ಇತ್ತೀಚೆಗೆ ಬೆಂಗಳೂರಿನ ಕನ್ನಡ ಭವನದಲ್ಲಿ ಆರ್ಟಿ ಕಲ್ಚರಲ್ ಎಜುಕೇಷನ್, ಎನ್.ಲೈಟ್ ಪೌಂಡೇಷನ್ ಆಯೋಜಿಸಿದ್ದ ಐರೇಂಜ್ ಬುಕ್ ಆಫ್ ವರ್ಡ್ ರೆಕಾರ್ಡ್ ಪಟ್ಟಿಯಲ್ಲಿ ಸೇರುವ ಮೂಲಕ ಮೂಡಿಗೆರೆಯ ಡ್ಯಾನ್ಸ್ ಮಾಸ್ಟರ್ ಕಿಶೋರ್ ಅವರ ನಾಟ್ಯಕಲಾ ನೃತ್ಯ ಶಾಲೆ ಸಾಧನೆ ಮಾಡಿದೆ.
ಕಳೆದ ಅನೇಕ ವರ್ಷದಿಂದ ಪಟ್ಟಣದಲ್ಲಿ ನೃತ್ಯ ಶಾಲೆ ಸ್ಥಾಪಿಸಿ ಮಕ್ಕಳಿಗೆ ಶಾಸ್ತ್ರೀಯ ಮತ್ತು ಪಾಶ್ಚಿಮಾತ್ಯ ಶೈಲಿಯ ವಿವಿಧ ನೃತ್ಯ ಪ್ರಕಾರಗಳನ್ನು ಕಲಿಸಿಕೊಡುತ್ತಿದ್ದು, ರಾಜ್ಯದ ನಾನಾ ಕಡೆಯಲ್ಲಿ ಭಾಗವಹಿಸಿ ವಿವಿಧ ಪ್ರಶಸ್ತಿ ಪಡೆಯುವ ಮೂಲಕ ತಾಲೂಕಿಗೆ ಹೆಸರು ತಂದಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ನೃತ್ಯದಲ್ಲಿ ಕಿಶೋರ್ ಅವರ ತಂಡದ 14 ಮಕ್ಕಳು ಭಾಗವಹಿಸಿದ್ದು, ಉತ್ತಮ ಪ್ರದರ್ಶನ ನೀಡುವ ಮೂಲಕ ಹೈರೇಂಜ್ ಬುಕ್ ಆಫ್ ವರ್ಡ್ ರೆಕಾರ್ಡ್ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.



