ಸೀನಿಯರ್ ಛೇಂಬರ್ ಮೂಡಿಗೆರೆ ಇವರ ವತಿಯಿಂದ ಸಿ.ಇ.ಟಿ. ನೀಟ್, ಕಾಮೆಡ್ ಕೆ. ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿದ್ಯಾರ್ಥಿ ಮಿತ್ರ ವೃತ್ತಿ ಶಿಕ್ಷಣ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಮೂಡಿಗೆರೆ ಬಿ.ಜಿ.ಎಸ್. ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಾಗಾರದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದ ವಿದ್ಯಾರ್ಥಿಗಳು ಮುಂದೆ ಕೌನ್ಸಲಿಂಗ್, ಐಚಿಕ ಕೋರ್ಸ್ ಗಳ ಆಯ್ಕೆ ಮುಂತಾದ ವಿಷಯಗಳ ಬಗ್ಗೆ ನುರಿತ ತಜ್ಞರಿಂದ ಮಾಹಿತಿ ಒದಗಿಸಲಾಯಿತು.

ಮೂಡಿಗೆರೆ ಬಾಲಿಕಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪೂರ್ಣೇಶ್ ಎಸ್. , ಚಿಕ್ಕಮಗಳೂರು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಲೋಹಿತ್ ಕುಮಾರ್, ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಕಾಂತರಾಜು ವೈ, ಬೇಲೂರು ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಶ್ರೀಮತಿ ನಾಗಶ್ರೀ ತ್ಯಾಗರಾಜು, ಹಾಸನದ ನಮ್ ಕೀಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಇಲ್ಲಿನ ಪೂರ್ವ ಉಪಪ್ರಾಂಶುಪಾಲರಾದ ಡಾ. ಎಂ.ಎನ್. ಮೈನಾ ಇವರುಗಳು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾಹಿ ನೀಡಿದರು.
ಮೂಡಿಗೆರೆ ಸೀರಿಯರ್ ಛೇಂಬರ್ ಅಧ್ಯಕ್ಷ ಬಿ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು, ಸೀನಿಯರ್ ಛೇಂಬರ್ ಹಿರಿಯರಾದ ಎಂ.ಆರ್. ಜಯೇಶ್, ಸೀನಿಯರ್ ಛೇಂಬರ್ ನಿಕಟಪೂರ್ವ ಅಧ್ಯಕ್ಷ ಎನ್.ಎಲ್. ಪುಣ್ಯಮೂರ್ತಿ, ಕಾರ್ಯದರ್ಶಿ ಹೆಚ್.ಆರ್. ಪ್ರದೀಪ್ ಕುಮಾರ್ ದುಂಡುಗ, ಪದಾಧಿಕಾರಿಗಳಾದ ಬಿ.ಎನ್. ಮನಮೋಹನ್, ವಿನೋದ್ ಕುಮಾರ್ ಶೆಟ್ಟಿ, ಕೆ.ಎಲ್.ಎಸ್. ತೇಜಸ್ವಿ, ವಿಜಯಕುಮಾರ್, ಮೂಡಿಗೆರೆ ಜೇಸಿಐ ಅಧ್ಯಕ್ಷ ಸುಪ್ರೀತ್ ಕಾರಬೈಲ್, ಬಿ.ಜಿ.ಎಸ್. ಕಾಲೇಜು ಪ್ರಾಂಶುಪಾಲರಾದ ಸಂದೇಶ್ ಮುಂತಾದವರು ಉಪಸ್ಥಿತರಿದ್ದರು.



