ಚಿತ್ರದುರ್ಗದ ಒನಕೆ ಓಬವ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 7 ಜಿಲ್ಲೆಗಳನ್ನೊಳಗೊಂಡ ಐ.ಸಿ.ಎಸ್.ಇ ಶಾಲೆಗಳ ವಲಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮೂಡಿಗೆರೆ ತಾಲ್ಲೂಕು ಬಣಕಲ್ ನಜರತ್ ಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ಪ್ರೀಡನ್ ಡಿಸೋಜಾ ಹಾಗೂ ಕ್ರಿಸ್ಟನ್ ಸ್ಟೀವ್ ಲಸ್ರದೋ 19ರ ವಯೋಮಾನದ ಡಬಲ್ಸ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದು 17ರ ವಯೋಮಾನದ ಡಬಲ್ಸ್ ನಲ್ಲಿ ಮೊಹಮ್ಮದ್ ಆದಿಲ್ ಮತ್ತು ಮೊಹಮ್ಮದ್ ಅಂಫಾಲ್ ತೃತೀಯ ಸ್ಥಾನ ಮತ್ತು 19ರ ವಯೋಮಾನದ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಅವಿನ್ ಡಿಸೋಜಾ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಶಾಲೆಗೆ ಕೀರ್ತಿ ತಂದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.


