banakal 3

 

 

ತಮಿಳುನಾಡಿನ ಕೊಯಮತ್ತೂರುನಲ್ಲಿ ಈಶಾ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮೋತ್ಸವದಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯ ಕೂಟದಲ್ಲಿ ಆದಿಲ್ ನಾಯಕತ್ವದ ಬಣಕಲ್ ಆಲಿಫ್ ಸ್ಟಾರ್ ತಂಡವು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕೊಯಮತ್ತೂರು ಈಶಾ ಫೌಂಡೇಶನ್ ಆದಿಯೋಗಿ ಪ್ರತಿಮೆ ಎದುರು ನಡೆದ ಪಂದ್ಯಾವಳಿಯಲ್ಲಿ ಆದಿಲ್ ನಾಯಕತ್ವದ ಬಣಕಲ್ ತಂಡ ಪ್ರಶಸ್ತಿಗೆ ಮುತ್ತಿಟ್ಟಿದೆ.

ಸತತವಾಗಿ ಎಲ್ಲಾ ತಂಡಗಳ ವಿರುದ್ಧ ಗೆಲುವು ಸಾಧಿಸುವ ಮೂಲಕ ಟ್ರೋಫಿಯನ್ನು ಕೈಗೆತ್ತಿಕೊಂಡಿದೆ. ಈ ಸಂದರ್ಭದಲ್ಲಿ ಈಶಾ ಫೌಂಡೇಶನ್ ನ ಸದ್ಗುರು, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ವಿರೇಂದ್ರ ಸೆಹ್ವಾಗ್ ಮತ್ತು ವೆಂಕಟೇಶ್ ಪ್ರಸಾದ್ ಇತರರು ಇದ್ದು ಆಟಗಾರರಿಗೆ ಶುಭ ಹಾರೈಸಿದ್ದಾರೆ.

ಆದಿಲ್ ನಾಯಕತ್ವದ ತಂಡದ ಸಾಧನೆಗೆ ಬಣಕಲ್ ಗ್ರಾಮಸ್ಥರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ವಿಜೇತರಾದ ತಂಡದ ಆಟಗಾರರು ಆದಿ (ನಾಯಕ )ಕಿಶೋರ್ (ಉಪನಾಯಕ ), ಸುಹೇಲ್, ಕಿರಣ್, ಆಕಾಶ್, ರಶೀದ್, ರಿಫಾದ್

ಸದ್ಗುರುಗಳು ಪ್ರಾರಂಭಿಸಿದ ಸಾಮಾಜಿಕ ಕಾರ್ಯಕ್ರಮವಾದ  ಇಶಾ ಗ್ರಾಮೋತ್ಸವ 2024 ರ ಬಹು ನಿರೀಕ್ಷಿತ ಅಂತಿಮ ಪಂದ್ಯವನ್ನು ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ 112 ಅಡಿಗಳ ಆದಿ ಯೋಗಿ ಪ್ರತಿಮೆಯ ಎದುರು ಸಾವಿರಾರು ಗ್ರಾಮೀಣ ಆಟಗಾರರಿಗೆ ವೇದಿಕೆ ನೀಡಲಾಗಿತ್ತು. ಕ್ರೀಡಾಕೂಟದಲ್ಲಿ ವಿವಿಧ ಕ್ರೀಡಾ ಸ್ಪರ್ಧೇಗಳನ್ನು ಏರ್ಪಡಿಸಲಾಗಿತ್ತು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ