September 12, 2026
;
alduru 1

 

 

ತೀವ್ರವಾಗಿ ಹದಗೆಟ್ಟಿದ್ದ,ಕುಂದೂರು ಚಂಡಗೋಡು ವಗರ್ ರಸ್ತೆ ಕಾಮಗಾರಿಗೆ ಗುರುವಾರ ಶಾಸಕಿ ನಯನ ಮೋಟಮ್ಮ ಭೂಮಿ ಪೂಜೆಯನ್ನು ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ;  ಈ ಭಾಗದ ಹದಗೆಟ್ಟ ರಸ್ತೆಗಳ ಪರಿಸ್ಥಿತಿಯನ್ನು ಪಿಡಬ್ಲ್ಯೂಡಿ ಇಲಾಖೆಯ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲು ಸ್ವತಹ ಅವರನ್ನೇ ವೀಕ್ಷಣೆಗೆ ಕರೆತಂದಿದ್ದೆ, ಮೂರು ಬಾರಿ ಈ ರಸ್ತೆಯ ಪರಿಶೀಲನೆಗೆ ಮಂತ್ರಿಗಳು ಭೇಟಿ ನೀಡಿದ್ದು, ಅನುದಾನ ಮಾತ್ರ ಬಂದಿರಲಿಲ್ಲ, ಬಳಿಕ ಅವರೇ ಈ ರಸ್ತೆ ಕಾಮಗಾರಿಗೆ 4 ಕೋಟಿ ಅನುದಾನವನ್ನು ಒದಗಿಸಿದ್ದು, ಎಲ್ಲಾ ಕೆಲಸಗಳು ನಡೆಯಬೇಕಾದರೆ ಉತ್ತಮ ಗಳಿಗೆ ಕೂಡಿ ಬರಬೇಕಾಗುತ್ತದೆ ಅದರಂತೆ ಇಂದು ಅನುದಾನ ಬಿಡುಗಡೆಯಾಗಿದ್ದು, ತೀವ್ರವಾಗಿ ಹದಗೆಟ್ಟು ದುಸ್ತರವಾಗಿರುವ ಆಯ್ದ ಭಾಗಗಳಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಾಬಿರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಹೆಚ್ ಎಸ್, ಹೋಬಳಿ ಅಧ್ಯಕ್ಷ ಕೆಳಗೂರು ಪೂರ್ಣೇಶ್, ಕಾರ್ಯದರ್ಶಿ ರವಿಚಂದ್ರ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಉಮೇಶ್ ದೇವರಹಳ್ಳಿ, ಮುಖಂಡರಾದ ವಸಂತ್, ಯೋಗೇಶ್ ಸತ್ತಿಹಳ್ಳಿ, ಪಿಡಬ್ಲ್ಯೂಡಿ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಮಲ್ಲಿಕಾರ್ಜುನ್,ಬೂತ್ ಅಧ್ಯಕ್ಷ ರುದ್ರಯ್ಯ,

ಅರ್ಚಕ ಚಂದ್ರನಾಥ ತೋಳೂರು, ಕಾರ್ಯಕರ್ತರು ಗ್ರಾಮಸ್ಥರುಗಳು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;