28Mudigere1B

 

 

ನೀಶನಕ್ಕಾಗಿ ಕಾಯ್ದಿರಿಸಿದ್ದ ಕೆಲ ಜಾಗವನ್ನು ಪ್ರಬಾವಿಗಳು ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆ. ಇನ್ನು ಕೆಲವರಿಗೆ ಅಕ್ರಮ ಖಾತೆಯಾಗಿದೆ. ಅಕ್ರಮ ಖಾತೆ ವಜಾಗೊಳಿಸಿ, ಒತ್ತುವರಿ ತೆರವುಗೊಳಿಸಿ ನಿವೇಶನಕ್ಕಾಗಿ ಮೀಸಲಿರಬೇಕೆಂದು ವಸತಿಗಾಗಿ ಹೋರಾಟ ವೇದಿಕೆ ಗೌರವಾಧ್ಯಕ್ಷ ಬಿ.ರುದ್ರಯ್ಯ ಒತ್ತಾಯಿಸಿದರು.

ಅವರು ಶುಕ್ರವಾರ ಮೂಡಿಗೆರೆ ತಾಲೂಕು ಕಚೇರಿ ಎದುರು ವಸತಿಗಾಗಿ ಹೋರಾಟ ವೇದಿಕೆ ಹಾಗೂ ಟಿಯುಸಿಐ ವತಿಯಿಂದ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿದರು.

ಜಿ.ಅಗ್ರಹಾರದಲ್ಲಿ 100ಕ್ಕೂ ಅಧಿಕ ಎಕರೆ ಇನಾಂ ಭೂಮಿ ಇದೆ. ಈ ಕಾಯಿದೆ ಉಲ್ಲಂಘಿಸಿ ಅಕ್ರಮ ದಾಖಲೆ ಮಾಡಿ ಭೂ ಕಬಳಿಕೆ ಮಾಡಿದ್ದಾರೆ. ಅದೇ ಗ್ರಾಮದ ಪರಿಶಿಷ್ಟ ಜಾತಿ ಜನರು ವಾಸವಿರುವ ಪಕ್ಕದಲ್ಲಿರುವ ಸುಮಾರು 15 ಎಕರೆ ಭೂಮಿಯನ್ನು ಕೂಡ ಅಕ್ರಮ ಖಾತೆ ಮಾಡಲಾಗಿದೆ. 2008ರಲ್ಲಿ ಅಂದಿನ ತಹಸೀಲ್ದಾರರು ಸ್ಥಳ ತನಿಖೆ ನಡೆಸಿ, ಉಳಿದಿದ್ದ 5 ಎಕರೆ ಭೂಮಿ ನಿವೇಶನಕ್ಕಾಗಿ ಕಾಯ್ದಿರಿಸಿ, ಜಾಗ ಒತ್ತುವರಿಯಾಗದಂತೆ ಸಣ್ಣ ಕಾಲುವೆ ಮಾಡಿದ್ದರು. ಈ ಭೂಮಿ ಕೂಡ ಖಾಸಗಿ ವ್ಯಕ್ತಿಗೆ ಅಕ್ರಮ ಖಾತೆ ಮಾಡಿದ್ದಾರೆ.

ಗೋಣಿಬೀಡು ಗ್ರಾ.ಪಂ. ವ್ಯಾಪ್ತಿಯ ಸರ್ವೆ ನಂ 144ರಲ್ಲಿ 4 ಎಕರೆ ಜಾಗ ನಿವೇಶನಕ್ಕಾಗಿ ಮೀಸಲಿರಿಸಲಾಗಿತ್ತು. ಅದರಲ್ಲಿ 1 ಎಕರೆ ಒತ್ತುವರಿಯಾಗಿದ್ದು, 3 ಎಕರೆ ಭೂಮಿ ಕೂಡ ಕಬಳಿಸಲು ತಂತ್ರ ನಡೆದಿದೆ ಎಂದು ದೂರಿದರು.
ಕಮ್ಮರಗೂಡು ಸರ್ವೆ ನಂ 127ರಲ್ಲಿ 3 ಎಕರೆ ಬೂಮಿ ಅಕ್ರಮ ಖಾತೆ ಮಾಡಲಾಗಿತ್ತು. ಅದನ್ನು ಎಸಿ ವಜಾಗೊಳಿಸಿದ್ದು, ನಂತರ ನಕಾಶೆ ಮಾಡಿದ್ದು ಬಿಟ್ಟರೆ ಸ್ವಾದೀನ ಪಡೆದುಕೊಂಡಿಲ್ಲ.

ಹಳೆ ಮೂಡಿಗೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ 3.30 ಎಕರೆ ಭೂಮಿ ನಿವೇಶನಕ್ಕಾಗಿ ಕಾಯ್ದಿರಿಸಿದ್ದು, ನಮ್ಮ ಹೋರಾಟದ ಫಲವಾಗಿ ಪಟ್ಟಿ ತಯಾರಿಸಲು ಮುಂದಾಗಿದ್ದಾರೆ. ಆದರೆ ರಸ್ತೆ ಸಮಸ್ಯೆ ಬಗೆಹರಿಸುತ್ತೇವೆಂದು 15 ದಿನ ಕಳೆಯಿತು. ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದರು.

ಇಲ್ಲಿನ ಶಾಸಕರು ಭೂ ಮಾಲೀಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಬಡವರ ಮೇಲೆ ಕಿಂಚಿತ್ತು ಕಾಳಜಿಲ್ಲ. ನಿವೇಶನಕ್ಕಾಗಿ 100 ಎಕರೆ ಭೂಮಿ ಕಾಯ್ದಿಸಿರಲಾಗಿದೆ ಎಂದು ಹೇಳುತ್ತಿದ್ದಾರೆ. ಅದು ಭೂಲೋಕದಲ್ಲೋ ಅಥವಾ ಚಂದ್ರಲೋಕದಲ್ಲೇ ಎಂದು ಅವರೇ ಸ್ಪಷ್ಟಪಡಿಸಬೇಕು. ಶಾಸಕರನ್ನು ನಂಬಿಕೊಂಡರೆ ಬಡವರಿಗೆ ನ್ಯಾಯ ಸಿಗುವುದಿಲ್ಲವೆಂಬುದು ಅರಿವಾಗಿದೆ. ಇನ್ನು ಅಧಿಕಾರಿಗಳು ಕೂಡ ಕೈ ಬಿಟ್ಟರೆ ನಾವೇ ಜಾಗ ಗುರುತು ಮಾಡಿ ಟೆಂಟ್ ನಿರ್ಮಿಸಿಕೊಳ್ಳುತ್ತೇವೆಂದು ಎಚ್ಚರಿಕೆ ನೀಡಿದರು.

ಬಳಿಕ ತಹಸೀಲ್ದಾರ್ ರಾಜಶೇಖರ್ ಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಟಿಯುಸಿಐ ಅಧ್ಯಕ್ಷ ಕೆ.ಕೆ.ಕೃಷ್ಣಪ್ಪ, ಕರವೇ ಅಧ್ಯಕ್ಷ ವಿನೋಧ್‍ಕುಮಾರ್, ವಸತಿಗಾಗಿ ಹೋರಾಟ ವೇದಿಕೆ ಅಧ್ಯಕ್ಷ ರಾಜೇಶ್, ರಾಮು ಛತ್ರಮೈಧಾನ, ಹರಿಶ್ ನಲಿಕೆ, ಜಾನಕಿ ಗೋಣಿಬೀಡು, ಯಶೋಧಾ, ಮಂಜುಳ, ಜಾನಕಿ ಸರ್ವೋದಯ ನಗರ, ಸುನಂದ, ಶಾರದ, ಲಕ್ಷ್ಮೀ, ಬೇಬಿ, ಅಶ್ವಿನಿ, ಸುಜಾತ ಸೇರಿದಂತೆ ಗೋಣಿಬೀಡು, ಜನ್ನಾಪುರ, ಹಳೆಮೂಡಿಗೆರೆ ಗ್ರಾಮದ ನಿವೇಶನ ರಹಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ