ಮೂಡಿಗೆರೆ ಪಟ್ಟಣದ ಮುದ್ರೆಮನೆ ಬಳಿ ಕ್ಯಾಂಟರ್ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದಲ್ಲಿ ಮೂಡಿಗೆರೆ ತಾಲ್ಲೂಕಿನ ಬಣಕಲ್ ಚಕ್ಕಮಕ್ಕಿ ಸಮೀಪದ ಹೊಸಕೆರೆ ಗ್ರಾಮದ ಸಾಗರ್ (22) ಎಂಬ ಯುವಕನಿಗೆ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಲೆಯ ಭಾಗಕ್ಕೆ ತೀವ್ರವಾಗಿ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ಸಾಗರ್ ಸಾವನ್ನಪ್ಪಿದ್ದಾರೆ.
ಸಾಗರ್ ಟಿಂಬರ್ ಕಾರ್ಮಿಕರಾಗಿದ್ದು, ಹೊಸಕೆರೆ ಗ್ರಾಮದ ರವಿ ಮತ್ತು ಸುಧಾ ದಂಪತಿಗಳ ಪುತ್ರ. ಅವರು ಮಂಗಳವಾರ ಮಧ್ಯಾಹ್ನ ಟಿಂಬರ್ ಕೆಲಸ ಮುಗಿಸಿಕೊಂಡು ಗೋಣಿಬೀಡು ಕಡೆಯಿಂದ ಬರುತ್ತಿದ್ದಾಗ ಮುದ್ರೆಮನೆ ಬಳಿ ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಸಾಗರ್ ತಲೆಗೆ ತೀವ್ರವಾಗಿ ಪೆಟ್ಟಾಗಿ ರಕ್ತಸ್ರಾವವಾಗಿತ್ತು.
ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



