Screenshot_2025-07-27-19-22-29-28_40deb401b9ffe8e1df2f1cc5ba480b12_copy_1005x487_1

 

 

ಭೀಮ್ ಆರ್ಮಿ ”ಸಂಘಟನೆ ವತಿಯಿಂದ ದಿನಾಂಕ 26/7/2025 ನೇ ಶನಿವಾರ. ಆಲ್ದೂರು ಪಟ್ಟಣದ ನಾಡಪ್ರಭು ಕೆಂಪೇಗೌಡ ವೃತ್ತದಲ್ಲಿ ” ಸೌಜನ್ಯ ನ್ಯಾಯಪರ ಹೋರಾಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯ ನೇತೃತ್ವವನ್ನು ಭೀಮ್ ಆರ್ಮಿಯ ಜಿಲ್ಲಾಧ್ಯಕ್ಷ ಗಿರೀಶ್ ಮಾಗರಹಳ್ಳಿ, ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಸತೀಶ್, ಆಲ್ದೂರು  ಹೋಬಳಿ ಅಧ್ಯಕ್ಷರು- ಸುರೇಶ್, ಉಪಾಧ್ಯಕ್ಷರು – ಹರೀಶ್. ಕಾರ್ಯದರ್ಶಿ- ಗಣೇಶ್. ಹಾಗೂ ಭೀಮ್ ಆರ್ಮಿ ಮೂಡಿಗೆರೆ ತಾಲ್ಲೂಕು ಅಧ್ಯಕ್ಷರು – ಹರೀಶ್ ಕೆಲ್ಲೂರು ಕಾರ್ಯಕ್ರಮದ ಪ್ರಮುಖ ನೇತೃತ್ವ ವಹಿಸಿದ್ದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಸೌಜನ್ಯ ಪರ ಹೋರಾಟಗಾರ ಜಗದೀಶ್ ಚಕ್ರವರ್ತಿ ಮಾತನಾಡಿ : ರಾಜ್ಯ ಸರ್ಕಾರದ S.I.T ನಿಯೋಜನೆ ಸ್ವಾಗತಾರ್ಹ, ನಾವುಗಳು ಯಾವುದೇ ಧರ್ಮಗಳ ವಿರೋಧಿಗಳಲ್ಲ. ನಾವು ಗೌರವಿಸುತ್ತಿರುವವರು. ನಾವು ಸಂವಿಧಾನತ್ಮಕವಾಗಿ ಪ್ರತಿಯೊಂದು ಧರ್ಮಗಳನ್ನು ಗೌರವಿಸುತ್ತೇವೆ. ನಾವು ಧಾರ್ಮಿಕ ಭಾವನೆಗಳಿಗೆ, ಕ್ಷೇತ್ರಕ್ಕೆ ದಕ್ಕೆ ತರುವ ಕೆಲಸ ಮಾಡುತ್ತಿಲ್ಲ. ಕ್ಷೇತ್ರಕ್ಕೆ ಅಂಟಿರುವ ಕಳಂಕವನ್ನು ತೊಳೆಯಲು ಮುಂದಾಗಿದ್ದೇವೆ.

”ನಾವು ನ್ಯಾಯದ ಪರ ಅನ್ಯಾಯದ ವಿರುದ್ದ ” ಐ ನ್ಯಾಯಯುತ ಹೋರಾಟದಲ್ಲಿ ಹೋರಾಟದ ಹುಲಿ ಅಣ್ಣ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ತಮ್ಮಣ್ಣ ಶೆಟ್ಟಿ, ಶ್ರೀಮತಿ ಪ್ರಸನ್ನ ರವಿ, ಜಯಂತ್. ಟಿ, ಸೋಮನಾಥ್ ನಾಯಕ್,ಸೌಜನ್ಯ ಳ ತಾಯಿ ಕುಸುಮಾವತಿ ಯವರ ಗಟ್ಟಿ ಹೋರಾಟದ ಪ್ರತಿಫಲವಾಗಿ ಇಂದು ನ್ಯಾಯಪರವಾದ ತನಿಖೆ ನಡೆಸಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಧರ್ಮಸ್ಥಳದಲ್ಲಿ ನಡೆದಿರುವಂತಹ ಪದ್ಮಲತಾ, ವೇದಾವಲ್ಲಿ, ಅನನ್ಯ ಭಟ್, ಯಮುನಾ – ನಾರಾಯಣ(ಅಣ್ಣ ತಂಗಿ) ಜೋಡಿ ಕೊಲೆ. ಇದೆ ರೀತಿ ಅನೇಕ ಹಿಂದೂ ಹೆಣ್ಣುಮಕ್ಕಳ ಅತ್ಯಾಚಾರ & ಕೊಲೆಯನ್ನು ಪ್ರಶ್ನಿಸಲು ಮತ್ತು ನ್ಯಾಯ ಕೇಳಲು ಹಿಂದೂ ನಾಯಕರುಗಳು ಎಂದು ಕರೆಸಿಕೊಳ್ಳುವ ರಾಜಕೀಯ ಪಕ್ಷಗಳ ಮುಖಂಡರುಗಳು ಮುಂದೆ ಬಾರದಿರುವುದು ಹಿಂದೂ ಸಮುದಾಯಕ್ಕೆ ಮತ್ತು ಧರ್ಮಕ್ಕೆ ಮಾಡಿರುವ ಘನಘೋರ ಅನ್ಯಾಯ. ಇದು ಹೇಡಿತನವೋ ಅಥವಾ ಆಮಿಷಕ್ಕೆ ಒಳಗಾಗಿರುವುದೋ ಎಂಬುವುದು ದೊಡ್ಡ ಅನುಮಾನ. ವ್ಯಕ್ತಪಡಿಸಿದರು. ನೂರಾರು ಶವಗಳನ್ನು ಹೂಳಲಾಗಿರುವ ಪ್ರಮುಖ ಸಾಕ್ಷಿದಾರ “ಭೀಮ” ನಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಸರ್ಕಾರ ಮತ್ತು ರಕ್ಷಣಾ ಇಲಾಖೆಯನ್ನು ಒತ್ತಾಯಿಸಿದರು.

ಭೀಮ್ ಆರ್ಮಿ ಜಿಲ್ಲಾಧ್ಯಕ್ಷರು ಗಿರೀಶ್ ಮಾಗರಹಳ್ಳಿ ಮಾತನಾಡಿ ನಾವು ಧರ್ಮದ ವಿರೋಧಿಗಳಲ್ಲ. ನಾವು ಹೀನ ಕೃತ್ಯಗಳ ವಿರೋಧಿಗಳು. ನಾವು ನ್ಯಾಯದ ಪರ. ಎಸ್ ಐ ಟಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ. ತನಿಖಾ ತಂಡದಿಂದ ಹಿಂದೆ ಸರಿಯುತ್ತಿರುವ ಅಧಿಕಾರಿಗಳನ್ನು ತಮ್ಮ ಹುದ್ದೆಯಿಂದ ವಜಾಗೊಳಿಸಬೇಕೆಂದು ಸರ್ಕಾರವನ್ನು ಅಗ್ರಹಿಸಿದರು. ಅತ್ಯಾಚಾರಿ ಕೊಲೆಗಡುಕರಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಅಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಯ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ