ಗೋಹತ್ಯೆ ನಿಷೇಧ ಮತ್ತು ಗೋಮಾಂಸ ಮಾರಾಟಕ್ಕೆ ನಿಷೇಧವಿದ್ದರೂ ಸಹ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುವ ಪ್ರಕರಣಗಳು ನಡೆಯುತ್ತಲೇ ಇವೆ. ಗೋಮಾಂಸ ಮಾರಾಟ ಮಾಡಲು ಅನೇಕ ಅನೇಕ ರೀತಿಯ ವಾಮಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.
ಇಂತಹುದೇ ಒಂದು ಪ್ರಕರಣ ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರವಾಸೆ ಗ್ರಾಮದಲ್ಲಿ ನಡೆದಿದೆ.
ದಿನಾಂಕ;16/10/2023 ರಂದು ಮಲ್ಲಂದೂರು ಠಾಣಾ ವ್ಯಾಪ್ತಿಯ ಶಿರವಾಸೆ ಗ್ರಾಮದ ಮಸೀದಿ ಹತ್ತಿರ ಕೆಎ-18-ಸಿ-0581 ನಂಬರಿನ ಆಪೇ ಅಟೋದಲ್ಲಿ ಐಸ್ ಕ್ರಿಂ ಬಾಕ್ಸ್ ನಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಮುಜೀಬ್ ಬಿನ್ ರಹೀಮ್ ಸಾಬ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಕಲ್ಲುದೊಡ್ಡಿ ಶಾಂತಿನಗರ ವಾಸಿಯಾದ ಮುಜೀಬ್ ನನ್ನು ವಶಕ್ಕೆ ಪಡೆದು ಅರೋಪಿತನು ಅಕ್ರಮವಾಗಿ ಹೊಂದಿದ್ದ 5000/- ರೂ ಬೆಲೆಬಾಳುವ 20 ಕೆ.ಜಿ ದನದ ಮಾಂಸವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿತನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಕಾರ್ಯಚರಣೆಯಲ್ಲಿ ಮಲ್ಲಂದೂರು ಠಾಣಾ ಪಿ.ಎಸ್.ಐ. ಶ್ರೀಮತಿ ನೇತ್ರಾವತಿ ಹಾಗೂ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.



