ಮೂಡಿಗೆರೆ ತಾಲೂಕಿನ ಗಿರಿಜನ ಹಸಲರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಇತೀಚೆಗೆ ನಮ್ಮ ಸಂಘದ ಪ್ರಭಾರಿ ಅಧ್ಯಕ್ಷ ದೇಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಅಧ್ಯಕ್ಷರಾಗಿ ಕೆ.ಟಿ.ಪೂವಪ್ಪ ಹಾಗೂ ಕಾರ್ಯದರ್ಶಿಯಾಗಿ ಹರೀಶ್ ಸಬ್ಬೇನಹಳ್ಳಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೂತನ ಅಧ್ಯಕ್ಷ ತನ್ನ ಅವಧಿಯಲ್ಲಿ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಸದಸ್ಯತ್ವ ನೊಂದಣಿ, ಸಮುದಾಯದ ಮಕ್ಕಳನ್ನು ಶೈಕ್ಷಣಿಕವಾಗಿ ಮುಂದೆ ಬರುವುದು, ಲೈನ್ ಮನೆಗಳಲ್ಲಿ ವಾಸ ಮಾಡುತ್ತಿರುವ ಸಮುದಾಯದವರಿಗೆ ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಶ್ರಮಿಸುತ್ತೇನೆ. ಈಗಾಗಲೇ ಖಾಸಗಿ ಸಂಸ್ಥೆ ನಮ್ಮ ಸಮುದಾಯದ ಜಾತಿ ಗಣತಿ ಮಾಡಿದೆ. ಅದನ್ನು ಪರಿಗಣಿಸುಲು ಸಂಘಟನೆ ಮೂಲಕ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ಸಂಘದ ನೂತನ ಗೌರವಾಧ್ಯಕ್ಷರಾದ ನಾರಾಯಣ, ವಿಶ್ವನಾಥ್, ಉಪಾಧ್ಯಕ್ಷರಾಗಿ ಗಂಗೂ ಹೊಯ್ಸಳಲು, ಪೂರ್ಣೇಶ್ ಬೀಳಗುಳ, ಸಹ ಕಾರ್ಯದರ್ಶಿ ಶಿವಪ್ಪ, ಸಂಘಟನಾ ಕಾರ್ಯದರ್ಶಿ ಉಮೇಶ್, ರವಿ, ಲಲಿತ, ಲೋಹಿತ್, ಖಜಾಂಚಿ ಜನಾರ್ದನ, ಸದಸ್ಯರಾಗಿ ರವಿ ಬೆಳಗೊಡು, ಮಹೇಶ್, ಸಲಹೆಗರರಾಗಿ ಗಣೇಶ್, ರಮೇಶ್ ಆಯ್ಕೆಯಾಗಿದ್ದಾರೆಂದು ಹೇಳಿದರು.



