ವ್ಯಕ್ತಿಯೊಬ್ಬರು ಕಳೆದುಕೊಂಡಿದ್ದ ಹತ್ತು ಸಾವಿರ ಹಣವನ್ನು ಆಟೋ ಚಾಲಕರೊಬ್ಬರು ಹಿಂತಿರುಗಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ರಾಮ್ ಪ್ರಸಾದ್ ಪ್ರಾವಿಜನ್ ಸ್ಟೋರ್ ಮಾಲೀಕ ವಿಕ್ರಂ ಬಿದಿರುತಳ ಅವರು ತುರ್ತು ಕಾರ್ಯಕ್ಕೆ ಬಣಕಲ್ ಗೆ ಹೋಗಿದ್ದರು. ಮೊಬೈಲ್ ತೆಗೆಯುವ ಅವಸರದಲ್ಲಿ ರೂ10ಸಾವಿರವನ್ನು ಬಣಕಲ್ ನಲ್ಲಿ ಕಳೆದುಕೊಂಡು ಬಂದಿದ್ದರು. ಹಣ ಕಳೆದುಕೊಂಡು ವಿಕ್ರಂ ಚಡಪಡಿಸುತ್ತಿದ್ದರು.
ತನಗೆ ಸಿಕ್ಕಿದ ಹಣವನ್ನು ಬಣಕಲ್ ಆಟೋ ಚಾಲಕ ತನ್ಜೀಲ್ ಅವರು ಕೊಟ್ಟಿಗೆಹಾರಕ್ಕೆ ಬಂದು ಹಣ ಬೀಳಿಸಿಕೊಂಡು ಬಂದ ವಿಕ್ರಂ ಅವರಿಗೆ ಹಣ ಮರಳಿಸಿ ಮಾನವೀಯತೆ ಮೆರೆದರು. ಅಂಗಡಿಯ ಮಾಲೀಕ ತನ್ಜೀಲ್ ಅವರಿಗೆ ಹಣ ಮರಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ವರದಿ : ಸಂತೋಷ್ ಅತ್ತಿಗೆರೆ



