September 13, 2026
;
india beat

 

 

ಹೈದರಾಬಾದ್‌ನಲ್ಲಿ ನಡೆದ ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತವು ಬಾಂಗ್ಲಾದೇಶ ವಿರುದ್ಧದ ಬೃಹತ್ ಜಯದೊಂದಿಗೆ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ. ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮತ್ತು ನಂತರ ಬೌಲಿಂಗ್ ನಲ್ಲೂ ಆಕರ್ಷಕ ಪ್ರದರ್ಶನ ನೀಡುವ ಮೂಲಕ ಆತಿಥೇಯರು ಬಾಂಗ್ಲಾ ತಂಡವನ್ನು 133 ರನ್‌ಗಳ ಅಂತರದೊಂದಿಗೆ ಪರಾಭವಗೊಳಿಸಿದರು.

ಇದು ಟಿ20 ಕ್ರಿಕೆಟ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಯಾವುದೇ ತಂಡ ಸಾಧಿಸದ ಅತಿ ದೊಡ್ಡ ಗೆಲುವಾಗಿದೆ. ಬಾಂಗ್ಲಾ ವಿರುದ್ಧದ ಹಿಂದಿನ ಅತಿದೊಡ್ಡ ಗೆಲುವು ದಕ್ಷಿಣ ಆಫ್ರಿಕಾಕ್ಕೆ ಸೇರಿದ್ದು, ಅವರು 2022ರ ಟಿ20 ವಿಶ್ವಕಪ್‌ನಲ್ಲಿ 104 ರನ್‌ಗಳ ಅಂತರದಿಂದ ಗೆಲುವ ಸಾಧಿಸಿದ್ದರು.

ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬ್ಯಾಟರ್‌ಗಳು ಅಬ್ಬರಿಸಿದ್ದರು. ಸಂಜು ಸ್ಯಾಮ್ಸನ್ 47 ಎಸೆತಗಳಲ್ಲಿ 111 ರನ್ ಗಳಿಸಿ ಶತಕ ಸಿಡಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ 35 ಎಸೆತಗಳಲ್ಲಿ 75 ರನ್ ಗಳಿಸಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 173 ರನ್‌ಗಳ ಜೊತೆಯಾಟವಾಡಿದರು. ಹಾರ್ದಿಕ್ ಪಾಂಡ್ಯ ಮತ್ತು ರಿಯಾನ್ ಪರಾಗ್ ಮಧ್ಯಮ ಹಂತ ಮತ್ತು ಡೆತ್ ಓವರ್‌ಗಳ ಕೊನೆಯ ಭಾಗದಲ್ಲಿ ಬಿರುಸಿನಿಂದ ಬ್ಯಾಟ್ ಬೀಸಿದರು. ಹಾರ್ದಿಕ್ 18 ಎಸೆತಗಳಲ್ಲಿ 47 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ಔಟಾದರು, ಅಂತಿಮವಾಗಿ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 297 ರನ್ ಗಳ ಬೃಹತ್ ಮೊತ್ತ ಪೇರಿಸಿದರು.

ಇದು ಟಿ 20 ಕ್ರಿಕೆಟ್ ನಲ್ಲಿ ಭಾರತ ತಂಡದ ಸಾರ್ವಕಾಲಿಕ ದಾಖಲೆ ಮೊತ್ತವಾಗಿದೆ. ಮಾತ್ರವಲ್ಲಿ ಟೆಸ್ಟ್ ಪಂದ್ಯವಾಡುವ ವಿಶ್ವದ ತಂಡವೊಂದು ಟಿ 20 ಪಂದ್ಯದಲ್ಲಿ ಗಳಿಸಿದ ಅತ್ಯದಿಕ ಮೊತ್ತವಾಗಿದೆ.

ಭಾರತ ನೀಡಿದ 298 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ನಿಗದಿತ ಓವರ್ ನಲ್ಲಿ 7 ವಿಕೆಟ್ ಕಳೆದುಕೊಂಡು 164 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಬಾಂಗ್ಲಾ ಪರ ಲಿಟನ್ ದಾಸ್ 42, ತೌಹಿದ್ ಹೃದಯೊಯ್ ಅಜೇಯ 63 ರನ್ ಗಳಿಸಿದ್ದಾರೆ.

ಭಾರತದ ಪರ ಬೌಲಿಂಗ್ ನಲ್ಲಿ ರವಿ ಬಿಷ್ಣೋಯ್ 3, ಮಾಯಾಂಕ್ ಯಾದವ್ 2 ವಿಕೆಟ್ ಪಡೆದಿದ್ದಾರೆ. ಮೂರು ಪಂದ್ಯಗಳ ಟಿ20 ಪಂದ್ಯದಲ್ಲಿ ಭಾರತ 3-0 ಅತಂರದಿಂದ ಕ್ಲೀನ್ ಸ್ವಿಪ್ ಸಾಧನೆ ಮಾಡಿದೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;