31Mudigere1B

 

 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮೂಡಿಗೆರೆ ತಾಲ್ಲೂಕು ಘಟಕದ ವತಿಯಿಂದ ಶನಿವಾರ ಸಂಜೆ ಪತ್ರಿಕಾ ಕಚೇರಿಯಲ್ಲಿ ತಿಂಗಳ ಚರ್ಚೆ ಹಾಗೂ ಮಾಹಿತಿ ಕಾರ್ಯಕ್ರಮ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ.ಪಂ. ಅಧ್ಯಕ್ಷ ಕೆ.ವೆಂಕಟೇಶ್ ಅವರೊಂದಿಗೆ ಪ.ಪಂ. ವ್ಯಾಪ್ತಿಯ ವಿವಿಧ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.

ಅನೇಕ ವರ್ಷದಿಂದ ಪಟ್ಟಣದಲ್ಲಿ ಪಾಳು ಬಿದ್ದಿರುವ ಸಾರ್ವಜನಿಕ ಶೌಚಾಲಯ, ಸ್ವಚ್ಛತೆ, ಪಾರ್ಕಿಂಗ್ ವ್ಯವಸ್ಥೆ, ಗೆಂಡೇಹಳ್ಳಿ ರಸ್ತೆಯಲ್ಲಿ ಕಸ ಸಂಗ್ರಹ ಪ್ರದೇಶದಲ್ಲಿ ದುರ್ನಾತ, ಎಲ್ಲೆಂದರಲ್ಲಿ ತಲೆ ಎತ್ತಿರುವ ಕೋಳಿ, ಮೀನು ಮಾಂಸದ ಅಂಗಡಿಗಳು, ಚರಂಡಿ ಅವ್ಯವಸ್ಥೆ, ಇ-ಖಾತೆ, ಹೈಮಾಸ್ಕ್ ಲೈಟ್, ಕುಡಿಯುವ ನೀರು, ಪಾರ್ಕ್ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸಂಘ ಸಂಸ್ಥೆ ಮುಖಂಡರು ಹಾಗೂ ಸಾರ್ವಜನಿಕರು ಪ್ರಶ್ನಿಸುವ ಮೂಲಕ ಹಾಗೂ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಪ.ಪಂ. ಅಧ್ಯಕ್ಷರ ಗಮನ ಸೆಳೆದರು.

ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಪ.ಪಂ. ಅಧ್ಯಕ್ಷ ಕೆ.ವೆಂಕಟೇಶ್ ಮಾತನಾಡಿ, 21 ವರ್ಷದ ನಂತರ ಅಧ್ಯಕ್ಷ ಸ್ಥಾನ ದೊರಕಿದೆ. ತನಗಿರುವ 8 ತಿಂಗಳ ಅವಧಿಯಲ್ಲಿ ಪಟ್ಟಣದವನ್ನು ಸುಂದರಗೊಳಿಸುವ ಮಹದಾಸೆ ಇಟ್ಟುಕೊಂಡಿದ್ದು, ಅದರಂತೆ ಕೆಲ ರೂಪುರೇಷೆಗಳನ್ನು ಸಿದ್ದಪಡಿಸಿಕೊಂಡಿದ್ದೇನೆ. ಈಗಾಗಲೇ ಪ.ಪಂ. ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಜಾಗವಿದೆ ಎಂದು ಪರಿಶೀಲಿಸಲಾಗಿದೆ. ಸುಮಾರು 20ರಿಂದ 30 ಎಕರೆ ಭೂಮಿ ಪ್ರದೇಶದಲ್ಲಿ ಶಾಲೆ, ಆಟದ ಮೈದಾನ, ಸೈಟ್, ಸರಕಾರಿ ಕಟ್ಟಡ ನಿರ್ಮಿಸಲು ಚಿಂತಿಸಲಾಗಿದೆ ಎಂದು ಹೇಳಿದರು.

ಪಟ್ಟಣದಲ್ಲಿ 2 ಹೈಟೆಕ್ ಶೌಚಾಲಯ ನಿರ್ಮಿಸಲಾಗುವುದು. ಈಗ ಮುಚ್ಚಿರುವ 2 ಶೌಚಾಲಯ ತೆರವಿಗೆ ಕ್ರಮ ವಹಿಸಿಸಲಾಗಿದೆ. ಕೋಳಿ, ಮೀನು ಮಾಂಸದಂಗಡಿಯನ್ನು ತೆರವುಗೊಳಿಸಿ ಒಂದೇ ಕಡೆ ಸ್ಥಾಪಿಸಲಾಗುವುದು. 25 ಲಕ್ಷ ರೂ ವೆಚ್ಷದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲಾಗುತ್ತಿದ್ದು, ಕುಡಿಯುವ ನೀರಿಗೆ ಶಾಶ್ವತ ಪರಿಹಾರ ದೊರಕಲಿದೆ. ಕೆಲ ಅಂಗಡಿ, ಹೊಟೇಲ್ ಹಾಗೂ ಮನೆಯವರು ರಸ್ತೆ ಬದಿಯಲ್ಲಿ ಕಸ ಹಾಕಿ ಸ್ವಚ್ಛತೆ ಹಾಳು ಮಾಡುತ್ತಿದ್ದಾರೆ. ಅಂತಹ ಪ್ರದೇಶ ಪಟ್ಟಿ ಮಾಡಿ ಸಿಸಿ ಕ್ಯಾಮರ ಅಳವಡಿಸಲು ಸಿದ್ಧತೆ ಮಾಡಿಕೊಂಡಿದ್ದು, ಇದಾದ ಬಳಿಕ ಕಸ ಹಾಕುವವರಿಗೆ 5 ಸಾವಿರ ದಂಡ ವಿಧಿಸಲಾಗುವುದು.

ಅನೇಕ ರಸ್ತೆ ಬದಿಯಲ್ಲಿ ತಿಂಗಳುಗಟ್ಟಲೆ ವಾಹನ ಪಾರ್ಕಿಂಗ್ ಸಮಸ್ಯೆಗೆ ಶೀಘ್ರದಲ್ಲಿಯೇ ಪೊಲೀಸರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು. ಇದಕ್ಕೆ ಶಾಸಕಿ ನಯನ ಮೋಟಮ್ಮ ಸಹಕರಿಸುತ್ತಿದ್ದು, ತತ್ಕೋಳ ರಸ್ತೆ ಅಗಲೀಕರಿಸಿ, ಸುಲಭ ವಾಹನ ಸಂಚಾರಕ್ಕೆ ಶಾಸಕರು 2 ಕೋಟಿ ಅನುದಾನ ಇಟ್ಟಿದ್ದಾರೆ. ಒಟ್ಟಾರೆ ಪಟ್ಟಣದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಶ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಕರವೇ ಅಧ್ಯಕ್ಷ ವಿನೋಧ್, ಬ್ಯಾರಿ ಒಕ್ಕೂಟದ ಅಧ್ಯಕ್ಷ ಬಿ.ಎಚ್.ಮಹಮ್ಮದ್, ಸಚೇತನ ಯುವ ಸಂಘದ ಅಧ್ಯಕ್ಷ ರವಿರಾಜ್, ಆಟೋ ಸಂಘದ ಕಾರ್ಯದರ್ಶಿ ನಾಗರಾಜ್, ಸ್ಥಳೀಯರಾದ ಎಂ.ಎಸ್.ಕೃಷ್ಣ, ರಾಮು ಛತ್ರಮೈಧಾನ, ಪಟೇಲ್ ಮಂಜು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ