chirag

 

 

ನಿನ್ನೆ ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ಲೋಕಾರ್ಪಣೆ ಮಾಡಿದ  ನಂತರ ಮಂಡ್ಯದಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಮಂಡ್ಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅವರನ್ನು ನಮ್ಮ ಚಿಕ್ಕಮಗಳೂರು ಜಿಲ್ಲೆಯ ಯುವನಾಯಕ  ಸ್ವಾಗತಿಸಿದ ಪೋಟೋ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿತ್ತು.
ಮೋದಿಯವರನ್ನು ಸ್ವಾಗತಿಸಿ ಗಮನ ಸೆಳೆದ ಯುವ ಮುಖಂಡ ಚಿರಾಗ್ ಗೌಡ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿ ಕೊಟ್ರಕೆರೆ ಗ್ರಾಮದವರು.

ಎತ್ತಣ ಕೊಟ್ರಕೆರೆ, ಎತ್ತಣ ಮಂಡ್ಯ, ಎತ್ತಣ ಮೋದಿ ಎಂದು ಅನೇಕರಿಗೆ ಪ್ರಶ್ನೆಗಳು ಕಾಡುತ್ತಿರಬಹುದು.

ಬಿ.ಜೆ.ಪಿ. ಕಾರ್ಯಕರ್ತರಾಗಿರುವ ಚಿರಾಗ್ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯ ವಿಸ್ತಾರಕರನ್ನಾಗಿ ನೇಮಿಸಲಾಗಿದೆ. ಚಿರಾಗ್ ಅಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಪರವಾಗಿ ಸಂಘಟನೆ ಮಾಡುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ವಿಸ್ತಾರಕ ಹುದ್ದೆ ಬಹು ಜವಾಬ್ದಾರಿಯುತವಾಗಿದ್ದು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿಗೆ ಹೆಗಲು ಕೊಟ್ಟು ಮಂಡ್ಯ ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳಿಂದ ಚಿರಾಗ್ ಬಿ.ಜೆ.ಪಿ. ಪರವಾಗಿ ಕೆಲಸ ಮಾಡುತ್ತಿದ್ದಾರೆ.

ಮಂಡ್ಯ ಜಿಲ್ಲೆ ಸೇರಿದಂತೆ ಹಳೇಮೈಸೂರು ಭಾಗದಲ್ಲಿ ಈ ಬಾರಿ ತನ್ನ ಛಾಪು ಮೂಡಿಸಬೇಕು ಎಂದು ಕಾರ್ಯತಂತ್ರ ನಡೆಸುತ್ತಿರುವ ಬಿ.ಜೆ.ಪಿ. ರಾಜ್ಯದ ನಾನಾ ಭಾಗಗಳಿಂದ ಪಕ್ಷ ನಿಷ್ಠ ಸಕ್ರಿಯ ಯುವ ಕಾರ್ಯಕರ್ತರನ್ನು ಮಂಡ್ಯ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ವಿಸ್ತಾರಕರನ್ನಾಗಿ ನೇಮಿಸಿದೆ. ಅದರ ಭಾಗವಾಗಿ ಮೂಡಿಗೆರೆ ಯುವಮೋರ್ಚಾ ಪದಾಧಿಕಾರಿಯಾಗಿರುವ  ಚಿರಾಗ್ ಗೌಡ ಅವರನ್ನು ಮಂಡ್ಯ ಜಲ್ಲೆಯಲ್ಲಿ ವಿಸ್ತಾರಕರನ್ನಾಗಿ ನೇಮಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯಕ್ಕೆ ಭೇಟಿ ನೀಡಿದಾಗ ಅವರನ್ನು ಸ್ವಾಗತಿಸಿದ ತಂಡದಲ್ಲಿ ಚಿರಾಗ್ ಒಬ್ಬರಾಗಿದ್ದಾರೆ. ಚಿರಾಗ್ ಮೋದಿಯವರಿಗೆ ನಮಸ್ಕಾರ ಮಾಡಿದ್ದು ಮೋದಿಯವರು ಚಿರಾಗ್ ಅವರತ್ತ ದೃಷ್ಟಿನೆಟ್ಟು ಪ್ರತಿನಮಸ್ಕಾರ ಮಾಡಿರುವ ಪೋಟೋ ನಿನ್ನೆ ವೈರಲ್ ಆಗಿದೆ.

ಚಿರಾಗ್ ಮೋದಿಯವರಿಗೆ ಮುಖಾಮುಖಿಯಾಗಿರುವ ಪೋಟೋವನ್ನು ನೋಡಿ ಅವರ ಸ್ನೇಹಿತರು, ಬಂಧುಗಳು, ಪರಿಚಿತರು ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶುಭಾಶಯಗಳ ಮಹಾಪೂರ ಹರಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ