September 2, 2026
;
bjp 1

 

 

ಚಿಕ್ಕಮಗಳೂರು ಟಿಪ್ಪು ನಗರದಲ್ಲಿ ಟಿಪ್ಪು  ಸುಲ್ತಾನ್ ಕಟೌಟ್ ಅಳವಡಿಸಿ, ಪಾಕಿಸ್ತಾನ ಪರ ಹಾಡು ಹಾಕಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.

ಚಿಕ್ಕಮಗಳೂರು ಇವರು ಚಿಕ್ಕಮಗಳೂರು ನಗರದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯನ್ನು ಉದ್ದೆಶಿಸಿ ಅವರು ಮಾತನಾಡಿದರು.

ಟಿಪ್ಪು ನಗರದಲ್ಲಿ   ಟಿಪ್ಪು ಸುಲ್ತಾನ್ ಕಟೌಟ್ ನಿರ್ಮಿಸಿ, ಪಾಕಿಸ್ತಾನ್ ಸೇನೆಯನ್ನು ಹೊಗಳುವ  ಅರ್ಥ ಬರುವ ಹಾಡನ್ನು ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿದ ರವಿ ಅವರು, ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನಿ ಮುಜಾಹಿದ್ದೀನ್ ಎಂದು ಹೇಳಿಕೊಳ್ಳುವ ಧೈರ್ಯ ಯಾರಿಂದ ಬಂದಿದೆ.

ಪಾಕಿಸ್ತಾನದ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಪಾಕಿಸ್ತಾನಕ್ಕೆ ಹೋಗಲಿ. ಇಲ್ಲಿದ್ದು ದೇಶದ್ರೋಹದ ಕೆಲಸ ಮಾಡುವುದನ್ನು ಸಹಿಸಿಕೊಳ್ಳಬಾರದು. ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ, ಕಾಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಲ್ಲ ಮುಸ್ಲಿಮರನ್ನೂ ಆರೋಪಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ರವಿ ಅವರು, ದೇಶದ್ರೋಹದ ಕೃತ್ಯಗಳನ್ನು ನಡೆಸುವವರನ್ನು ಮುಸ್ಲಿಂ ಸಮಾಜವೇ ಸಹಿಸಿಕೊಳ್ಳಬಾರದು ಎಂದು

ಈ ದ್ರೋಹಿಗಳನ್ನು ಮುಸ್ಲಿಂ ಸಮಾಜವೂ ಸಹಿಸಿಕೊಳ್ಳಬಾರದು ನೀವು  ಮೌನವಾಗಿರುವುದನ್ನು  ನೋಡಿದಾಗ ನಿಮ್ಮ ಬಗ್ಗೆ ಸಹಜವಾಗಿ ಅನುಮಾನ ಬರುತ್ತದೆ. ಕಾಂಗ್ರೆಸ್ ನವರು, ಸೆಕ್ಯುಲರ್‌ಗಳು ಈ ವಿಚಾರದಲ್ಲಿ ಏಕೆ ಬಾಯಿ ಬಿಡುತ್ತಿಲ್ಲ?

ಬಿಜೆಪಿಯನ್ನು ವಿರೋಧಿಸಿ ಹಾಡು ಹಾಕಿದ್ದಲ್ಲ, ಕಾಂಗ್ರೆಸ್ ನ್ನು ಬೆಂಬಲಿಸಿ ಹಾಡು ಹಾಕಿದ್ದಲ್ಲ; ಪಾಕಿಸ್ತಾನವನ್ನು ಬೆಂಬಲಿಸಿ ಹಾಡು ಹಾಕಿದ್ದು ಭಾರತಕ್ಕೆ, ಭಾರತೀಯರಿಗೆ ಸವಾಲು ಹಾಕಿದ್ದು, ಇದರಲ್ಲೂ ರಾಜಕಾರಣ ಮಾಡುವುದು. ದ್ರೋಹಿಗಳನ್ನು ಟೀಕಿಸಿದರೆ ವೋಟ್ ಬ್ಯಾಂಕ್ ಹೋಗುತ್ತದೆ ಎಂದು ಯೋಚಿಸುವುದು ಕೂಡ ಒಂದು ರೀತಿಯ ದೇಶದ್ರೋಹವೇ, ಭಾರತ ವಿಭಜನೆ ಏಕಾಏಕಿ ಸಂಭವಿಸಿದ್ದಲ್ಲ. ನಾವು ಬೇರೆ ಎಂಬ ಪ್ರತ್ಯೇಕತಾವಾದಿ ಮನೋಭಾವವನ್ನು ಬೆಳೆಸಿದ ಪರಿಣಾಮ ವಿಭಜನೆಯಾಯಿತು ಎಂದು ರವಿ ಅವರು ಹೇಳಿದರು.

ಭಯೋತ್ಪಾದನೆಯೂ ಮೊದಲು ಬಾಂಬ್, ಶಸ್ತ್ರಾಸ್ತ್ರ ಅಥವಾ ದಾಳಿ ರೂಪದಲ್ಲಿ ಆರಂಭವಾಗುವುದಿಲ್ಲ. ಮೊದಲು ಭಯೋತ್ಪಾದಕ ಮನಸ್ಥಿತಿಯ ವ್ಯಕ್ತಿಗಳನ್ನು ಸೃಷ್ಟಿಸಲಾಗುತ್ತವೆ. ನಂತರ ಅವರನ್ನು ಕಾರ್ಯಾಚರಣೆಗೆ ಬಳಸಲಾಗುತ್ತದೆ. ತಾಲಿಬಾನಿಗಳು ಯುದ್ಧಭೂಮಿಯಲ್ಲಿ ಸೃಷ್ಟಿಯಾಗಲಿಲ್ಲ: ಮದ್ರಸಗಳಲ್ಲಿ ಸೃಷ್ಟಿಯಾಗಿ ನಂತರ ಯುದ್ಧಭೂಮಿಗೆ ಹೋದರು. ಹಾಗೆಯೇ ಭಯೋತ್ಪಾದಕರ ಮೈಂಡ್ ಸೆಟ್ ಮೊದಲು ಸೃಷ್ಟಿಸಿ, ನಂತರ ಅವರನ್ನು ಗ್ರೌಂಡ್‌ಗೆ ಕಳುಹಿಸುವ ಕೆಲಸ ನಡೆಯುತ್ತದೆ ಎಂದು ರವಿ ಅವರು ಹೇಳ ವರು.

ಟಿಪ್ಪು ಸುಲ್ತಾನ್ ಅವರನ್ನು “ಮತಾಂಧ” ಎಂದು ಬಣ್ಣಿಸಿದ ಅವರು, ಟಿಪ್ಪು ಆಡಳಿತದ ಅವಧಿಯಲ್ಲಿ ಲಕ್ಷಾಂತರ ಹಿಂದೂಗಳ ಮತಾಂತರ, ಹತ್ಯೆ ಹಾಗೂ ತ್ರಿಶ್ಚಿಯನ್ನರ ಮೇಲಿನ ದೌರ್ಜನ್ಯ ನಡೆದಿತ್ತು ಎಂದು ಆರೋಪಿಸಿದರು.  ಇಂತಹ ವ್ಯಕ್ತಿಯ 40 ಅಡಿ ಕಟೌಟ್‌ಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಅನುಮತಿ ನೀಡುತ್ತದೆ. ಆದರೆ ಗಣಪತಿ ಪ್ರತಿಷ್ಠಾಪನೆಗೆ 108 ವಿಘ್ನಗಳನ್ನು ಹಾಕುತ್ತಾರೆ.

ಪಾಕಿಸ್ತಾನ ಪರ ಘೋಷಣೆಗಳು, ಭಾರತ ವಿರೋಧಿ ಮನೋಭಾವನೆ ಮತ್ತು ಧಾರ್ಮಿಕ ದ್ವೇಷದ ಘಟನೆಗಳನ್ನು ಪ್ರತ್ಯೇಕ ಘಟನೆಗಳಾಗಿ ನೋಡಬಾರದು. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಕಠಿಣವಾಗಿ ಕ್ರಮ ಜರುಗಿಸಬೇಕು ಎಂದರು.

ತಾಲ್ಲೂಕು ಕಚೇರಿ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಪ್ರದೇಶಕ್ಕೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದ ಬಳಿಕ, ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಓಂಕಾರೇಶ್ವರ ದೇಗುಲದ ಬಳಿ ಬಹಿರಂಗ ಸಭೆ ನಡೆಸಲಾಯಿತು

ಯುವ ಬ್ರಿಗೇಡ್ ಸ್ಥಾಪಕ, ಚಕ್ರವರ್ತಿ ಸೂಲಿಬೆಲೆ ದಿಕ್ಕೂಚಿ ಭಾಷಣ ಮಾಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಇಸ್ಲಾಂ ಧರ್ಮ ಶ್ರೇಷ್ಠ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಅವರಿಗೆ ಇಸ್ಲಾಂ ಎಂದರೆ ಏನು ಎಂಬುದು ಗೊತ್ತಿಲ್ಲ. ಒಬ್ಬ ಸಚಿವರಿಂದ ಇಂತಹ ಮಾತು ಸರಿಯಲ್ಲ. ಮುಸ್ಲಿಂ ಮತಗಳನ್ನು ಪಡೆಯುವುದು ಅವರಿಗೆ ಅನಿವಾರ್ಯವಾಗಿದೆ. ಆದ್ದರಿಂದ ಪಾಕಿಸ್ತಾನ ಶ್ರೇಷ್ಠ ರಾಷ್ಟ್ರ ಎಂದರೂ ಆಶ್ಚರ್ಯ ಪಡಬೇಕಿಲ್ಲ. ಮನೆಗೆ ಹೋದರೆ ವರಮಹಾಲಕ್ಷ್ಮಿ ಪೂಜೆ ಮಾಡುತ್ತಾರೆ. ಹೊರಗೆ ಬಂದರೆ ಇಂತಹ ಹೇಳಿಕೆ ನೀಡುತ್ತಾರೆ’ ಎಂದು ಟೀಕಿಸಿದರು.

ಮೆರವಣಿಗೆ ವೇಳೆ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ನೂರಾರು  ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;