ಸಾಂಬಾರ ಮಂಡಳಿ ಮೂಡಿಗೆರೆ ಇವರು ಕಡೂರು ತಾಲೂಕಿನ ಬಿಸಲೇಹಳ್ಳಿ ಗ್ರಾಮದ ಪಂಚಮಿ ತೋಟದ ಮನೆಯಲ್ಲಿ ಸಣ್ಣ ಏಲಕ್ಕಿ ಬೆಳೆಗಾರರ ತರಬೇತಿ ಕಾರ್ಯಕ್ರಮವನ್ನು ಜನವರಿ 20 ರಂದು ಆಯೋಜಿಸಿದ್ದರು. ತರಬೇತಿ ಕಾರ್ಯಕ್ರಮದಲ್ಲಿ ಒಟ್ಟು 62 ಮಂದಿ ಭಾಗವಹಿಸಿದ್ದರು.
ಶಶಿಧರನ್ ಪುಲ್ಪರಂಪಿಲ್ ಹಿರಿಯ ಕ್ಷೇತ್ರಾಧಿಕಾರಿ ಸಾಂಬಾರ ಮಂಡಳಿ ಮೂಡಿಗೆರೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ಬಿಸಲೇಹಳ್ಳಿ ಪಂಚಾಯಿತಿಯ ಪಿಡಿಒ ಚಂದ್ರಶೇಖರ್ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಸಾಂಬಾರ ಮಂಡಳಿಯ ಚಟುವಟಿಕೆಗಳನ್ನು ಶ್ಲಾಘಿಸಿದರು ಮತ್ತು ರೈತರು ಸಾಂಬಾರ ಮಂಡಳಿಯ ಯೋಜನೆಗಳನ್ನು ಪಡೆದುಕೊಳ್ಳುವಂತೆ ವಿನಂತಿಸಿದರು. ರೈತ ಸಮುದಾಯಕ್ಕೆ ಹೆಚ್ಚುವರಿ ಆದಾಯವನ್ನು ಪಡೆಯಲು ಅಡಿಕೆ ತೋಟದಲ್ಲಿ ಸಾಂಬಾರ ಪದಾರ್ಥಗಳ ಅಂತರ ಬೆಳೆಯನ್ನು ರೈತರು ಕೈಗೊಳ್ಳಬೇಕೆಂದು ರವಿ ಕೆ ಒತ್ತಾಯಿಸಿದರು.
ಸ್ಥಳೀಯ ಪ್ರಗತಿಪರ ರೈತ ತಿಪ್ಪೇಸ್ವಾಮಿಯವರು ಏಲಕ್ಕಿ ಬೆಳೆಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಭೂಮಿ ಸುಸ್ಥಿರ ಅಭಿವೃದ್ಧಿ ಸೊಸೈಟಿ ಬಿಸಲೇಹಳ್ಳಿಯ ಯೋಜನಾ ನಿರ್ದೇಶಕರಾದ ರವಿ ಕೆ ಮತ್ತು ಶ್ರೀಮತಿ ಶ್ವೇತಾ ಟಿ ಆರ್ ಯೋಜನಾ ಸಂಯೋಜಕರು, ರೆಜಿಸ್ ಕೆ ಎಸ್ ಸಹಾಯಕ ಪ್ರಧಾನ ವ್ಯವಸ್ಥಾಪಕರು, ನಬಾರ್ಡ್, ಚಿಕ್ಕಮಗಳೂರು ಮತ್ತು ಪ್ರಭು ಪಂಚಾಯತ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಡಾ ಹರ್ಷ ಕೆ ಎನ್, ವಿಜ್ಞಾನಿ ICRI, ದೋಣಿಗಲ್ ಸಕಲೇಶಪುರ ಅವರು ಸಣ್ಣ ಏಲಕ್ಕಿಯಲ್ಲಿ GAP ಕುರಿತು ಕಾರ್ಯಾಗಾರ ನಿರ್ವಹಿಸಿದರು. ಅವರು ಕರಿಮೆಣಸು ಲವಂಗ ಮತ್ತು ಜಾಯಿಕಾಯಿಯನ್ನು ಅಡಿಕೆ ತೋಟಗಳಲ್ಲಿ ಅಂತರ ಬೆಳೆಗಳಾಗಿ ಬೆಳೆಸುವ ಕುರಿತು ಮಾಹಿತಿ ನೀಡಿದರು.
ಶಶಿಧರನ್ ಪುಲಪರಂಪಿಲ್ ರೈತರ ವಿವಿಧ ಸಂದೇಹಗಳಿಗೆ ಸ್ಪಷ್ಟನೆ ನೀಡಿದರು.
ಶ್ರೀಮತಿ ಜೂಲಿಯೆಟ್ ಜಾಯ್, ವಿಸ್ತರಣಾ ಸಹಾಯಕ ಸಂಬಾರ ಮಂಡಳಿ, ಕ್ಷೇತ್ರ ಕಛೇರಿ, ಮೂಡಿಗೆರೆ ರವರು ಧನ್ಯವಾದ ಸಲ್ಲಿಸುವುದರೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು ಮತ್ತು ಅವರು ಸಂಪೂರ್ಣ ಕಾರ್ಯಕ್ರಮವನ್ನು ಸಂಯೋಜಿಸಿದರು.



