ರೋಟರಿ ಸಂಸ್ಥೆ ಮೂಡಿಗೆರೆ ಇವರ ವತಿಯಿಂದ ತಾಲ್ಲೂಕಿನ ದಾರದಹಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಶಾಲೆಯ ಆವರಣ ಮತ್ತು ಸುತ್ತಾಮುತ್ತಾ ಗಿಡಗಳನ್ನು ನಡೆವ ಮೂಲಕ ಮತ್ತು ವಿದ್ಯಾರ್ಥಿಗಳಿಗೆ ಹಣ್ಣಿನ ಗಿಡಗಳನ್ನು ವಿತರಣೆ ಮಾಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಹೆಚ್.ಎನ್. ಪ್ರಸಾದ್ ಮಾತನಾಡಿ ; ಪರಿಸರ ಮತ್ತು ಋತುಮಾನಗಳ ಸಮತೋಲನದಿಂದ ಇರಬೇಕು ಎಂದರೆ ನಾವು ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರ ವಹಿಸಬೇಕು. ದಿನದಿಂದ ದಿನಕ್ಕೆ ಜಾಗತೀಕ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಜಾಗತೀಕ ತಾಪಮಾನ ಇದೇ ರೀತಿ ಏರುತ್ತಾ ಸಾಗಿದರೆ ಭವಿಷ್ಯದಲ್ಲಿ ಯಾವುದೇ ಜೀವ ಸಂಕುಲ ಭೂಮಿಯ ಮೇಲೆ ಉಳಿಯುವುದಿಲ್ಲ. ಜಾಗತಿಕ ತಾಪಮಾನದಲ್ಲಿ ಆಗುತ್ತಿರುವ ವ್ಯತ್ಯಯಕ್ಕೆ ಮಾನವನ ಕಾರ್ಯಚಟುವಟಿಕೆಗಳೇ ಕಾರಣವಾಗಿದೆ. ಅತಿಯಾದ ಪರಿಸರ ಮಾಲೀನ್ಯ, ಕೈಗಾರಿಕೆಗಳ ಹೆಚ್ಚಳದಿಂದ ತಾಪಮಾನ ಏರಿಕೆಯಾಗಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ನಾವು ಎಚ್ಚೆತ್ತುಕೊಂಡು ಹೆಚ್ಚು ಹೆಚ್ಚು ಗಿಡಮರಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ರೋಟರಿ ಮಾಜಿ ಅಧ್ಯಕ್ಷ ನರೇಂದ್ರ ಶೆಟ್ಟಿ, ವಿಕಾಸ್ ಕೆ.ವಿ, ಅಬ್ರಾರ್ ಅಹಮ್ಮದ್, ರಂಜಿತ್, ವಿಕ್ರಂ, ಶಾಲೆಯ ಶಿಕ್ಷಕರು ಗ್ರಾಮಸ್ಥರು ಉಪಸ್ಥಿತರಿದ್ದರು.




