IMG-20250725-WA0365

 

 

ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆಯ ವತಿಯಿಂದ ರಾಜ್ಯ ಸರ್ಕಾರದ ನೂತನ ಸಮುದಾಯ ಬಂಧನ ಕಾರ್ಯಕ್ರಮವಾದ “ಮನೆ ಮನೆ ಪೊಲೀಸ್” ಯೋಜನೆಯನ್ನು ಐದನೇ ಗಸ್ತಿನ ಗ್ರಾಮವಾದ ಬಗ್ಗಸಗೋಡು ಗ್ರಾಮದಲ್ಲಿ ಶುಕ್ರವಾರ ಪ್ರಾರಂಭಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟನಾ ಸಭೆಯಲ್ಲಿ ಬಣಕಲ್ ಠಾಣೆಯ ಪಿಎಸ್‌ಐ ರೇಣುಕಾ. ಡಿ.ವಿ. ಅವರು ಭಾಗವಹಿಸಿ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವವನ್ನು ಗ್ರಾಮಸ್ಥರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿಗಳಾದ ಓಂಕಾರ್ ನಾಯಕ್, ಇಂತಿಯಾಸ್ ಪಾಷ, ರಘು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖ ಮುಖಂಡರಾದ A.C. ಆಯುಬ್ ಅಜಿ ಮತ್ತು ಜಾಬಿರ್ ಹುಸೇನ್ ಸೇರಿದಂತೆ ಅನೇಕ ಗ್ರಾಮಸ್ಥರು ಸಹ ಸಕ್ರಿಯವಾಗಿ ಪಾಲ್ಗೊಂಡು ಪೊಲೀಸ್ ಇಲಾಖೆ ಈ ಹೊಸ ಪ್ರಯತ್ನವನ್ನು ಸ್ವಾಗತಿಸಿದರು.
“ಮನೆ ಮನೆ ಪೊಲೀಸ್” ಯೋಜನೆಯ ಉದ್ದೇಶ ಗ್ರಾಮಸ್ಥರ ಜೊತೆ ಪೊಲೀಸ್ ಇಲಾಖೆಯ ನಿಕಟ ಸಂಪರ್ಕವನ್ನು ಬೆಳೆಸುವದು, ಕಾನೂನು ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕೆ ಸಹಕರಿಸುವದು ಎಂಬುದಾಗಿ ಅಧಿಕಾರಿಗಳು ತಿಳಿಸಿದರು.
ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರದ ಅವಶ್ಯಕತೆಯಿದೆ ಎಂದು ಹೇಳಿದ ಅಧಿಕಾರಿಗಳು, ಜನರೊಡನೆ ಉತ್ತಮ ಸಂಪರ್ಕ ಸಾಧಿಸ ಲು ಈ ಕಾರ್ಯಕ್ರಮ ಬಹುಮುಖ್ಯವಾಗಲಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ