ಮೂಡಿಗೆರೆ ನ್ಯಾಯಾಲಯದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಮೂಡಿಗೆರೆ ಜೆಎಂಎಫ್‍ಸಿ ಹುದ್ದೆ ಜವಾಬ್ದಾರಿ ವಹಿಸಿಕೊಂಡ ನ್ಯಾಯಾಧೀಶೆ ಕೆ.ಕೆ.ಸುರಕ್ಷಾ ಅವರಿಗೆ ಬುಧವಾರ ವಕೀಲರ ಸಂಘದ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿ, ಗೌರವಿಸುವ ಮೂಲಕ ಸ್ವಾಗತ ಸಮಾರಂಭ ನಡೆಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಜಯಪ್ರಕಾಶ್ ಹಾಗೂ ಸಿವಿಲ್ ನ್ಯಾಯಾಧೀಶ ಎ.ವಿಶ್ವನಾಥ್ ಅವರು, ಜನತೆಗೆ ನ್ಯಾಯ ದೊರೆಯುವಲ್ಲಿ ನ್ಯಾಯಾಧೀಶರ ಜವಾಬ್ದಾರಿ ಮತ್ತು ನ್ಯಾಯ ವ್ಯವಸ್ಥೆಯ ಮೇಲಿನ ಜನರ ನಂಬಿಕೆ ಕುರಿತಂತೆ ಆಳವಾದ ಆಲೋಚನೆ ಬಗ್ಗೆ ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಬಿ.ಟಿ.ನಟರಾಜ್, ಕಾರ್ಯದರ್ಶಿ ಕೆ.ಸಿ.ಚಂದ್ರಶೇಖರ್, ಹಿರಿಯ ವಕೀಲರಾದ ಕೆ.ಎಂ.ಪ್ರಶಾಂತ್, ಬಿ.ಜಗದೀಶ್, ಎಂ.ವಿ.ಜಯರಾಜ್, ಸಹಾಯಕ ಸರಕಾರಿ ಅಭಿಯೋಜಕರಾದ ರೂಪ, ರೇಣುಕ ವಕೀಲರದಾದ ಕೆ.ವಿಶಾಲ, ಎನ್.ಜೆ.ಉದಯ್ ಮತ್ತಿತರರಿದ್ದರು.



