Cosplay Comic of India ಇವರು ಜನವರಿ 18 ಹಾಗೂ 19 ರಂದು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆಸಿದ BCC (ಬೆಂಗಳೂರು Cosplay contest) ಅಂತರಾಷ್ಟ್ರೀಯ ವೇಷಭೂಷಣ ಸ್ಪರ್ಧೆಯ ಲ್ಲಿ ಮಾಡಿಗೆರೆಯ ಕರಾಟೆ ಶಿಕ್ಷಕ ರಾಜೇಂದ್ರನ್ ರವರ ಪುತ್ರ ಪೂಜಿತ್.ಎಸ್. ರಾಜೇಂದ್ರನ್ ರವರು ಭಾಗವಹಿಸಿ ಪ್ರಥಮ ಸ್ಥಾನ ಜಯಗಳಿಸಿದ್ದಾರೆ.
ಈ ಸ್ಪರ್ಧೆಗೆ ದೇಶ ವಿದೇಶಗಳಿಂದ ಸುಮಾರು 200 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು ಇದರಲ್ಲಿ Cortoon, gaming Anime, Cinema, Comic, ಮಾಂಗಾ ಮುಂತಾದ ವಿಭಾಗಗಳಿದ್ದು ಪ್ರತಿಯೊಂದಕ್ಕೆ ಪ್ರತ್ಯೇಕವಾಗಿ ಬಹುಮಾನವಿದ್ದು ಈ ಎಲ್ಲಾ ವಿಭಾಗದಿಂದ ಒಂದನ್ನು ಅತ್ಯುತ್ತಮ ಎಂದು ಆಯ್ಕೆ ಮಾಡಿದಾಗ ಮೂಡಿಗೆರೆಯ ಪೂಜಿತ್ ಎನ್ ರಾಜೇಂದ್ರನ್ ರವರು ಪ್ರಥಮ ಸ್ಥಾನ ಗಳಿಸಿ 50,000 ನಗದು ಬಹುಮಾನ ಹಾಗು 15 ಸಾವಿರ ಬೆಲೆ ಬಾಳುವ giftನ್ನು ಪಡೆದುಕೊಂಡಿರುತ್ತಾರೆ.
gaming charector “ಜಾಕ್ ಗಾರ್ಲಂಡ್ ” ವೇಷ ಧರಿಸಿದ್ದ ಇವರು ಪ್ರಪಂಚದ ಎರಡನೆಯವರಾಗಿದ್ದಾರೆ ತಮ್ಮ ವೇಷ ಭೂಷಣವನ್ನು ಸ್ವತಃ ತಾವೇ ಕೈಯಿಂದ ತಯಾರಿಸಲಾಗಿತ್ತು. ಯಾವುದೇ ರೆಡಿಮೇಡ್ ವಸ್ತುಗಳು ಇಲ್ಲಿ ಬಳಸಿರಲಿಲ್ಲ. ಇದನ್ನು ಕಂಡು ತೀರ್ಪುಗಾರರು ಹಾಗೂ ಪ್ರೇಕ್ಷಕರು ಹೆಚ್ಚು ಆಕರ್ಷಿತರಾದರು.
ವೃತ್ತಿಯಲ್ಲಿ ವಿಜ್ಞಾನಿ ಆಗಿರುವ ಇವರು ತಮ್ಮ ಬಿಡುವಿನ ವೇಳೆಯಲ್ಲಿ ಈ ರೀತಿಯ ಚಟುವಟಿಕೆಗಳನ್ನು ಮಾಡುತ್ತಿರುತ್ತಾರೆ. MSc ಯಲ್ಲಿ gold medalist ಆದ ಇವರು ಉತ್ತಮ ಚಿತ್ರಕಾರ, ಕರಾಟೆ ಪಟು ನೃತ್ಯಪಟು ಉತ್ತಮ ಗಾಯಕ ಹಾಗೂ skater ಆದ ಇವರು 2011 ರಲ್ಲಿ ಕರಾಟೆಯಲ್ಲಿ ಗಿನ್ನಿಸ್ ರೆಕಾರ್ಡ್ ಮಾಡುವ ಪ್ರಯತ್ನವನ್ನು ಮಾಡಿದ್ದರು.
ಇವರ ತಂದೆ ರಾಜೇಂದ್ರ ಅವರು ಮೂಡಿಗೆರೆ ಕರಾಟೆ ಶಿಕ್ಷಕರಾಗಿದ್ದಾರೆ. ಇವರ ಕುಟುಂಬ ಕರಾಟೆ, ನೃತ್ಯ, ಕಲೆಯಲ್ಲಿ ತೊಡಗಿಸಿಕೊಂಡಿದೆ



