IMG-20250327-WA0048_copy_735x432_1

 

 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿ ಹೇಮಾವತಿ ನದಿಗೆ ಕಿಡಿಗೇಡಿಗಳು ವಿಷ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆಯ ಪರಿಣಾಮವಾಗಿ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ನದಿಯ ದಡದಲ್ಲಿ ಹಾಗೂ ನೀರಿನ ಮೇಲ್ಮೈಯಲ್ಲಿ ಮೀನು ಹಾಗೂ ಇತರೆ ಜಲಚರಗಳು ತೇಲುತ್ತಿರುವ ಭಯಾನಕ ದೃಶ್ಯ ಕಂಡುಬಂದಿದೆ.

ಮುಂಗಾರು ಪೂರ್ವದಲ್ಲಿ ನದಿಯಲ್ಲಿ  ವಿಷದ ಪರಿಣಾಮ ನೂರಾರು ಮೀನುಗಳು ಮೃತಪಟ್ಟಿವೆ.

2 ಕಿ.ಮೀ. ಪ್ರದೇಶದೊಳಗೇ ಸಾವಿರಾರು ಮೀನುಗಳು ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.

ಕಿಡಿಗೇಡಿಗಳು ಮೈಲುತುತ್ತು (ನೈಸರ್ಗಿಕ ಅಥವಾ ರಾಸಾಯನಿಕ ವಿಷ) ಬಳಸಿ ಮೀನುಗಳ ಮಾರಣಹೋಮ ನಡೆಸಿದಂತೆ ಅನುಮಾನ ವ್ಯಕ್ತವಾಗಿದೆ.

ವಾಣಿಜ್ಯ ಉದ್ದೇಶಕ್ಕಾಗಿ ಮೀನುಗಳನ್ನು ಕಡಿಮೆ ಖರ್ಚಿನಲ್ಲಿ ಮಾರಾಟ ಮಾಡಲು ಈ ರೀತಿಯ ಕೃತ್ಯ ಎಸಗಿರುವ ಸಾಧ್ಯತೆ ಇದೆ.

ಈ ನೀರು ಹಾಸನದ ಗೊರೂರು ಡ್ಯಾಂ ಸೇರುವ ಹೇಮಾವತಿ ನದಿಗೆ ಸೇರುತ್ತದೆ.

ಮಾರ್ಗಮಧ್ಯೆ ಹತ್ತಾರು ಹಳ್ಳಿಗಳ ಜನ ಕುಡಿಯುವ ನೀರಾಗಿ ಈ ನದಿಯನ್ನು ಅವಲಂಬಿಸಿದ್ದಾರೆ.

ವಿಷಯುಕ್ತ ನೀರು ಮಾನವ ಆರೋಗ್ಯಕ್ಕೂ ಅಪಾಯ ಸೃಷ್ಟಿಸಬಹುದಾದ ಕಾರಣ ಸ್ಥಳೀಯರು ಆತಂಕದಲ್ಲಿದ್ದಾರೆ.

ಸ್ಥಳೀಯರು ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ

ಹೇಮಾವತಿ ನದಿಯಲ್ಲಿ ಈ ರೀತಿಯ ವಿಷಪ್ರಯೋಗದ ಕೃತ್ಯಗಳು ಪುನರಾವೃತವಾಗದಂತೆ ಕಾನೂನು ಕ್ರಮ ವಹಿಸುವಂತೆ ಜನತೆ ಸರ್ಕಾರ ಮತ್ತು ಅರಣ್ಯ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ