ದೇಶ ಮತ್ತು ಧರ್ಮ ಮನುಷ್ಯನ ಎರಡು ಕಣ್ಣು. ಪ್ರಗತಿಪರ ವಿಚಾರಧಾರೆಗಳ ಹೆಸರಿನಲ್ಲಿ ಭಾರತೀಯ ಉತ್ಕøಷ್ಟ ಆಧ್ಯಾತ್ಮ ಸಂಸ್ಕøತಿ ನಾಶಗೊಳ್ಳಬಾರದು. ಭಗವಂತನಿತ್ತ ಸಂಪತ್ತು ನಿಜವಾದ ಬಾಳಿನ ಸಂಪತ್ತೆಂಬುದನ್ನು ಯಾರೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಚಿಕ್ಕಮಗಳೂರು ನಗರದ ವೀರಶೈವ ಲಿಂಗಾತಯತ ಸಮುದಾಯ ಭವನದ ಆವರಣದಲಿ ನಿರ್ಮಿಸಿದ ಶ್ರೀ ಈಶ್ವರ ದೇವಸ್ಥಾನದ ಉದ್ಘಾಟನೆ-ಲಿಂಗ ಪ್ರತಿಷ್ಠಾಪನೆ ಕಳಸಾರೋಹಣ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ದೇವರು ಮತ್ತು ಧರ್ಮವನ್ನು ಮರೆಯಬಾರದು. ದೇವರ ಮೇಲಿನ ನಂಬಿಕೆ ಮನುಷ್ಯನ ಬಾಳಿಗೆ ಶಾಶ್ವತ
ನಂದಾದೀಪ. ದೇವರು ಎಲ್ಲರಲ್ಲೂ ಇರುವನು. ಆದರೆ ದೇವರಲ್ಲಿ ಎಲ್ಲರೂ ಇಲ್ಲ. ಮಾನವ ಪರಿಪೂರ್ಣದೆಡೆಗೆ
ಸಾಗುವುದೇ ನಿಜವಾದ ಧರ್ಮವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಅಖಂಡತೆಗೆ ಇರುವ ಬೆಲೆ ಒಡಕಿಗೆ ಸಿಗಲಾರದೆಂಬ ಸತ್ಯವನ್ನು ಅರಿತು ಮನುಷ್ಯ ಬಾಳಬೇಕು.

ಚಿಕ್ಕಮಗಳೂರು ನಗರದಲ್ಲಿ ತಾಲ್ಲೂಕು ವೀರಶೈವ ಸಮಾಜದಿಂದ ಶ್ರೀಮತಿ ಮೈತ್ರಾದೇವಿ ಶ್ರೀ ಬಿ.ಎಸ್.ಯಡಿಯೂರಪ್ಪ ವೀರಶೈವ ಲಿಂಗಾಯತ ಭವನ ಸುಂದರ ಭವ್ಯವಾಗಿ ನಿರ್ಮಾಣಗೊಂಡಿರುವುದು ಸಮಾಜ ಬಾಂಧವರ ಸೌಭಾಗ್ಯವೆಂದ ಜಗದ್ಗುರುಗಳು ಕಟ್ಟಡ ನಿರ್ಮಾಣಕ್ಕಾಗಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮತ್ತು ಇನ್ನಿತರ ಗಣ್ಯ ಸಮಾಜ ಬಾಂಧವರ ಸಹಕಾರ ದೊರಕಿರುವುದು ಅವರಲ್ಲಿರುವ ಸಮಾಜಾಭಿಮಾನದ ದರ್ಮಶ್ರದ್ಧೆ ಕಾರಣವೆಂದರೆ ತಪ್ಪಾಗದು. ಇದಕ್ಕಾಗಿ ಶ್ರಮಿಸಿದ ವೀರಶೈವ ಲಿಂಗಾಯತ ಸಮಾಜ ಬಾಂಧವರಿಗೆ ಹೃದಯಾರೆ ಹಾರೈಸುತ್ತೇವೆ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಪರಿಪಕ್ವ ಸಮಾಜ ನಿರ್ಮಾಣ ಕಾರ್ಯವೇ ನಿಜವಾದ ಧರ್ಮ. ಮನುಷ್ಯನ ಜೀವನ ಸುಂದರ ಶುದ್ಧಗೊಳಿಸುವುದೇ ಧರ್ಮದ ಗುರಿ. ಚಿಕ್ಕಮಗಳೂರು ನಗರದಲ್ಲಿ ತಾಲ್ಲೂಕು ವೀರಶೈವ ಸಮಾಜ ಬಾಂಧವರು ಸಂಘಟಿತರಾಗಿ ಮಾಡಿದ ಈ ಕಾರ್ಯ ಇನ್ನುಳಿದ ಪರದೇಶಗಳ ಸಮಾಜ ಬಾಂಧವರಿಗೆ ಸ್ಪೂರ್ತಿಯಾಗಿದೆ. ತಂದೆ ತಾಯಿಯವರ ಹೆಸರಿನಲ್ಲಿ ನಿರ್ಮಾಣಗೊಂಡ ಭವನಕ್ಕೆ ಅಳಿಲು ಸೇವೆ ಸಲ್ಲಿಸಿದ ಪುಣ್ಯ ನನ್ನದಾಗಿದೆ. ಇದಕ್ಕಾಗಿ ಅನೇಕ ಸಮಾಜ ಬಾಂಧವರು ಕೊಟ್ಟ ಸಹಕಾರವನ್ನು ಸ್ಮರಿಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ;ಚಿಕ್ಕಮಗಳೂರು ನಗರಕ್ಕೊಂದು ಹೊನ್ನ ಕಳಸ ಇಟ್ಟಂತೆ ಭವ್ಯ ಭವನ ನಿರ್ಮಾಣಗೊಂಡಿರುವುದು ಎಲ್ಲರಿಗೂ ಸಂತೋಷ ತಂದಿದೆ. ಸಡಿಲಗೊಳ್ಳುತ್ತಿರುವ ಸಂಬಂಧಗಳನ್ನು ಗಟ್ಟಿಗೊಳಿಸುವುದೇ ಧರ್ಮದ ಗುರಿಯಾಗಿದೆ. ಸಮೃದ್ಧ ಸದೃಢ ನಾಡು
ಕಟ್ಟುವ ಶಕ್ತಿ ಸಮಾಜಕ್ಕೆ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮತ್ತು ಶಿವ ದೇವಾಲಯದ ದಾನಿಗಳಾದ ಶ್ರೀಮತಿ ಸಂಗೀತ ಮತ್ತು ಎಸ್.ಬಿ.ತಿಪ್ಪಾರೆಡ್ಡಿ ಕುಟುಂಬದವರಿಗೆ ಗೌರವಪೂರ್ವಕವಾಗಿ
ಸನ್ಮಾನಿಸಲಾಯಿತು. ಹುಲಿಕೆರೆ ವಿರೂಪಾಕ್ಷ ಶಿವಾಚಾರ್ಯ, ಕೆ.ಬಿದರೆ ಪ್ರಭುಕುಮಾರ ಶಿವಾಚಾರ್ಯ, ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ, ಹುಣಸೆಘಟ್ಟದ ಗುರುಮೂರ್ತಿ ಶಿವಾಚಾರ್ಯ, ಬೇರುಗಂಡಿ ಮಠದ ರೇಣುಕ ಮಹಾಂತ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ಹಣ್ಣೆ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು, ತರೀಕೆರೆ ಜಗದೀಶ ಶಿವಾಚಾರ್ಯರು, ಲಕ್ಷ್ಮೀಪುರದ ಜಯಬಸವಾನಂದ ಸ್ವಾಮಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಬಿ.ಎ.ಶಿವಶಂಕರ್
ಮಾತನಾಡಿ ನಗರದ ಚಾರಿತ್ರಿಕ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಸಮಾರಂಭ. ಶ್ರೀ ರಂಭಾಪುರಿ
ಜಗದ್ಗುರುಗಳವರನ್ನು ಭವ್ಯ ಭವನದ ಉದ್ಘಾಟನೆಗಾಗಿ ಬರಮಾಡಿಕೊಳ್ಳುವ ಅಪೇಕ್ಷೆ ಇತ್ತು. ಆದರೆ ಅಂದು
ಜಗದ್ಗುರುಗಳವರ ಪೂರ್ವಭಾವಿ ನಿಗದಿತ ಕಾರ್ಯಕ್ರಮಗಳಿದ್ದ ಕಾರಣ ದಯಮಾಡಿಸಲು ಸಾಧ್ಯವಾಗಲಿಲ್ಲ. ಇಂದು ಸಭಾ ಭವನದ ಆವರಣದಲ್ಲಿ ಶ್ರೀ ಈಶ್ವರ ದೇವಸ್ಥಾನ ನಿರ್ಮಿಸಿ ಲಿಂಗ ಪ್ರತಿಷ್ಠಾಪನೆ ಕಳಸಾರೋಹಣಕ್ಕಾಗಿ ಅವರು ಆಗಮಿಸಿರುವುದು ಸಕಲ ಸದ್ಭಕ್ತರ ಸೌಭಾಗ್ಯವೆಂದು ಭಾವಿಸುತ್ತೇನೆ. ಭವನ ಹಾಗೂ ದೇವಸ್ಥಾನ ನಿರ್ಮಾಣಕ್ಕಾಗಿ ಸೇವೆ ಸಲ್ಲಿಸಿದ ಎಲ್ಲ ಸದ್ಭಕ್ತರ ಸಹಕಾರವನ್ನು ವೀರಶೈವ ಸಮಾಜ ಎಂದೂ ಮರೆಯಲಾರದೆಂದು ಕೃತಜ್ಞತೆಯನ್ನು
ವ್ಯಕ್ತಪಡಿಸಿದರು. ಹೆಚ್.ಎನ್.ನಂಜೇಗೌಡ, ಸಿ.ಬಿ.ನಂದೀಶ, ಡಿ.ಎಸ್.ಮಮತ, ಎಸ್.ದೇವರಾಜ್, ಯು.ಎಂ.ಬಸವರಾಜ್,
ಎಂ.ವಿ.ಷಡಾಕ್ಷರಿ, ಬಿ.ನಿ. ವಿಶ್ವನಾಥ, ಸಿ.ಕೆ ಪ್ರಸಾದ್ ಸಿರಿಮನೆ, ಯು.ಎಸ್.ತೇಜೇಶ್‍ಕುಮಾರ್, ಹೆಚ್.ಸಿ.ಚಂದ್ರಮೌಳಿ ಸೇರಿದಂತೆ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಎಂ.ಎಸ್.ನಿರಂಜನ್ ಸರ್ವರನ್ನು ಸ್ವಾಗತಿಸಿದರು.
ಎಂ.ಸಿ.ಶಿವಾನಂದಸ್ವಾಮಿ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.


