ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಪ್ರತಿಷ್ಟಾಪಿಸುವ ಸಾರ್ವಜನಿಕ ಶ್ರೀ ಮಹಾಗಣಪತಿ ಸೇವಾ ಸಮಿತಿಗೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕರು ವಿಕ್ರಂ ಆಮಟೆ ಅವರು ಮೂಡಿಗೆರೆ ಮಹಾಗಣಪತಿ ಸೇವಾ ಸಮಿತಿಗೆ ಉತ್ತಮ ಕಾರ್ಯಕ್ರಮ ಹಾಗೂ ವಿಸರ್ಜನಾ ಸಂದರ್ಭದಲ್ಲಿ ಶಾಂತಿ ಮತ್ತು ಸೌಹಾರ್ದಯುತ ನಿರ್ವಹಣೆಗೆ ಅಭಿನಂದನಾ ಪತ್ರ ನೀಡಿದರು. ಈ ಸಂದರ್ಭದಲ್ಲಿ ಮೂಡಿಗೆರೆ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ ಉಪಸ್ಥಿತರಿದ್ದರು.

ಮೂಡಿಗೆರೆ ಸಾರ್ವಜನಿಕ ಶ್ರೀ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷರಾದ ಪಿ.ಜಿ. ಅನುಕುಮಾರ್ (ಪುಟ್ಟಣ್ಣ), ಕಾರ್ಯಾಧ್ಯಕ್ಷರಾದ ಜೆ.ಎಸ್. ರಘು ಜನ್ನಾಪುರ, ಸಮಿತಿಯ ಪದಾಧಿಕಾರಿಗಳಾದ ವಿಜಯ್ ಕುಮಾರ್, ಪ್ರಮೋದ್ ದುಂಡಗ, ಮನೋಜ್ ಹಳೆಕೋಟೆ, ವಿಶ್ವಗೌಡ ಹಳಸೆ, ಅನಿಲ್ ಬಕ್ಕಿ, ಸಂಜಯ್ ಕೊಟ್ಟಿಗೆಹಾರ, ಅಭಿ ಕೊಟ್ಟಿಗೆಹಾರ, ಮಂಜುನಾಥ್, ಮನೋಜ್, ಕಾರ್ತಿಕ್ ಪಟ್ಟದೂರು, ಅನಿಲ್ ಕಣಚೂರು, ಸಿದ್ದು ಆಲ್ದೂರು, ರಂಗನಾಥ್, ಆಶಿಕ್ ಮಗ್ಗಲಮಕ್ಕಿ ಮುಂತಾದವರು ಇದ್ದರು.
ಮೂಡಿಗೆರೆ ಸಾರ್ವಜನಿಕ ಶ್ರೀ ಮಹಾಗಣಪತಿ ಸೇವಾ ಸಮಿತಿಯು ಈ ವರ್ಷ ಗಣೇಶ ಉತ್ಸವದ ಸಂದರ್ಭದಲ್ಲಿ ಅನೇಕ ಉತ್ತಮ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರ್ಥಪೂರ್ಣವಾಗಿ ಮತ್ತು ಶಾಂತಿಯುತವಾಗಿ ನಡೆಸಿಕೊಟ್ಟು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು. ಈ ನಿಟ್ಟಿನಲ್ಲಿ ಸಮಿತಿಯವರು ಕೈಗೊಂಡ ಕ್ರಮಗಳನ್ನು ಮತ್ತು ಮುತುವರ್ಜಿಯನ್ನು ಗುರುತಿಸಿ ಪೊಲೀಸ್ ಇಲಾಖೆಯಿಂದ ಅಭಿನಂದನೆ ಸಲ್ಲಿಸಲಾಗಿದೆ.



