿಳಿಸಿದಾಗ ನರ್ಸ್ ಗೆ ಏನಮ್ಮ ನನಗೆ  ಏಮಾರಿಸ್ತಿರಾ ಇನ್ನು ಬೇರೆ ರೋಗಿಗಳಿಗೆ ನೀವು ಹೇಗೆ ಏಮಾರಿಸಬಹುದು ಎಂದು ತರಾಟೆಗೆ ತೆಗೆದುಕೊಂಡರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು. ನಾನು ಶಾಸಕಿಯಾಗಿ ಬಂದಾಗ ಐದು ಜನ ವೈದ್ಯರುಗಳು ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಒಂಬತ್ತು ಜನ ವೈದ್ಯರಿದ್ದಾರೆ. ಅವರ ಕರ್ತವ್ಯದ ಸಮಯದ ನಿಗದಿಯನ್ನು ಫಲಕದಲ್ಲಿ ಅಳವಡಿಸುವ ವ್ಯವಸ್ಥೆ ಮಾಡಲಾಗಿದ್ದು. ಆದರೆ ಆ ಫಲಕದಲ್ಲಿರುವಂತೆ ನಾನು ಇಂದು ಹಠಾತ್ ಭೇಟಿ ನೀಡಿದಾಗ ಫಲಕದಲ್ಲಿರುವ ವೈದ್ಯರುಗಳು ಕರ್ತವ್ಯದಲ್ಲಿ ಇಲ್ಲದೆ ಇರುವುದು ಬೇಸರ ತಂದಿದೆ. ಬಾರದೆ ಇರುವ ವೈದ್ಯರುಗಳಿಗೆ ರೋಗಿಗಳು ಕ್ಯೂನಲ್ಲಿ ಕಾಯುತ್ತಿರುವುದು ಕಂಡು ಬಂದಿದೆ. ಮೊದಲು ಟೋಕನ್ ವ್ಯವಸ್ಥೆ ಇರಲಿಲ್ಲಾ ಆದರೆ ತಾವು ಶಾಸಕರಾಗಿ ಬಂದ ನಂತರ ಟೊಕನ್ ವ್ಯವಸ್ಥೆ ಮಾಡಿದ್ದು. ಬಡ ರೋಗಿಗಳಿಗೆ  ಇನ್ನಷ್ಟು ಅನುಕೂಲಗಳಾಗಲೆಂದು ಹಲವು ಬದಲಾವಣೆಗಳನ್ನು ತರುವುದಾಗಿ ತಿಳಿಸಿದ ಅವರು. ಊಟದ ಬಗ್ಗೆಯು ಬಹಳ ದೂರುಗಳು ಬಂದಿದ್ದು. ನಾನು ಸಮಯ ಹೇಳುವುದಿಲ್ಲಾ ನಾನೇ ಬಂದು ಆಹಾರ ಸೇವನೆ ಮಾಡುತ್ತೇನೆ ಎಂದು ತಿಳಿಸಿದ ಅವರು. ಆಸ್ಪತ್ರೆಯ ಅಭಿವೃದ್ದಿ ಮಾಡುತ್ತಿದ್ದರು ಕೆಲವು ಸಿಬ್ಬಂದ್ಯಗಳ ವರ್ತನೆ ತಮಗೆ ಬೇಸರ ತಂದಿದೆ ಅವರಿಗೆಲ್ಲಾ ಇಂದು ಎಚ್ಚರಿಕೆಯನ್ನು ನೀಡಿದ್ದೇನೆ ಎಂದರು.

ಹೊಸದಾಗಿ ರಕ್ತ ಪರಿಕ್ಷಾ ಕೊಠಡಿ ನಿರ್ಮಿಸಿದ್ದು ಹೊಸ ಪರಿಕರಕಗಳನ್ನು ತರಿಸಲಾಗಿದೆ. ಕಳೆದೆರಡು ವರ್ಷಗಳಿಂದ ಐಸಿಯು ಘಟಕ ನಡೆಯುತ್ತಿದೆ. ಸಾರ್ವಜನಿಕರ ನಿರೀಕ್ಷೆಗೆ   ತಕ್ಕುದಾಗಿ ನಡೆಯಬೇಕೆಂದು ನಾನು ಈ ಮೂರು ವರ್ಷದಲ್ಲಿ ಆಸ್ಪತ್ರೆಗೆ ಹಲವು ಬಾರಿ ಭೇಟಿ ನೀಡಿದ್ಧೇನೆ. ಜನರಿಗೆ ತಕ್ಕ ಸೌಲಭ್ಯಗಳು ದೊರೆಯಬೇಕೆನ್ನುವುದೆ ನನ್ನ ಆಸೆ ಯಾಗಿದೆ. ಅದಕ್ಕಾಗಿ ವೈದ್ಯರುಗಳು ಮತ್ತು ಸಿಬ್ಬಂದಿಗಳು ಎಚ್ಚೆತ್ತುಕೊಳ್ಳಲ್ಲಿ ಎಂದು ಆಗಾಗ್ಗ ಭೇಟಿ ನೀಡಿ ಪರಿಶೀಲಿಸುತ್ತಿರುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ