September 12, 2026
;
suddi-3

 

 

ವಿಶ್ವಕರ್ಮ ಯೋಜನೆ ಸದ್ಬಳಕೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ನಶಿಸುತ್ತಿರುವ ಪರಂಪಾರಿಕ ಕುಲಕಸುಬುಗಳನ್ನು ಉಳಿಸುವಲ್ಲಿ ಫಲಾನುಭವಿಗಳು ಶ್ರಮಿಸುತ್ತಿದ್ದಾರೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ಚಿಕ್ಕಮಗಳೂರು ನಗರದ ಯೂನಿಯನ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಬುಧವಾರ ಎಂಎಸ್‍ಎಂಇ ಅಭಿವೃಧ್ದಿ ಮತ್ತು ಸೌಲಭ್ಯ ಕಚೇರಿ ವತಿಯಿಂದ ಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಬ್ರ್ಯಾಂ ಡಿಂಗ್ ಮತ್ತು ಮಾರ್ಕೆಂಟಿಗ್‍ನ ಒಂದು ದಿನದ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದರು.

ವಿಶ್ವಕರ್ಮ ಯೋಜನೆಯಡಿ 6639 ಫಲಾನುಭವಿಗಳಿಗೆ ತರಬೇತಿ ನೀಡಿದ್ದು, ಈ ಪೈಕಿ 2572 ಮಂ ದಿಗೆ 2209 ಲಕ್ಷ ಸಾಲ ಮಂಜೂರಾಗಿದ್ದು 2479 ಫಲಾನುಭವಿಗಳು ರೂ.1859 ಲಕ್ಷ ಸಾಲವನ್ನು ಬ್ಯಾಂಕ್ ಮೂಲಕ ಪಡೆದಿರುತ್ತಾರೆ. ಅಂಚೆ ಕಚೇರಿ ಮೂಲಕ 3507 ಮಂದಿಗೆ ಟೂಲ್‍ಕಿಟ್ ವಿತರಿಸಿದ್ದು 626 ಮಂ ದಿಗೆ ಟೂಲ್ ಕಿಟ್ ವಿತರಿಸಲು ಬಾಕಿಯಿದೆ ಎಂದರು.

ನಶಿಸುತ್ತಿರುವ ಸಾಂಪ್ರದಾಯಿಕ ಕುಲಕಸಬುಗಳಿಗೆ ಹೊಸ ಉತ್ತೇಜನ, ಮಾರುಕಟ್ಟೆ ನಿರ್ಮಾಣ ಹಾಗೂ ನಾವಿನ್ಯತೆ ತರುವ ಉದ್ದೇಶದಿಂದ ಪ್ರಧಾನ ಮಂತ್ರಿ ವಿಶ್ವಕರ್ಮ ಮಹಾತ್ವಾಕಾಂಕ್ಷಿ ಯೋಜನೆ ಅನುಷ್ಟಾನಗೊ ಳಿಸಿ ಮೂಲಕಸುಬಿಗೆ ಒತ್ತು ನೀಡುತ್ತಿದೆ ಎಂದು ಹೇಳಿದರು.

ವಿಶ್ವಕರ್ಮ ಯೋಜನೆ ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆಗಳಲ್ಲೊಂದು. ವಿಶ್ವಕರ್ಮ ಎಂ ದರೆ ಇಡೀ ದೇಶಕ್ಕೆ ಕರಕುಶಲತೆ ಪರಿಚಯಿಸಿದ ಹಿನ್ನೆಲೆಯಲ್ಲಿ ಶ್ರೇಷ್ಟ ಸಂತ ವಿಶ್ವಕರ್ಮರ ಹೆಸರನ್ನು ಯೋ ಜನೆಗೆ ಇರಿಸಲಾಗಿದ್ದು, ಅಲ್ಲದೇ ವಿಶ್ವಕರ್ಮ ಹೆಸರು ಒಂದು ಸಮುದಾಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಮರಗೆಲಸ, ಕುಂಬಾರಿಕೆ, ಟೈಲರಿಂಗ್, ಕ್ಷೌರಿಕ ಸೇರಿದಂತೆ ಪರಂಪಾರಿಕ 18 ಕುಲಕಸುಬುಗಳಿಗೆ ಹೊಸ ಕಾಯಕಲ್ಪ ಕೊಡಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದೆ. ಆಧು ನಿಕ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಮಾದರಿಯ ತಂತ್ರಜ್ಞಾನಗಳ ಮುಖೇನಾ ಅಲಂಕಾರಿಕ ವಸ್ತುಗಳನ್ನಾಗಿ ತ ಯಾರಿಸಿ ಮಾರುಕಟ್ಟೆ ವ್ಯವಸ್ಥೆಗೆ ಯೋಜನೆ ಶಕ್ತಿ ತುಂಬುತ್ತಿದೆ ಎಂದರು.

ವಿಶ್ವಕರ್ಮ ಯೋಜನೆಗೆ ಸಾಲಸೌಲಭ್ಯ ಒದಗಿಸುವ ಉದ್ದೇಶದಿಂದ ಪ್ರಧಾನಿಗಳು 12 ಸಾವಿರ ಕೋಟಿ ರೂ.ಗಳನ್ನು ಬ್ಯಾಂಕ್‍ಗಳಿಗೆ ಭದ್ರತೆ ವ್ಯವಸ್ಥೆ ನೀಡಿದೆ. ಪ್ರಮುಖವಾಗಿ ಬ್ಯಾಂಕ್‍ನ ಸಾಲಕ್ಕೆ ಸಿವಿಲ್ ಎಂಬುದು ಬಹುದೊಡ್ಡ ಅಸ್ತ್ರವಾಗಿದ್ದು, ಈ ದಿಸೆಯಲ್ಲಿ ವಿಶ್ವಕರ್ಮ ಯೋಜನೆಗೆ ಸಿವಿಲ್‍ನ್ನು ಕಡ್ಡಾಯವಾಗಿ ಹೊರಗಿಡ ಲಾಗಿದೆ ಎಂದು ಹೇಳಿದರು.

ವಿಶ್ವಕರ್ಮ ಯೋಜನೆ ನೀಡಿದ ಗುಣಮಟ್ಟದ ಉಪಕರಣಗಳು ಬೇರೆ ಯಾವುದೇ ಇಲಾಖೆಗಳು ನೀಡಿ ಲ್ಲದಂತಿದೆ. ಶ್ರಮವಹಿಸಿ ದುಡಿಯುವ ಕೈಗಳಿಗೆ ವಿಶ್ವಕರ್ಮ ಯೋಜನೆ ಕೈಬಲಪಡಿಸಿದೆ. ಅಲ್ಲದೇ ಕೌಶಲ್ಯಗ ಳ ಮೂಲಕ ಜನರನ್ನು ಸ್ವಾವಲಂಬಿ ಬದುಕಿಗೆ ಸ್ಪೂರ್ತಿಯಾಗಿದೆ ಎಂದು ಹೇಳಿದರು.

ಎಂ.ಎಸ್.ಎಂ.ಇ. ಸಹಾಯಕ ನಿರ್ದೇಶಕ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಉದ್ಯಮಶೀಲ ತಾ ಅಭಿವೃದ್ದಿ ಮತ್ತು ಬೆಲೆ ನಿಗಧಿ ತಂತ್ರಗಳು, ಮಾರಕಟ್ಟೆ ಪ್ರವೃತ್ತಿ, ಮಾರಾಟ ತಂತ್ರಗಳು, ಹಣಕಾಸು ಮತ್ತು ಡಿಜಿಟಲ್ ಸಾಕ್ಷರತೆ, ಆನ್‍ಲೈನ್ ಮಾರಾಟ, ಇ-ಕಾಮರ್ಸ್, ಬ್ರ್ಯಾಂಡಿಂಗ್ ಅಂಡ್ ಪ್ಯಾಕೇಜಿಂಗ್ ಹಾಗೂ ಎಐ ತರಬೇತಿ, ಎಂಎಸ್‍ಎಂಇ ಸಚಿವಾಲಯದ ಯೋಜನೆಗಳು ಹಾಗೂ ಉದ್ಯಮ ನೋಂದಣಿ ಮೂಲ ಉದ್ದೇಶವಾಗಿದೆ ಎಂದರು.

ವಿಶ್ವಕರ್ಮ ಜಿಲ್ಲಾ ಸಮಿತಿ ಸದಸ್ಯ ರವೀಂದ್ರ ಬೆಳವಾಡಿ ಮಾತನಾಡಿ ದೇಶದಲ್ಲಿ ವಿಶ್ವಕರ್ಮ ಯೋಜನೆ ಸ್ವಾವಲಂಬಿ ಬದುಕಿಗೆ ಆಧಾರವಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆ ಅದೆಷ್ಟೋ ಮಂದಿಗೆ ಬಡತನ ರೇಖೆಯಿಂದ ಮೇಲೆತ್ತುವ ಕಾರ್ಯ ಮಾಡುವ ಮೂಲಕ ಆರ್ಥಿಕ, ಸಾಮಾಜಿಕ ಹಾಗೂ ಸ್ವ ಉದ್ಯೋಗಕ್ಕೆ ಪ್ರೇರಣೆಯಾಗಿದೆ ಎಂದು ಹೇಳಿದರು.

ಇದೇ ವೇಳೆ ವಿಶ್ವಕರ್ಮ ಫಲಾನುಭವಿಗಳಿಗೆ ವಿಶ್ವಕರ್ಮ ಯೋಜನಾ ಜಿಲ್ಲಾ ಸಂಯೋಜಕ ರಾಕೇಶ್ ತರಬೇತಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ರವಿ ಪ್ರಸಾದ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಪ್ರಭು, ಜಿಲ್ಲಾ ಕೌಶಲ್ಯಾಭಿವೃದ್ದಿ ಕೇಂದ್ರದ ಅಧಿ ಕಾರಿ ರಾಮಚಂದ್ರ, ದಿಶಾ ಕಮಿಟಿ ಸದಸ್ಯ ಮಣಿಕಂಠ, ಆರ್‍ಸಿಟಿ ನಿರ್ದೇಶಕ ಶ್ರೀಪ್ರಸಾದ್ ಶೇಟ್ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;