ತಮ್ಮ ಊರಿನ ರಸ್ತೆ ಮಳೆಯಿಂದಾಗಿ ತುಂಬಾ ಹಾಳಾಗಿದೆ. ಓಡಾಡಲು ಆಗುತ್ತಿಲ್ಲ. ಮಳೆಗಾಲದಲ್ಲಿ ನಮ್ಮ ಕಷ್ಟ ಹೇಳತೀರದು ಎಂದು 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾಳೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮಲಗಾರು ಗ್ರಾಮದ 8ನೇ ತರಗತಿಯ ಸಿಂಧೂರ ಎಂಬ ವಿದ್ಯಾರ್ಥಿನಿ ಮೋದಿ ಅವರಿಗೆ ಪತ್ರ ಬರೆಯಲು ಕಾರಣ – ಅವರ ಊರಿನ ರಸ್ತೆ ಅವ್ಯವಸ್ಥೆ.
ಮಳೆಗಾಲದಲ್ಲಿ ಕೆಸರುಮಯವಾಗುವ ರಸ್ತೆಯಲ್ಲಿ ಶಾಲೆಗೆ ಹೋಗುವುದು ಬಹು ದುಸ್ತರವಾಗಿದೆ. ಮನೆಯಿಂದ ಶಾಲೆಗೆ ದಿನವೂ 3-4 ಕಿ.ಮೀ. ನಡೆಯುವ ಸಿಂಧೂರ ತಮ್ಮ ಊರಿನ ರಸ್ತೆಯ ದುಸ್ಥಿತಿಯಿಂದ ಬೇಸತ್ತಿದ್ದಾಳೆ. ತನ್ನ ಊರಿನ ಮುಖ್ಯ ರಸ್ತೆಯು ತುಂಬಾ ಹಾಳಾಗಿದ್ದು, ಮಳೆ ಬಂದರೆ ಓಡಾಡುವುದೇ ದುಸ್ತರವಾಗುತ್ತದೆ ಎಂದು ಆರೋಪಿಸಿರುವ ಸಿಂಧೂರ, ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾಳೆ.

ಸಿಂಧೂರ ತನ್ನ ಪತ್ರದಲ್ಲಿ ಹೇಳಿರುವಂತೆ: “ನಮ್ಮ ಊರಿಗೆ ಒಂದು ಉತ್ತಮ ರಸ್ತೆ ಬೇಕಾಗಿದೆ. ಶಾಲೆಗೆ ಹೋಗುವ ಬದಿಯಲ್ಲಿ ಬೇರೆ ದಾರಿಯೇ ಇಲ್ಲ. ರಸ್ತೆ ಶಾಲೆಗೆ ಹೋಗಲು ಸಾಧ್ಯವಿಲ್ಲದಂತಾಗಿದೆ. ಮಕ್ಕಳು, ಮಹಿಳೆಯರು ಎಲ್ಲರೂ ಸಮಸ್ಯೆ ಅನುಭವಿಸುತ್ತಿದ್ದಾರೆ. ದಯವಿಟ್ಟು ನಮ್ಮ ರಸ್ತೆಯನ್ನು ದುರಸ್ತಿ ಮಾಡಿಸಿ.” ಎಂದು ಮನವಿ ಮಾಡಿದ್ದಾಳೆ.
ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಯಲ್ಲಿ ಪತ್ರ ಬರೆದಿರುವ ಈ ಬಾಲಕಿಯ ಹೃದಯಸ್ಪರ್ಶಿ ಮನವಿ ಇದೀಗ ಎಲ್ಲಡೆ ಸದ್ದು ಮಾಡುತ್ತಿದೆ.
ಈ ಭಾಗದ ಈ ರಸ್ತೆ ಮಾತ್ರ ಶಾಲೆಗೆ ತೆರಳುವ ಮಕ್ಕಳಿಗೆ ಅಷ್ಟೇ ಅಲ್ಲದೆ, ದಿನನಿತ್ಯದ ಆರೋಗ್ಯ ಸೇವೆ, ಅಗತ್ಯ ವಸ್ತುಗಳ ಸಾಗಣೆ ಹಾಗೂ ತುರ್ತು ಸಂದರ್ಭಗಳಲ್ಲಿ ಜನರ ಬಳಕೆಗೆ ಏಕೈಕ ಮಾರ್ಗವಾಗಿದೆ. ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಸ್ಪಂದಿಸದೇ ಹೋಗಿರುವಾಗ ಬಾಲಕಿ ನೇರವಾಗಿ ಪ್ರಧಾನಿಯವರಿಗೆ.


