punarvasthi 3

 

 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾರಗೋಡು ಕುಂದೂರು ಗ್ರಾಮದ  ಮಂಡಗುಳಿ ಹರದ ನಿವಾಸಿಗಳು ನಮಗೆ ಪುನರ್ವಸತಿ ಕಲ್ಪಿಸಿ ಇಲ್ಲ ಅಂದರೆ ನಮಗೆ ದಯಾಮರಣ ನೀಡಿ ಎಂಬಂತೆ  ಕೆಲವು ದಿನಗಳ ಹಿಂದೆ ಮಾಧ್ಯಮದ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.

ಈ ಕುರಿತು ಪತ್ರಿಕೆಯು ಸಂತ್ರಸ್ಥರ ಸ್ಥಳಕ್ಕೆ ಭೇಟಿ ನೀಡಿ ಖುದ್ದಾಗಿ ಪರಿಶೀಲಿಸಿದಾಗ ಸುಮಾರು 16  ಕುಟುಂಬಗಳು ಅತಂತ್ರ ಪರಿಸ್ಥಿತಿಯಲ್ಲಿದ್ದು ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ಆದಿವಾಸಿಗಳಂತೆ ಬದುಕುತ್ತಿವೆ ಹಾಗೂ ಈ ಕುಟುಂಬಗಳಿಗೆ ಇದುವರೆಗೆ ಯಾವುದೇ ನಿರ್ದಿಷ್ಟ ಜಾಗವನ್ನು ಗುರುತಿಸಿ ಶಾಶ್ವತವಾದ ಪುನರ್ವಸತಿಯನ್ನು ಸರ್ಕಾರ ಕಲ್ಪಿಸಿರುವುದಿಲ್ಲ ಹಾಗೆಯೇ ಇದರ ಬಗ್ಗೆ ಹಿರಿಯ ಅಧಿಕಾರಿಗಳಲ್ಲಿ ಕೇಳಿದಾಗ ಈಗ ಆಗುತ್ತೆ ನಾಳೆ ಆಗುತ್ತೆ ಎಂಬಂತೆ ಉತ್ತರವನ್ನು ನೀಡುತ್ತಿದ್ದರು  ಎಂಬಂತಹ ಆರೋಪವನ್ನು ಹೊರಿಸಿದ ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲೆ ತಮ್ಮ  ಆಕ್ರೋಶವನ್ನು ವ್ಯಕ್ತಪಡಿಸಿ ಪತ್ರಿಕೆಯ ಜೊತೆ ಮಾತನಾಡಿದ್ದರು.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪತ್ರಿಕೆಯು ಈ ಕುರಿತು ವಸ್ತುನಿಷ್ಠ ವರದಿಯನ್ನು ಮಾಡಿ ಅಧಿಕಾರಿಗಳ ಗಮನ ಸೆಳೆದಿತ್ತು. ಈ ಸಂಬಂಧ ಇಂದು ಸಂತ್ರಸ್ತರ ಸ್ಥಳಗಳಿಗೆ ಭೇಟಿ ನೀಡಿದ ಮೂಡಿಗೆರೆ ವೃತ್ತ ನಿರೀಕ್ಷಕರಾದ ಸೋಮೇಗೌಡ , ಖುದ್ದಾಗಿ ಭೇಟಿ ನೀಡಿ ಅಲ್ಲಿರುವ ಕುಟುಂಬಗಳಿಗೆ ಆಗುವಂತಹ  ಅನಾನುಕೂಲದ ಬಗ್ಗೆ ಹಾಗೂ ಇವರುಗಳ ಜೀವನೋಪಾಯಕ್ಕೆ ಈ ಸ್ಥಳವು ಸೂಕ್ತ ಅಲ್ಲ ಎಂದು ಪರಾಮರ್ಶೆ ನಡೆಸಿದರು ಹಾಗೂ ಅಲ್ಲಿನ ಸಂತ್ರಸ್ಥರ ಜೊತೆ ಮಾತನಾಡಿ ತಮ್ಮ ಬೇಡಿಕೆಯು ನ್ಯಾಯ ಪರವಾಗಿದೆ ಹಾಗೂ ತಮ್ಮ ತಮ್ಮ ಜೀವವನ್ನು ರಕ್ಷಿಸಲು ಸಹ ಯಾವುದೇ ಮೂಲಸೌಕರ್ಯ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ತಾವುಗಳು ಆದಿವಾಸಿಗಳಂತೆ ಜೀವನ ಮಾಡುತ್ತಿರುವುದು ನಮ್ಮ ಪ್ರಾಥಮಿಕ ಪರಿಶೀಲನೆಯಲ್ಲಿ ನಮಗೆ ತಿಳಿದು ಬಂದಿದ್ದು ಹಾಗೆಯೇ ಮೂಲ ಸೌಕರ್ಯಗಳಾದ ರಸ್ತೆ , ವಿದ್ಯುತ್, ನೀರು , ಸೇರಿದಂತೆ ಯಾವುದೇ ಸೌಲಭ್ಯ ಸಹ ಇಲ್ಲಿನ ಜನರಿಗೆ ಇಲ್ಲ ಅದರಿಂದ ಈ ಕಾಡಿನ ಮಧ್ಯೆ ಬದುಕುವ ಜನರ ಬದುಕು ಕಾಡು ಪ್ರಾಣಿಗಳ ಜೊತೆ ದಿನನಿತ್ಯ ಹೋರಾಟ ಮಾಡಿ ಬದುಕು ನಡೆಸುವಂತಹ ನಿರ್ದಿಷ್ಟ ಉದಾಹರಣೆಗಳು ಇಲ್ಲಿ ಎದ್ದು ಕಾಣುತ್ತದೆ ಎಂದರು .

ಈ ಕುರಿತು ನಮ್ಮ ಇಲಾಖೆಯ ವತಿಯಿಂದ ಮೇಲಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಶಾಸಕರಿಗೆ ಈ ಕುರಿತು ಪತ್ರ ಬರೆದು ಈ  ಗ್ರಾಮದ ಜನರಿಗೆ ಮುಂದೆ ಆಗಬಹುದಾದಂತಹ ಬಹುದೊಡ್ಡ ಅನಾಹುತಗಳ ಜವಾಬ್ದಾರಿಯನ್ನು ಯಾರು ಹೊರಬೇಕು ಹಾಗೂ  ಮುಂದಿನ ದಿನಗಳಲ್ಲಿ ಕಾಡುಪ್ರಾಣಿ ಹಾವಳಿಯಿಂದ ಇಲ್ಲಿ ಸಾವು ನೋವು ಸಂಭವಿಸಿದರೆ  ಯಾರನ್ನು ಹೊಣೆಗಾರಿಕೆ ಮಾಡಬೇಕು ಎಂಬಂತೆ ಇಲ್ಲಿನ ಅನಾನುಕೂಲಗಳನ್ನು ಎಳೆ ಎಳೆಯಾಗಿ ಮೇಲಧಿಕಾರಿಗಳಿಗೆ ತಿಳಿಸಲಾಗುವುದು ಹಾಗೂ  ಆದಷ್ಟು ಬೇಗ ಇಂತಹ ಅವ್ಯವಸ್ಥೆಯನ್ನು ಸರಿಪಡಿಸಿ ಇವರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಮೇಲಾಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ  ತರಲಾಗುವುದು ಎಂದರು.

ಈ ಸಂದರ್ಭದಲ್ಲಿ ಆಲ್ದೂರು ವಲಯ ಅರಣ್ಯಾಧಿಕಾರಿ ಹರೀಶ್.ಎಂ.ಆರ್  ಸಿಬ್ಬಂದಿಗಳ ಜೊತೆ  ಸಂತ್ರಸ್ತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಇಲ್ಲಿನ ಸುಮಾರು 16 ಕುಟುಂಬಗಳಿಗೆ ತುರ್ತಾಗಿ ಪುನರ್ವಸತಿ ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಆದ್ದರಿಂದ ಇಲ್ಲಿನ ಈ ಜಲ್ವಂತ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಹಾಗೆಯೇ ಈ ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಎಲ್ಲಾ ಕ್ರಮಗಳನ್ನು ನಮ್ಮ ಇಲಾಖೆಯಿಂದ ಈಗಾಗಲೇ ಕೈಗೊಳ್ಳಲಾಗಿದೆ ಇವರಿಗೆ ಸದ್ಯದಲ್ಲೇ ಅದನ್ನು ಒದಗಿಸುವ ನಿಟ್ಟಿನಲ್ಲಿ ಇನ್ನೂ ಆಗಬೇಕಾದ ಕ್ರಮವನ್ನು ಶೀಘ್ರದಲ್ಲೇ ಪೂರ್ತಿ ಗೊಳಿಸುವ ಮೂಲಕ ಈ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅನುವು ಮಾಡಿಕೊಡಲಾಗುವುದು ಎಂದು  ಭರವಸೆಯನ್ನು ನೀಡಿದರು.

ಸ್ಥಳದಲ್ಲಿ ಡಿ.ಆರ್.ಎಫ್ .ಓ ಚೇತನ್, ಪ್ರದೀಪ್,  ಗ್ರಾಮಸ್ಥರಾದ ಗೀತಾ, ಪ್ರಮಿಳಾ, ಪುಟ್ಟರಾಜು, ಕಾರ್ತಿಕ್, ರಾಜೇಶ್,ಲೋಕಮ್ಮ, ಶೋಭಾ, ಇತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ