September 23, 2026
;
narayana guru

 

 

ಆಲ್ದೂರು ಪಟ್ಟಣದ ನಾರಾಯಣ ಗುರು ಸಮುದಾಯ ಭವನದಲ್ಲಿ ನಾರಾಯಣ ಗುರು ಮಲಯಾಳಂ ಸಮಿತಿ ವತಿಯಿಂದ ಭಾನುವಾರ ನಾರಾಯಣ ಗುರು ಜಯಂತೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮುಖ್ಯ ಭಾಷಣ ಮಾಡಿದ ನವೀನ್ ಗುರುಗಳ ತತ್ವ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು

ಸರ್ವರಿಗೂ ಒಂದೇ ನೀತಿ ತತ್ವದ ಸಂದೇಶವನ್ನು ಸಾರಿದ ಗುರುಗಳು, ಮೇಲ್ವರ್ಗದವರು  ಕೇಳವರ್ಗದವರ ಮೇಲೆ ನಡೆಸುತ್ತಿದ್ದ ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿ ಸಮಾಜದ ಪ್ರತಿಯೊಬ್ಬರಿಗೂ ಪೂಜಾ ಸ್ವಾತಂತ್ರ್ಯ ಸಿಗಬೇಕೆಂದು ಪ್ರತ್ಯೇಕ ದೇವಾಲಯಗಳು ನಿರ್ಮಿಸಿ ಸಮಾನತೆಯ ಮಹತ್ವವನ್ನು ಸಾರಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇಕಡ 85ಕ್ಕಿಂತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ನಾರಾಯಣ ಗುರು ಮಲಯಾಳಂ ಸಮಿತಿ ಅಧ್ಯಕ್ಷರಾದ ಶರತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷ ಸುದೇವ್, ಸದಸ್ಯರುಗಳಾದ ಅಭಿಲಾಶ್, ಪ್ರಭಾಕರ್, ಪರಮೇಶ್, ಕೃಷ್ಣ, ಶಶಿಧರ್, ಅವಿನಾಶ್, ಬಾಲಕೃಷ್ಣ ,ವಿಜಯ್, ಸಮುದಾಯದ ಮುಖಂಡರುಗಳು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *