offee

 

 

ಕರ್ನಾಟಕ ಗ್ರೋವರ್ಸ್ ಫೆಡರೇಷನ್ ಹಾಗೂ ಅದರ ಅಂಗಸಂಸ್ಥೆಗಳು ಬೆಂಗಳೂರಿನ ವಿಧಾನಸೌಧದಲ್ಲಿ ಮಾನ್ಯ ಕಂದಾಯ ಸಚಿವರಾದ  ಆರ್.ಅಶೋಕ್‍ರವರನ್ನು ಭೇಟಿಮಾಡಿ ಸರ್ಕಾರಿ ಒತ್ತುವರಿ ಜಮೀನ್ನು ಗುತ್ತಿಗೆ ಆಧಾರದಲ್ಲಿ ನೀಡುವ ಸಂಬಂಧಪಟ್ಟಂತೆ ಬೆಳಗಾಂ ಅಧಿವೇಶನ ನಡೆಯುವ ಸಂದರ್ಭದಲ್ಲಿ ಬಿಲ್‍ಪಾಸ್ ಮಾಡಬೇಕೆಂದು ಮನವಿ ಮಾಡಲಾಯಿತು.

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ  ಜೀವರಾಜುರವರು, ಮೂಡಿಗೆರೆ ಕ್ಷೇತ್ರದ ಶಾಸಕರಾದ  ಎಂ.ಪಿ.ಕುಮಾರಸ್ವಾಮಿ, ಸಕಲೇಶಪುರ-ಆಲೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ  ಹೆಚ್.ಎಂ.ವಿಶ್ವನಾಥ್‍ರವರು ಸಹಾ ಇದ್ದು, ಮಾನ್ಯ ಕಂದಾಯ ಸಚಿವರಿಗೆ ಒತ್ತುವರಿ ವಿಚಾರದ ಬಗ್ಗೆ ಮನವರಿಕೆ ಮಾಡಿಕೊಟ್ಟು ಒತ್ತುವರಿ ಮಾಡಿದಂತಹ ಎಲ್ಲಾ ಬೆಳೆಗಾರರಿಗೂ ಗುತ್ತಿಗೆ ಆಧಾರದಲ್ಲಿ ನೀಡಭೇಕೆಂದು ಮನವಿ ಮಾಡಲಾಯಿತು.

ಸ್ಪಂದಿಸಿದ ಮಾನ್ಯ ಕಂದಾಯ ಸಚಿವರು ಮುಂದೆ ಬರುವ ಅಧಿವೇಶನದಲ್ಲಿ ಸರ್ಕಾರಿ ಒತ್ತುವರಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ 30 ವರ್ಷದವರೆಗೆ ನೀಡುವುದಾಗಿ ಭರವಸೆ ನೀಡಿದ್ದು, ಎಷ್ಟು ಎಕರೆಗೆ ಮತ್ತು ಎಕರೆಗೆ ಎಷ್ಟು ಬೆಲೆ ಎಂಬುದನ್ನು ಈಗಾಗಲೇ ಚರ್ಚೆ ಮಾಡಿದ್ದೇನೆ. ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡಿಕೊಡುವುದಾಗಿ ತಿಳಿಸಿರುತ್ತಾರೆ.

ಇದಾದ ನಂತರ ಕಾಫಿ ಮಂಡಳಿ ಕಾರ್ಯದರ್ಶಿ ಡಾ|| ಕೆ.ಜಿ. ಜಗದೀಶ್‍ವರವನ್ನು ಭೇಟಿಮಾಡಿ ಅಕಾಲಿಕ ಮಳೆಯಿಂದ ಕಾಫಿಗೆ ಆಗುತ್ತಿರುವ ತೊಂದರೆ ಬಗ್ಗೆ ಮನವರಿಕೆ ಮಾಡಿಕೊಟ್ಟು ಕೇಂದ್ರ ಸರ್ಕಾರಕ್ಕೆ ಇದನ್ನು ತಿಳಿಸಬೇಕೆಂದು ಕೇಳಿಕೊಂಡಾಗ ಕಾಫಿ ಬೆಳೆಗಾರರ ಪರವಾಗಿ ಕೇಂದ್ರ ಸರ್ಕಾಕ್ಕೆ ಮನವಿ ಮಾಡುವುದಾಗಿ ತಿಳಿಸಿರುತ್ತಾರೆ.

ನಂತರ ಕಾಫಿ ಬೆಳೆಗಾರರ 10 ಹೆಚ್.ಪಿ.ವರೆಗಿನ ವಿದ್ಯುತ್ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡುವ ವಿಚಾರ ಪ್ರಸ್ತಾಪವಾಗಿ 10 ಹೆಕ್ಟೇರ್‍ ವರೆಗಿನ ಸಣ್ಣ ಬೆಳೆಗಾರಿಗೆ ಭೂ ಹಿಡುವಳಿ ಪತ್ರದ ಆಧಾರದ ಮೇಲೆ ಸರ್ಟಿಫಿಕೇಟ್ ಕೊಡಲು ಕಾಫಿ ಮಂಡಳಿಯಿಂದ ಮಾಡಿಕೊಡುವುದಾಗಿ ತಿಳಿಸಿರುತ್ತಾರೆ.

ಈ ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಪಧಾದಿಕಾರಿಗಳು, ನಿರ್ದೇಶಕರುಗಳು ಮತ್ತು ಹಾಸನ, ಚಿಕ್ಕಮಗಳೂರ, ಕೊಡಗು ಜಿಲ್ಲೆಯ ಎಲ್ಲಾ ಎಲ್ಲ ಸ್ಥಳೀಯ ಬೆಳೆಗಾರರ ಸಂಘಟನೆಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಬೆಳೆಗಾರರು ಸೇರಿ ಒಟ್ಟು 120 ಜನ ಬೆಳೆಗಾರರು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ