sachethana

 

 

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೇಟಿಕ್ ಸ್ಪರ್ಧೆಯಲ್ಲಿ 14 ವರ್ಷ ಒಳಗಿನ ವಿಭಾಗದಲ್ಲಿ ಮೂಡಿಗೆರೆ ಸೈಂಟ್ ಮಾರ್ಥಾಸ್ ಪ್ರೌಢಶಾಲೆಯ ಮೊಹಮ್ಮದ್ ರುಮಾನ್ ರಜಾ 100ಮೀಟರ್ ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ರುಮಾನ್ 100ಮೀಟರ್ ಓಟವನ್ನು 12.04 ಸೆಕೆಂಡ್ ನಲ್ಲಿ ಗುರಿಮುಟ್ಟಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಇವರು ಮೂಡಿಗೆರೆ ಪಟ್ಟಣದ ಇಫ್ತಿಕಾರ್ ಹುಸೇನ್ ಎಂಬುವವರ ಪುತ್ರ. ಮೂಡಿಗೆರೆ ಸೈಂಟ್ ಮಾರ್ಥಾಸ್ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.

ಮೊಹಮ್ಮದ್ ರುಮಾನ್ ರಜಾ ಸಾಧನೆಯನ್ನು ಗುರುತಿಸಿ ಮೂಡಿಗೆರೆ ಸಚೇತನ ಯುವ ಸಂಘದಿಂದ ಸನ್ಮಾನಿಸಲಾಗಿದೆ.

ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಶಾಲೆಗೆ ತೆರಳಿ ಸಾಧನೆ ಮಾಡಿದ ವಿದ್ಯಾರ್ಥಿಯನ್ನು ಆತ್ಮೀಯವಾಗಿ ಸನ್ಮಾನಿಸಿ ಪ್ರೋತ್ಸಾಹಿಸಿದ್ದಾರೆ.

ಈ ಸಂದರ್ಭದಲ್ಲಿ ಸಚೇತನ ಯುವ ಸಂಘದ ಅಧ್ಯಕ್ಷ ರವಿರಾಜ್ ಅರಸ್, ವಿಶ್ವಕುಮಾರ್, ನಿಶ್ಚಲ್, ಫ್ರಾನ್ಸೀಸ್, ಮಂಜು ಪಟೇಲ್, ಮಂಜುನಾಥ್, ಟಿ.ಹರೀಶ್, ಶಿವು, ಶಾಲೆಯ ಮುಖ್ಯೋಪಾದ್ಯಾಯಿನಿ ಸಿಸ್ಟರ್ ಗೀತಾ, ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ