jagajeevan ram

 

 

ಮಾಜಿ ಪ್ರಧಾನಿ ಡಾ. ಜಗಜೀವನ್ ರಾಂ ಅವರು ಕೃಷಿ ಸಚಿವರಾಗಿದ್ದಾಗ ಕೈಗೊಂಡ ಹಸಿರು ಕ್ರಾಂತಿಯಿಂದಾಗಿ ದೇಶವು ಇಂದಿಗೂ ಆಹಾರ ಉತ್ಪಾದನೆಯಲ್ಲಿ ಸುಭೀಕ್ಷವಾಗಿದೆ ಎಂದು ಕುಂದೂರು ಗ್ರಾಮ ಪಂಚಾಯಿತಿ ಪಿಡಿಓ ವಾಸುದೇವ್ ಹೇಳಿದರು.

ಮೂಡಿಗೆರೆ ಪಟ್ಟಣದ ತಾಲ್ಲೂಕು ಪಂಚಾಯಿತಿಯ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಶನಿವಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಡಾ. ಬಾಬು ಜಗಜೀವನ್ ರಾಂ ಜನ್ಮ ದಿನಾಚರಣೆಯಲ್ಲಿ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು.

ʼಡಾ. ಬಾಬು ಜಗಜೀವನ್ ರಾಂ ಸಮಾಜದಲ್ಲಿ ಜಾತಿ ವ್ಯವಸ್ಥೆಯು ಸಂಪೂರ್ಣವವಾಗಿ ನಿರ್ಮೂಲನೆಯಾಗಬೇಕು ಎಂದು ಕನಸು ಕಂಡಿದ್ದರು. ಪ್ರಾಥಮಿಕ ಶಿಕ್ಷಣದ ವೇಳೆಯಲ್ಲಿಯೇ ನಿಮ್ನ ವರ್ಗಗಳಿಗಾಗಿ ಶಾಲೆಯಲ್ಲಿ ಇಡುತ್ತಿದ್ದ ನೀರಿನ ಮಡಿಕೆಗಳನ್ನು ಹೊಡೆಯುವ ಮೂಲಕ ಅಸ್ಪೃಷ್ಯತೆ ನಿವಾರಣೆಗೆ ನಾಂದಿಯಾಡಿದ್ದರು. ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸೇರ್ಪಡೆ ಮಾಡಿದ್ದರು. ಸ್ವಾತಂತ್ರ್ಯ ಭಾರತದಲ್ಲಿ ರಕ್ಷಣಾ ಸಚಿವರಾಗಿ, ಕೃಷಿಮಂತ್ರಿಯಾಗಿ ಐತಿಹಾಸಿಕ ಸಾಧನೆ ಮಾಡಿದ್ದು ದೇಶಕ್ಕೆ ಎಂದೂ ಮರೆಯಲಾಗದ ಕೊಡುಗೆಯಾಗಿದೆʼ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊಸ್ಕೆರೆ ರಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಮಹಾನಿಯರ ಜನ್ಮ ದಿನಾಚರಣೆಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೇ, ಅವರುಹಕಿಕೊಟ್ಟ ಆದರ್ಶ ಮಾರ್ಗವನ್ನು ಅನುಸರಿಸಬೇಕು. ಬಡತನದಲ್ಲಿ ಜನಿಸಿದರೂ ಉಪಪ್ರಧಾನಿಯವರೆಗೂ ವಿವಿಧ ಹುದ್ದೆಗಳನ್ನು ನಿಭಾಯಿಸಿ ಮಾದರಿ ಕಾರ್ಯಗಳನ್ನು ಮಾಡಿರುವ ಡಾ. ಬಾಬು ಜಗಜೀವನ್ ರಾಂ ನಮ್ಮೆಲ್ಲರಿಗೂ ಆಡಳಿತಕ್ಕೆ ಪ್ರೇರಣೆಯಾಗಬೇಕುʼ ಎಂದರು.

ತಹಶೀಲ್ದಾರ್ ರಾಜಶೇಖರಮೂರ್ತಿ ಮಾತನಾಡಿ, ʼಬಾಬು ಜಗಜೀವನ್ ರಾಂ ಬಡತನದಲ್ಲಿ ಜನಿಸಿದರೂ, ಶಿಕ್ಷಣದ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸಿದರುʼ ಎಂದರು.


ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಪಿಡಿಓ, ವಾಗ್ಮಿ  ಕೆ. ವಾಸುದೇವ್ ಅವರನ್ನು ತಾಲ್ಲೂಕು ಆಡಳಿತದಿಂದ ಗೌರವಿಸಲಾಯಿತು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಯಾವತಿ, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಬಾಳೂರು, ದೌರ್ಜನ್ಯ ತಡೆ ಸಮಿತಿ ಸದಸ್ಯ ಅಣ್ಣೇಗೌಡ, ಛಲವಾದಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಬೆಟ್ಟಗೆರೆ, ಪಿ.ಕೆ. ಮಂಜುನಾಥ್, ಕಮಲಾಕ್ಷಮ್ಮ, ಲೋಕವಳ್ಳಿ ರಮೇಶ್, ರವಿ ಕುನ್ನಳ್ಳಿ , ಬೆಟ್ಟಗೆರೆ ಶಂಕರ್, ಸೀತಮ್ಮ, , ಲಕ್ಷ್ಮಣಗೌಡ, ಶಾಂತಕುಮಾರ್, ಪ್ರಶಾಂತ್ ಪೂಜಾರಿ, ಶಿವಪ್ರಸಾದ್ ಭಾರತೀಬೈಲು, ರಾಘವೇಂದ್ರ ಚಿನ್ನಿಗ,   ಸರೋಜಾ  ಬೆಟ್ಟಗೆರೆ ಲೋಕೇಶ್, ರುದ್ರಯ್ಯ, ಜಗದೀಶ್  ಮುಂತಾದವರು ಇದ್ದರು.

ಸಮಾಜ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಸೋಮಶೇಖರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ