ಒಕ್ಕಲಿಗರ ಸರ್ವ ಪಂಗಡಗಳು ಒಗ್ಗೂಡಬೇಕು : ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ರಾಜ್ಯಾಧ್ಯಕ್ಷ ಮದುಸೂಧನ್ ಗೌಡ ಕರೆ
ರಾಜ್ಯದಲ್ಲಿ ಒಕ್ಕಲಿಗರ ಪಂಗಡಗಳೆಲ್ಲಾ ತಮ್ಮ ನಡುವಿನ ಭಿನ್ನತೆಯನ್ನು ತೊರೆದು ಒಂದಾಗಬೇಕು. ಎಲ್ಲಾ ಪಂಗಡಗಳು ಒಟ್ಟಾದಾಗ ಸಮುದಾಯ ಬಲಿಷ್ಠವಾಗಿ ಹೊರಹೊಮ್ಮಲು ಸಾಧ್ಯ ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ರಾಜ್ಯಾಧ್ಯಕ್ಷ ಮದುಸೂಧನ್ ಗೌಡ ಕರೆ ನೀಡಿದರು.

ಅವರು ಶನಿವಾರ ಮೂಡಿಗೆರೆ ತಾಲ್ಲೂಕು ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಏರ್ಪಡಿಸಿದ್ದ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಮೂಡಿಗೆರೆ ತಾಲ್ಲೂಕು ಘಟಕ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಒಕ್ಕಲಿಗ ಎಂಬುದು ವಿಶಾಲವಾದ ಅರ್ಥವನ್ನು ಹೊಂದಿದೆ. ರಾಜ್ಯದಲ್ಲಿ ಒಕ್ಕಲಿಗರು ಒಂದಾಗಿ ಸುಮಾರು 1 ಕೋಟಿ 20 ಲಕ್ಷ ಜನಸಂಖ್ಯೆ ಇದೆ. ಜಾತಿಗಣತಿ ಸಮಯದಲ್ಲಿ ಒಕ್ಕಲಿಗ ಸಮುದಾಯದ ಎಲ್ಲಾ ಪಂಗಡಗಳವರು ಒಕ್ಕಲಿಗ ಎಂದೇ ನಮೂದಿಸಬೇಕು. ಬಂಟ್ಸ್, ಶೆಟ್ಟಿ ಸೇರಿದಂತೆ ಎಲ್ಲಾ ಪಂಗಡಗಳು ಮೂಲದಲ್ಲಿ ಒಕ್ಕಲಿಗರೇ ಆಗಿವೆ. ನಮ್ಮ ನಡುವಿನ ಒಡಕಿನಿಂದ ಒಕ್ಕಲಿಗ ಸಮುದಾಯದ ದಿನದಿಂದ ದಿನಕ್ಕೆ ವಿಂಗಡಣೆಯಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಎಲ್ಲಾ ಒಕ್ಕಲಿಗ ಪಂಗಡಗಳನ್ನು ಒಗ್ಗೂಡಿಸುವುದಕ್ಕೆ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ಶ್ರಮಿಸುತ್ತಿದೆ ಎಂದರು.
ಸಮಾರಂಭದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ಮೂಡಿಗೆರೆ ತಾಲ್ಲೂಕು ಮೂಡಿಗೆರೆ ಪುರುಷ ಮತ್ತು ಮಹಿಳಾ ಘಟಕವನ್ನು ಉದ್ಘಾಟನೆ ಮಾಡಲಾಯಿತು ಘಟಕದ ನೂತನ ಪದಾಧಿಕಾರಿಗಳು ಅಧಿಕಾರ ವಹಿಕೊಂಡರು.
ಒಕ್ಕೂಟದ ಮುಖಂಡರಾದ ಕೆ.ನ. ಲಿಂಗೇಗೌಡ ಮೈಸೂರು ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಖಜಾಂಜಿ ಪೊನ್ನಪ್ಪ ಗೌಡ ಮಡಿಕೇರಿ, ಯಲ್ಲಪ್ಪ ಗೌಡ ಗದಗ್, ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸನ್ನ, ಸ್ಥಳೀಯರಾದ ಎಂ.ಬಿ. ಗೋಪಾಲ ಗೌಡ ಎಲ್ ಐ ಸಿ, ಜಿ.ಯು. ಚಂದ್ರೇಗೌಡ ಗಬ್ಬಳ್ಳಿ, ಎಂ.ಎನ್. ಅಶ್ವಥ್ ಗೌಡ ಮಾಕೋನಹಳ್ಳಿ, ರಾಮಪ್ಪಗೌಡ ಮಾತನಾಡಿದರು.
ವೆಂಕಟೇಶ್ ಗೌಡ ಮಾಕೋನಹಳ್ಳಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಮೂಡಿಗೆರೆ ತಾಲ್ಲೂಕು ಪುರುಷ ಘಟಕದ ನೂತನ ಅಧ್ಯಕ್ಷರಾಗಿ ಶ್ರೀನಿಧಿ ಗೌಡ ಮಾಕೋನಹಳ್ಳಿ, ಕಾರ್ಯದರ್ಶಿಯಾಗಿ ಪ್ರಸನ್ನ ಗೌಡ ಅಂಗಡಿ. ಸಂಘಟನಾ ಕಾರ್ಯದರ್ಶಿಯಾಗಿ ಋತ್ವಿಕ್ ಸಿ ಗೌಡ ಅವರನ್ನು ಅಯ್ಕೆಮಾಡಲಾಯಿತು.
ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶ್ರೀಮತಿ ಅಂಬಿಕಾ ಚಂದ್ರಶೇಖರ್ ಅಂಗಡಿ, ಉಪಾಧ್ಯಕ್ಷೆಯಾಗಿ ಅರ್ಪೀತಾ ರಮೇಶ್ ಗೌಡ ಹೊನ್ನೆಗಂಡಿ, ಕಾರ್ಯದರ್ಶಿಯಾಗಿ ನಿಶಾ ಇಂದನ್ ಗೌಡ ಕಲ್ಮನೆ ಇವರನ್ನು ಅಯ್ಕೆಮಾಡಲಾಯಿತು.



