September 23, 2026
;
NEWS 2

 

 

ಶಾಶ್ವತ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಆಗ್ರಹಿಸಿ ಸೋಮವಾರ ಚಿಕ್ಕಮಗಳೂರು ತಾಲ್ಲೂಕಿನ ಹಾದಿಹಳ್ಳಿ ಗ್ರಾಮಸ್ಥರು ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಖಾಲಿಕೊಡ ಹಿಡಿದುಕೊಂಡು ಗ್ರಾಮದ ಮುಖ್ಯಬೀದಿಯಲ್ಲಿ ಪ್ರತಿಭಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿದ ರೈತ ಸಂಘದ ಮುಖಂಡ ಸುನೀಲ್ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ಚಾಲನೆ ನೀಡಿ ಹಾದಿಹಳ್ಳಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ವಿಳಂಭವಾದಲ್ಲಿ ಗ್ರಾಮಸ್ಥ ರೊಂದಿಗೆ ತಾಲ್ಲೂಕು ಪಂಚಾಯಿತಿ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಚೇರಿಗೆ ಮುತ್ತಿ ಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಗ್ರಾಮದಲ್ಲಿ ನೀರಿನ ಮೂಲವನ್ನು ಗುರುತಿಸಿ, ಕೊಳವೆಬಾವಿ ಕೊರೆಯಿಸಿ ತಕ್ಷಣ ಪಂಪ್ ಅಳವಡಿಸಿ ಮತ್ತು ಮನೆಗಳ ನೀರಿನ ಸಂಪರ್ಕ ನಲ್ಲಿಯನ್ನು ಹಾಕಿಸಿ, ಕನಿಷ್ಟ 15 ದಿನಗಳಲ್ಲಿ ಕುಡಿಯುವ ನೀರು, ಜೆಜೆ ಎಂ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ, ಆದರೆ ಇದುವರೆಗೂ ಕಾಮಗಾರಿ ಪ್ರಾ ರಂಭಿಸದೇ ಕೇವಲ ಭರವಸೆ ನೀಡಿರುವುದು ಗ್ರಾಮಸ್ಥರ ವಿರೋಧಕ್ಕೆ ಕಾರಣವಾಗಿದೆ ಎಂದರು.

ಹಾದಿಹಳ್ಳಿಯ ಗ್ರಾಮಸ್ಥರ ಕುಡಿಯುವ ನೀರಿನ ಹೋರಾಟ ಒಂದು ಗ್ರಾಮದ ಹೋರಾಟವಾಗಿ ಉಳಿ ಯುವುದಿಲ್ಲ. ಇದು ಜಿಲ್ಲೆಯಾದ್ಯಂತ ಪ್ರತಿ ಗ್ರಾಮದ ನೀರಿನ ಹಕ್ಕಿನ ಹೋರಾಟಕ್ಕೆ ಸ್ಪೂರ್ತಿಯಾಗಬೇಕು. ಗ್ರಾ ಮಸ್ಥರು ಒಗ್ಗಟ್ಟಾಗಿ ಸಂವಿಧಾನ ಬದ್ಧವಾಗಿ ಹೋರಾಡಿದರೆ ಆಡಳಿತವನ್ನು ಹೊಣೆಗಾರರನ್ನಾಗಿಸಬಹುದು ಎಂಬುದನ್ನು ಹಾದಿಹಳ್ಳಿ ತೋರಿಸಿಕೊಟ್ಟಿದೆ ಎಂದು ಹೇಳಿದರು.

ಜೆಜೆಎಂ ಕಾಮಗಾರಿಯಲ್ಲಿ ನಿರ್ಮಿಸಲಾದ 50 ಸಾವಿರ ಲೀಟರ್ ಮೇಲ್ಜರ್ಜೆ ಟ್ಯಾಂಕ್ ನೀರಿನ ಸಾಂದ್ರ ತೆಯ ಸಾಮಥ್ರ್ಯವನ್ನು ತಡೆಯುವುದೇ ಅಥವಾ ಬೇರೆ ಏನಾದರೂ ಸಮಸ್ಯೆ ಇದೆಯೇ ಎಂದ ಅವರು ಪೈ ಪ್‍ಲೈನ್‍ಗಳ ಪೈಪ್‍ಗಳು ನೀರಿನ ಸಾಂದ್ರತೆಯ ಸಾಮಥ್ರ್ಯವನ್ನು ತಡೆಯುವವೇ ಎಂಬ ಅನುಮಾನ  ಮೂಡುತ್ತಿದ್ದು ಅದಕ್ಕಾಗಿಯೇ ಕಾರಣವೊಡ್ಡಿ ಕುಡಿಯುವ ನೀರು ಹರಿಸುತ್ತಿಲ್ಲ ಎಂದು ಅನುಮಾನ ವ್ಯಕ್ತವಾ ಗುತ್ತಿದೆ ಎಂದರು.

ಹಾದಿಹಳ್ಳಿ ಗ್ರಾಮಸ್ಥ ನಾರಾಯಣ್ ಮಾತನಾಡಿ ಸ್ಥಳೀಯವಾಗಿ ಕುಡಿಯುವ ನೀರಿನ ಸಮಸ್ಯೆ ಬಹಳ ಷ್ಟಿದೆ. ಇದೀಗ ಬರಗಾಲ ಆವರಿಸುತ್ತಿದ್ದು ಜನರು ಸೇರಿದಂತೆ ಜಾನುವಾರುಗಳಿಗೂ ಸಮಸ್ಯೆ ಉಂಟಾಗಲಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕುಡಿಯುವ ನೀರು ಒದಗಿಸಬೇಕು ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ರಾಮೇಗೌಡ, ಕಾಂತರಾಜು, ಮುಳ್ಳಂಡಪ್ಪ, ಚಂದ್ರಶೇ ಖರ್, ಹಾದಿಹಳ್ಳಿ ಗ್ರಾಮಸ್ಥರಾದ ಗಿರೀಶ್, ಪ್ರತಾಪ್, ಸತೀಶ್, ಯಶೋಧ ಚಂದ್ರೇಗೌಡ, ರಾಜೇಗೌಡ, ಶೇಷೇಗೌಡ, ದುಮ್ಮಣ್ಣಗೌಡ, ಈಶ್ವರಗೌಡ, ಗುರುಶಾಂತಪ್ಪ, ಯಶೋಧ, ದೇವಕಿ ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *