ಮೂಡಿಗೆರೆ – ಸಕಲೇಶಪುರ ರಸ್ತೆಯಲ್ಲಿ ಹೇಮಾವತಿ ನದಿಗೆ ಹೊಸ ಸೇತುವೆ ನಿರ್ಮಾಣವಾದ ನಂತರ ಇದೀಗ ಹಳೇಯ ಸೇತುವೆಯ ಕಲ್ಲುಗಳನ್ನು ಕಿಡಿಗೇಡಿಗಳು ಅಗೆದು ತೆಗೆಯುವ ಕುಕೃತ್ಯಕ್ಕೆ ಕೈಹಾಕಿದ್ದಾರೆ.
ಹೇಮಾವತಿ ಸೇತುವೆಗೆ ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಐತಿಹಾಸಿಕ ಸೇತುವೆಯು ಇಂದಿಗೂ ಗಟ್ಟಿಮುಟ್ಟಾಗಿದೆ. ನೂರಾರು ವರ್ಷಗಳ ಕಾಲ ಅದು ಜನರ ಸಂಪರ್ಕ ಸೇತುವಾಗಿ ನಿಂತಿದೆ. ಈ ಸೇತುವೆ ಕಿರಿದಾಗಿದೆ ಎಂದು ಹೊಸ ಸೇತುವೆ ನಿರ್ಮಾಣ ಆಗಿದೆ, ಐತಿಹಾಸಿಕ ಹಿನ್ನೆಲೆಯುಳ್ಳ ಹಳೆ ಸೇತುವೆ ಇಂದಿಗೂ ಪ್ರಯಾಣಕ್ಕೆ ಅನುಕೂಲವಾಗಿದೆ.
ಈ ಸೇತುವೆ ಮೇಲೆ ಪ್ರಯಾಣದ ಅಗತ್ಯವಿಲ್ಲ. ಆದರೆ ಕೆಲ ಕಿಡಿಗೇಡಿಗಳು ಹಳೆಸೇತುವೆಯ ಕಲ್ಲುಗಳನ್ನು ತೆಗೆಯುವ ಪ್ರಯತ್ನ ಮಾಡುತ್ತಿದ್ದು ಈ ವಿಚಾರವಾಗಿ ಎಲ್ಲಾ ಗ್ರಾಮಸ್ಥರ ಕೋರಿಕೆ ಏನೆಂದರೆ ಹಳೆಸೇತುವೆ ಈಗ ಹೇಗಿದೆ ಹಾಗೆ ಇರಬೇಕು. ಹಳೆ ಸೇತುವೆಯ ಯಾವುದೇ ಕಲ್ಲುಗಳನ್ನು ಯಾರೂ ಕದ್ದೊಯ್ಯದಂತೆ ಸಂಬಂಧಿಸಿದ ಇಲಾಖೆಗಳು ಕ್ರಮ ವಹಿಸಬೇಕು. ಈಗಾಗಲೇ ಕೆಲ ಕಲ್ಲುಗಳನ್ನು ಕಿತ್ತು ಕೊಂಡೊಯ್ದಿದ್ದು, ಅಂತಹವರನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು.
– ಮೋಹನ್ ಜಾಣಿಗೆ,
ಸಾಮಾಜಿಕ ಕಾರ್ಯಕರ್ತ



