boycat

 

 

 ದೇಶದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ   ವಿರೋಧ ಪಕ್ಷದ ಮೈತ್ರಿಕೂಟ ‘ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್’ (I.N.D.I.A) ಈಗ ದೇಶದ 14 ಟಿವಿ ಆ್ಯಂಕರ್‌ಗಳನ್ನು ಬಹಿಷ್ಕರಿಸಿದೆ.

ಮುಂಬೈ ನಲ್ಲಿ ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದಲ್ಲಿ ಬುಧವಾರ ನಡೆದ ಸಮನ್ವಯ ಸಮಿತಿಯ ಮೊದಲ ಸಭೆಯಲ್ಲಿ  ಮೈತ್ರಿಕೂಟ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಈ 14 ಟಿ.ವಿ. ಆಂಕರ್ ಗಳು ತಮ್ಮ ಕಾರ್ಯಕ್ರಮಗಳಲ್ಲಿ ಸದಾ ಬಿ.ಜೆ.ಪಿ. ಪರವಾಗಿ ವಕಾಲತ್ತು ವಹಿಸುತ್ತಿದ್ದು, ಮಾಧ್ಯಮ ಧರ್ಮವನ್ನು ಪಾಲಿಸುತ್ತಿಲ್ಲ. ವಾಸ್ತವವನ್ನು ಮರೆಮಾಚಿ ನರೇಂದ್ರ ಮೋದಿಯವರನ್ನು ವೈಭವಿಕರಿಸುವ ಕೆಲಸ ಮಾಡುತ್ತಿವೆ. ಕಾಂಗ್ರೇಸ್ ಸೇರಿದಂತೆ ಎನ್.ಡಿ.ಎ. ವಿರೋಧಿ ಪಕ್ಷಗಳನ್ನು ಸದಾ ಟೀಕೆ ಮಾಡುತ್ತಾರೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ವಾಸ್ತವವಾಗಿ, ಮಾಧ್ಯಮದ ಒಂದು ವಿಭಾಗವು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ವಿರೋಧ ಪಕ್ಷಗಳು ಹಲವು ಬಾರಿ ಆರೋಪಿಸಿವೆ. ರಾಹುಲ್ ಗಾಂಧಿಯವರ ‘ಭಾರತ್ ಜೋಡೋ’ ಭೇಟಿಗೆ ಮಾಧ್ಯಮಗಳು ಅಗತ್ಯ ಪ್ರಸಾರವನ್ನು ನೀಡಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಇಂಡಿಯಾ ಮೈತ್ರಿಕೂಟದಿಂದ ಬಹಿಷ್ಕರಿಸಲ್ಪಟ್ಟ ಟಿ.ವಿ. ಆಂಕರ್ ಗಳು ಮತ್ತು ಅವರು ಪ್ರತಿನಿಧಿಸುತ್ತಿರುವ ಚಾನಲ್ ಗಳ ಪಟ್ಟಿ ಹೀಗಿದೆ.

* ಅದಿತಿ ತ್ಯಾಗಿ (Bharat Express)
* ಅಮನ್ ಚೋಪ್ರಾ (Network 18)
* ಅಮಿಶ್ ದೇವಗನ್  (News18)
* ಆನಂದ ನರಸಿಂಹನ್ (CNN-News18)
* ಅರ್ನಾಬ್ ಗೋಸ್ವಾಮಿ(Republic TV)
* ಅಶೋಕ್ ಶ್ರೀವಾಸ್ತವ (DD News)
* ಚಿತ್ರಾ ತ್ರಿಪಾಠಿ (AajTak)
* ಗೌರವ್ ಸಾವಂತ್ (AajTak)
* ನಾವಿಕ ಕುಮಾರ್ (Times Now)
* ಪ್ರಾಚಿ ಪರಾಶರ (India TV)
* ರೂಬಿಕಾ ಲಿಯಾಕತ್ (Bharat 24)
* ಶಿವ ಆರೂರ್ (AajTak)
* ಸುಧೀರ್ ಚೌಧರಿ (AajTak)
* ಸುಶಾಂತ್ ಸಿನ್ಹಾ (Times Now Navbharat)

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ