ಮೂಡಿಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೇಸಿಐ ಮೂಡಿಗೆರೆ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾನೂನು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಡಿಗೆರೆ JMFC ಗೌರವಾನ್ವಿತ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಸುರಕ್ಷಾ ಕೆ.ಕೆ., ಮೂಡಿಗೆರೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಶ್ರೀ ಹರ್ಷವರ್ಧನ್, ಜೇಸಿಐ ಅಲ್ಯುಮಿನಿ ಕ್ಲಬ್ ವಲಯ ಅಧ್ಯಕ್ಷರಾದ ಯೋಗೀಶ್ ಎಚ್ ಕೆ, ವಕೀಲರ ಸಂಘದ ಅಧ್ಯಕ್ಷರಾದ ರಘು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು.
ಮೂಡಿಗೆರೆ ಜೇಸಿಐ ಅಧ್ಯಕ್ಷ ಸುನಿಲ್ ಎಂ.ಎಲ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ಮೂಡಿಗೆರೆ ಜೇಸಿಐ ಪೂರ್ವ ಅಧ್ಯಕ್ಷರಾದ ವಿಜಯಕುಮಾರ್, ಜೇಸಿಐ ಕಾರ್ಯದರ್ಶಿ ಸುದೀಪ್, ಲೇಡಿ ಜೇಸಿ ಅಧ್ಯಕ್ಷೆ ಸಂಧ್ಯಾ ಸುದೀಪ್, ಜೇಸಿ ಸದಸ್ಯರಾದ ನಾಜಿಮ್ ಮುಂತಾದರು ಉಪಸ್ಥಿತರಿದ್ದರು.
ವಕೀಲರಾದ ರಿಜ್ವಾನ್ ಅಲಿ ಅವರು ವಿದ್ಯಾರ್ಥಿಗಳಿಗೆ ಕಾನೂನು ಅರಿವಿನ ಕುರಿತು ಅಮೂಲ್ಯ ಮಾಹಿತಿಯನ್ನು ನೀಡಿದರು.


