IMG-20250520-WA0052

 

 

ಸಣ್ಣಪ್ರದೇಶದಲ್ಲಿ ಹಸಿರುಕ್ಕಿಸುವ ಜಪಾನಿನ ಮಿಯಾವಾಕಿ ವಿಧಾನ ಅನುಸರಿಸಿದರೆ ನಗರಪ್ರದೇಶದಲ್ಲೂ ದಟ್ಟಹಸಿರನ್ನು ಹೆಚ್ಚಿಸಬಹುದೆಂಬುದನ್ನು ಮಕ್ಕಳು ಸಾಬೀತು ಪಡಿಸಿದ್ದಾರೆ ಎಂದು ಪರಿಸರವಾದಿ ಇಂಜಿನಿಯರ್ ಎನ್.ಎಂ.ಅಜಯ್ ಹರ್ಷಿಸಿದರು.

ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಆರೇಳು ಕಿ.ಮೀ.ದೂರ ಕೈಮರ ಸಮೀಪದ ಹೊಸಳ್ಳಿಗ್ರಾಮದ ಶ್ರೀಗುರು ನಿರ್ವಾಣಸ್ವಾಮಿ ಮಠದ ಪಲ್ಲಕ್ಕಿಹರದಲ್ಲಿ ವರ್ಷದ ಹಿಂದೆ ಪ್ರಾರಂಭಿಸಿದ್ದ ಮಿಯಾವಾಕಿ ಕಿರು ಅರಣ್ಯ 2ನೆಯ ಹಂತದ ವಿಸ್ತರಣಾಕಾರ್ಯಕ್ಕೆ ಮಳೆಯ ನಡುವೆಯೂ ಇಂದು ಚಾಲನೆನೀಡಿ ಅವರು ಮಾತನಾಡಿದರು.

ಸುಮಾರು 5ಗುಂಟೆ ಹರದ ಜಾಗದಲ್ಲಿ ದ್ವಿತೀಯ ಹಂತದ ಕಿರು ಅರಣ್ಯ ವಿಸ್ತರಣಾ ಯೋಜನೆ ಅನ್ವಯ ಸುಮಾರು 500ಸಸಿಗಳನ್ನು ನೆಡಲಾಗುತ್ತಿದೆ. ಕಳೆದವರ್ಷ ಮೇ18 ರಂದು ಇಲ್ಲಿ 4,000 ಚದರಡಿಯಲ್ಲಿ ಮಾವು, ಹಲಸು, ಪನ್ನೇರಳೆ, ಹುಣಸೆ, ನೆಲ್ಲಿ, ಸೀಬೆ, ಸಂಪಿಗೆ, ಮತ್ತಿ, ಅತ್ತಿ ಸೇರಿದಂತೆ ಸುಮಾರು 650 ಸಸಿಗಳನ್ನು ಪ್ರಥಮ ಹಂತದಲ್ಲಿ ನೆಟ್ಟಿದ್ದು ಅವೆಲ್ಲ ಉತ್ತಮ ಗಿಡಗಳಾಗಿ ಹಸಿರನ್ನು ಪಸರಿಸಿರುವುದು ವಿಸ್ತರಣಾ ಕಾರ್ಯಕ್ಕೆ ಪ್ರೇರಣೆ ಎಂದರು.

ಮಿಯಾವಾಕಿ ವಿಧಾನದ ಅರಣ್ಯದಲ್ಲಿ ಹಸಿರು ಹೆಚ್ಚಾಗಿದೆ. ಹಕ್ಕಿಪಕ್ಷಿಗಳು, ಚಿಟ್ಟೆದುಂಬಿಗಳು, ಚಿಕ್ಕಪುಟ್ಟ ಪ್ರಾಣಿಗಳು ಆಶ್ರಯ ಪಡೆಯಬಹುದು. ಸೂರ್ಯಕಿರಣಗಳು ಇಲ್ಲಿ ನೆಲ ತಲುಪುವುದು ಕಷ್ಟವಾಗಲಿದ್ದು ಕಳೆ ಬೆಳೆಯಲು ಅವಕಾಶವಿಲ್ಲ. ಪ್ರಪಂಚದ ವಿವಿಧೆಡೆ ವಿಶೇಷವಾಗಿ ನಗರಪ್ರದೇಶಗಳಲ್ಲಿ 30ಚದರಡಿಯ ಚಿಕ್ಕ ಪ್ರದೇಶದಲ್ಲಿ ಅರಣ್ಯ ಸೃಷ್ಟಿಸುವ ಕಾರ್ಯ ಇದಾಗಿದೆ ಎಂದ ಅಜಯ್, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಇಲಾಖೆಗಳೂ ಈ ನಿಟ್ಟಿನಲ್ಲಿ ಆಸಕ್ತಿವಹಿಸಬಹುದೆಂದರು.

ಜಪಾನಿನ ಸಸ್ಯಶಾಸ್ತ್ರಜ್ಞ-ಪರಿಸರವಾದಿ ಪ್ರೊ.ಅಕಿರಾ ಮಿಯಾವಾಕಿ 1980ರ ದಶಕದಲ್ಲಿ ಕಿರು ಪ್ರದೇಶಗಳಲ್ಲೆ ಒತ್ತೊತ್ತಾಗಿ ಸ್ಥಳೀಯ ಸಸ್ಯಪ್ರಬೇಧಗಳನ್ನು ಬೆಳೆಸುವ ನೂತನಪದ್ಧತಿ ಜಗತ್ತಿಗೆ ಪರಿಚಯಿಸಿದರು. ಗಿಡಗಳು ಬೆಳಕು ಮತ್ತು ಶಾಖ ಪಡೆಯಲು ಹಾಗೂ ಅಸ್ಥಿತ್ವಕ್ಕಾಗಿ ವೇಗಗತಿಯಲ್ಲಿ ಸ್ಪರ್ಧಾತ್ಮಕವಾಗಿ ಊಧ್ರ್ವಮುಖಿಯಾಗಿ ಬೆಳೆಯುತ್ತದೆ ಎಂದ ಅಜಯ್, ಇಲ್ಲಿ ಸಾಮಾನ್ಯ ಅರಣ್ಯಕ್ಕಿಂತ ಹತ್ತುಪಟ್ಟು ವೇಗವಾಗಿ ಬೆಳವಣಿಗೆ ಕಾಣಬಹುದು. ಭೂಮಿಕೊರತೆ ವ್ಯಾಪಕವಾಗಿರುವ ಹಿನ್ನಲೆಯಲ್ಲಿ ಸಣ್ಣ ಪ್ರದೇಶಗಳಲ್ಲಿ ಹಸಿರುಕ್ಕಿಸುವ ಪದ್ಧತಿ ಇದಾಗಿದೆÉ. ಮಕ್ಕಳ ಮೂಲಕ ಸಮಾಜದಲ್ಲಿ ಹಸಿರು ಜಾಗೃತಿ ಮೂಡಿಸುವ ಪುಟ್ಟ ಪ್ರಯತ್ನವಿದು ಎಂದರು.

ಪರಿಸರಪ್ರಿಯ ಜನಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಿರ್ವಾಣಸ್ವಾಮಿ ಮಠದಮನೆಯ ಅನ್ವಿತಾಅಜಯ್ ಮತ್ತು ಅಥರ್ವಾಅಜಯ್, ಅರಳಗುಪ್ಪೆ ಕುಟುಂಬದ ಎ.ಎನ್.ಧ್ರುವ್‍ನಿತಿನ್ ಮತ್ತು ತೊಗರಿಹಂಕಲ್ ಕುಟುಂಬದ ವೇದಾಂತ್ ಮತ್ತು ಸಿರಿನಂದನ್ ಈ ಐವರುಮಕ್ಕಳು ತಮ್ಮ ಬಂಧುಗಳು ಹಾಗೂ ಸ್ನೇಹಿತರೊಂದಿಗೆ ಮಿಯಾವಾಕಿ ವಿಧಾನ ಅನುಸರಿಸಿ ಸಸಿ ಬೆಳೆಸುವ ಕಾರ್ಯವನ್ನು ಕಳೆದವರ್ಷ ಆರಂಭಿಸಿದ್ದರು. ರೌಂಡ್ ಟೇಬಲ್ ಘಟಕವೂ ಸಹಕಾರ ನೀಡಲು ಮುಂದೆ ಬಂದಿದೆ. ಸಸಿ ಪೋಷಣೆಯಲ್ಲೂ ತೊಡಗಿಸಿಕೊಂಡಿದ್ದು ಗಿಡಗಳು ಎತ್ತರಕ್ಕೆ ಬೆಳೆದಂತೆಲ್ಲ ಹರ್ಷಿಸಿ ಸಂಭ್ರಮಿಸಿದ ಪರಿಣಾಮ ಪೋಷಕರು ಕಿರುಅರಣ್ಯ ದುಪ್ಪಟ್ಟಾಗಿಸಲು ಸಹಕರಿಸಿದ್ದಾರೆ. ಇಂದಿನಿಂದ ಮಾವು, ಹಲಸು, ಸೀಬೆ, ನೆರಳೆ, ಸಾಗುವಾನಿ, ನಂದಿ, ಮಹಾಗನಿ, ಗೋಣಿ ಸೇರಿದಂತೆ ಸ್ಥಳೀಯ ಕಾಡುಮರಗಳ ಸಸಿಗಳನ್ನು ನೆಡುವ ಕಾರ್ಯ ಆರಂಭಿಸಲಾಗಿದೆ.

ಶ್ರೀಮಠದ ವರ್ಷದ ಜಾತ್ರೆ ಸಂದರ್ಭದಲ್ಲಿ ಮಾತ್ರ ಹೆಚ್ಚು ಬಳಕೆಗೊಳ್ಳುತ್ತಿದ್ದ ಪಲ್ಲಕ್ಕಿಹರ ಸುತ್ತಲಿನಜನ ತ್ಯಾಜ್ಯ ಸುರಿಯುವ ತಾಣವಾಗಿತ್ತು. ಮಕ್ಕಳ ಆಸಕ್ತಿಯಪಲವಾಗಿ ಇಲ್ಲಿ ವೈವಿಧ್ಯಮಯವಾದ ಗಿಡಗಳು ಆಳೆತ್ತರ ಬೆಳೆದುನಿಂತಿವೆ. 4,000ಚದರಡಿ ಪ್ರದೇಶಕ್ಕೆ ಬೇಲಿನಿರ್ಮಿಸಿ ಕಿರುಅರಣ್ಯಕ್ಕೆ ರಕ್ಷಣೆ ಒದಗಿಸಲಾಗಿದೆ. ಪಕ್ಕದ ಭೂಮಿಯನ್ನೂ ಜೆಸಿಬಿ ಬಳಸಿ ಸಮತಟ್ಟುಗೊಳಿಸಲಾಗಿದೆ. ಮೂರುಅಡಿ ಆಳದ ಮಣ್ಣುತೆಗೆದು ಹಸುವಿನಗೊಬ್ಬರ, ಕಬ್ಬಿನಜಲ್ಲೆಪುಡಿ, ಹೊಸಮಣ್ಣು ಮಿಶ್ರಣವನ್ನು ಹರವಲಾಗಿದೆ. ವಾರದಿಂದ ಬೀಳುತ್ತಿರುವ ಮಳೆ ಭೂಮಿಯನ್ನು ಹಸನಗೊಳಿಸಿದೆ. ಹೊಸತಂತ್ರಜ್ಞಾನದ ಗುಳಿತೆಗೆಯುವ ಯಂತ್ರಬಳಸಿ ಮೂರುಅಡಿಗೊಂದು ಗುಳಿತೆಗೆದು ಸ್ಥಳೀಯ ಸಸ್ಯಪ್ರಬೇಧಗಳನ್ನು ಇಂದಿನಿಂದ ನೆಡಲಾಗುತ್ತಿದೆ. ಸುರಿಯುವ ಮಳೆಯ ನಡುವೆಯೂ ಬಂಧುಮಿತ್ರರೂ ಒಂದೊಂದುಗಿಡ ನೆಟ್ಟು ಬೆಂಬಲಿಸುತ್ತಿದ್ದಾರೆ. ವಾರದೊಳಗೆ 500ಸಸಿಗಳ ಆರೋಹಣಕ್ಕೆ ವ್ಯವಸ್ಥೆಯಾಗಿದೆ.

ಚಿಕ್ಕಮಗಳೂರು ರೌಂಡ್‍ಟೇಬಲ್ ಅಧ್ಯಕ್ಷ ರಾಷ್ಟ್ರಿತ್ ಮತ್ತು ಯುವಜನಸಂಯೋಜಕ ವಿನಯ್‍ರಾಜ್, ಮಕ್ಕಳಸಾಹಸ ಅಭಿನಂದಿಸಿದರು. ಜನಸಂಖ್ಯೆ ಹೆಚ್ಚಳದಿಂದ ಕೃಷಿಭೂಮಿ-ಅರಣ್ಯಗಳೆಲ್ಲ ಕಾಂಕ್ರೀಟಿಕರಣಗೊಳ್ಳುತ್ತಿದೆ. ಜಾಗತಿಕ ತಾಪಮಾನ ಹೆಚ್ಚಾಗಿ ಭೂಮಂಡಲವೇ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ವಿಶ್ವದ ಪರಿಸರತಜ್ಞರು ಹಸಿರು ಹೆಚ್ಚಿಸುವ ಪರಿಹಾರ ಸೂಚಿಸಿರುವ ಸಂದರ್ಭದಲ್ಲಿ ನಮ್ಮೂರಮಕ್ಕಳು ಕಿರು ಅರಣ್ಯ ನಿರ್ಮಿಸುವ ಪ್ರಯತ್ನ ಮಾದರಿ ಎಂದರು.
ಪರಿಸರ ಪ್ರೇಮಿಗಳಾದ ಅರ್ಪಿತಾ-ನಿತಿನ್, ನಂದನ್-ಶ್ರೇಯಾ ಮತ್ತು ಅಶ್ವಿನಿ ದಂಪತಿಗಳು, ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ಮತ್ತಿತರರು ಸಾಕ್ಷೀಕರಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ