baluru gp

 

 

ಪಕ್ಷ ಬೇಧ ಮಾಡದೇ ಶಾಸಕಿಯಾಗಿ ಕ್ಷೇತ್ರದ ಜನರಿಗೆ ಸ್ಪಂಧಿಸುತ್ತೇನೆ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹೇಳಿದರು.

ಅವರು ಮೂಡಿಗೆರೆ ತಾಲ್ಲೂಕಿನ ಬಾಳೂರಿನಲ್ಲಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಪಟ್ಟಣ ಪಂಚಾಯಿತಿಗಿಂತ ಗ್ರಾಮ ಪಂಚಾಯಿತಿಗಳು ಸ್ವಚ್ಛತೆಗೆ ಆಧ್ಯತೆಗೆ ನೀಡುತ್ತಿವೆ. ಆದರೆ ಶಾಲೆಗಳಲ್ಲೂ ಮಕ್ಕಳಿಗೆ ಸ್ವಚ್ಚತೆ ಕಾಪಾಡಲು ಪ್ರೇರೇಪಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಕ್ಕೂಟ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳು, ಮಹಿಳೆಯರು ಮಂಚೂಣಿಯಲ್ಲಿದ್ದಾರೆ. ಯಾವ ಪಕ್ಷದವರು ಬಂದರೂ ನಾನು ತಾರತಮ್ಯ ಮಾಡದೇ ಸೇವೆ ನೀಡಲು ಸಿದ್ದಳಿದ್ದೇನೆ. ಬಾಳೂರಿನಲ್ಲಿ ಸಮುದಾಯ ಭವನಕ್ಕೆ ನನ್ನ ಅನುದಾನದಿಂದ ಹಣ ನೀಡಿ ಅಭಿವೃದ್ದಿಗೆ ಸಹಕರಿಸುತ್ತೇನೆ.

ಒಂದೇ ಸೂರಿನಡಿ ಹಲವು ಸೌಲಭ್ಯ ನೀಡಿ ಗ್ರಾ.ಪಂ.ಅಧ್ಯಕ್ಷ ಬಿ.ಬಿ.ಮಂಜುನಾಥ್ ಅವರು ಸದಸ್ಯರೊಂದಿಗೆ ಸಂಘಟಿತರಾಗಿ ಸಾಧನೆ ಮಾಡಿರುವುದು ಜನಪ್ರತಿನಿದಿಯಾಗಿ ಶ್ಲಾಘನೀಯ ಕಾರ್ಯವಾಗಿದೆ. ನನಗೆ 49 ಗ್ರಾ.ಪಂ.ಸೇರಿವೆ.ಅದರಲ್ಲಿ ಬಾಳೂರು ಸೇರಿ 15 ಗ್ರಾ.ಪಂ.ಗಳಲ್ಲಿ ಜನಸ್ಪಂಧನಾ ಕಾರ್ಯಕ್ರಮ ಬಾಕಿ ಇದೆ. ಅದನ್ನು ಸದ್ಯದಲ್ಲೇ ಜನಸ್ಪಂದನ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುವುದು’ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ’ ಇಚ್ಛಾಶಕ್ತಿಯಿಂದ ಎಂತಹ ಕೆಲಸವನ್ನು ಸಾಧಿಸಬಹುದು. ಚುನಾವಣೆ ತನಕ ಮಾತ್ರ ಪಕ್ಷ. ಬಳಿಕ ಗೆದ್ದ ಮೇಲೆ ಅಭಿವೃದ್ದಿ ಕಾರ್ಯ ಮಾಡುವುದರಿಂದ ಜನ ಮನ್ನಣೆಯ ಜೊತೆಗೆ ಗ್ರಾಮಾಭಿವೃದ್ದಿ ಸಾಧ್ಯವಾಗುತ್ತದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಮಾತನಾಡಿ’ ರಾಷ್ಟ್ರಪತಿಯಾದಿಯಾಗಿ ನಮಗೆ ಜನರನ್ನು ಸಂಪರ್ಕಿಸಿ ಸೇವೆ ಮಾಡಲು ಸಾಧ್ಯವಿಲ್ಲ. ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರಿಗೆ ಮಾತ್ರ ಜನರ ಬಳಿಗೆ ಹೋಗಿ  ಜನರ ಸೇವೆ ಮಾಡಿ ಜನರ ಕಷ್ಟಗಳನ್ನು ಅರಿತು ಹೆಸರು ಗಳಿಸಲು ಸಾಧ್ಯ’ಎಂದರು.

ಗ್ರಾ.ಪಂ.ಅಧ್ಯಕ್ಷ ಬಿ.ಬಿ.ಮಂಜುನಾಥ್ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಸರ್ವರನ್ನು ಸ್ಮರಿಸಿ ಧನ್ಯವಾದ ತಿಳಿಸಿದರು.

ಕಾರ್ಯಕ್ರಮದಲ್ಲಿ ಇಒ ದಯಾವತಿ, ಕೆಡಿಪಿ ಸದಸ್ಯ ಬಿ.ಎಂ.ಭರತ್, ರಘುಪತಿ, ಪಿಡಿಒ ಕೆ.ವಿ. ಶಾರದಾ, ಸದಸ್ಯ ಮನೋಜ್ ಕುಮಾರ್, ವಿಜೇತ,   ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಮಾತನಾಡಿದರು.

ಗ್ರಾಮ ಪಂಚಾಯಿತಿಯಲ್ಲಿ ಸೇವೆ ನೀಡಿದ ಗಣ್ಯರನ್ನು, ಜನಪ್ರತಿನಿಧಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಉಪಾಧ್ಯಕ್ಷೆ ಕೆ.ಆರ್.ಗೀತಾ, ಸದಸ್ಯರಾದ ಪ್ರಕಾಶ್ ಬಿ.ಎಂ, ಜಯಶ್ರೀ, ಶ್ವೇತಾ, ಮನೋಜ್,  ಗ್ರಾ.ಪಂ.ಸಿಬ್ಬಂದಿಗಳು ಹಾಗೂ  ಗ್ರಾಮಸ್ಥರು, ವಿವಿಧ ಪಕ್ಷ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ