india

 

 

ತೆಂಡುಲ್ಕರ್‌- ಆ್ಯಂಡರ್‌ಸನ್‌ ಟೆಸ್ಟ್‌ ಸರಣಿಯ ಐದನೇ ಪಂದ್ಯದ ಐದನೇ ದಿನ ಭಾರತ ಇಂಗ್ಲೆಂಡ್‌ ವಿರುದ್ಧ ರೋಚಕ 6 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ 2-2 ರಲ್ಲಿ ಸಮಬಲಗೊಂಡಿದೆ.

ಇಂಗ್ಲೇಂಡ್ ನ ಓವಲ್‌ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯಲ್ಲಿ ಟೀಂ ಇಂಡಿಯಾ ನೀಡಿದ್ದ ಕಠಿಣ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್‌  ತಂಡ ರೋಚಕ ಹೋರಾಟ ನಡೆಸಿತಾದರೂ ಅಂತಿಮವಾಗಿ 85.1 ಓವರ್‌ಗಳಲ್ಲಿ 367 ರನ್‌ಗಳಿಗೆ ಆಲೌಟ್‌ ಆಗಿ 6 ರನ್ ಗಳಿಂದ ಸೋಲೊಪ್ಪಿಕೊಂಡಿತು.

2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಗೆಲುವಿಗೆ 374 ರನ್‌ಗಳ ಬೃಹತ್‌ ಗುರಿಯನ್ನು ಭಾರತ ನೀಡಿತ್ತು. ಬೃಹತ್‌ ಮೊತ್ತವನ್ನು ಗುರಿ ಬೆನ್ನತ್ತಿದ ಇಂಗ್ಲೆಂಡಿಗೆ ಕೊನೆಯ ದಿನ 4 ವಿಕೆಟ್‌ ಸಹಾಯದಿಂದ 35 ರನ್‌ ಬೇಕಿತ್ತು.

ನಾಲ್ಕನೇಯ ದಿನ ಅಜೇಯರಾಗಿದ್ದ ಸ್ಮಿತ್‌ ನಿನ್ನೆಯ ಮೊತ್ತವಾದ 2 ರನ್‌ಗೆ ಸಿರಾಜ್‌   ಬೌಲಿಂಗ್‌ನಲ್ಲಿ ಕ್ಯಾಚ್‌ ನೀಡಿ ಔಟಾದರೆ, ಓವರ್‌ಟನ್‌ 8 ರನ್‌ಗಳಿಸಿ ಸಿರಾಜ್‌ ಎಲ್‌ಬಿ ಔಟಾದರು. ಜೋಶ್‌ ಟಂಗ್‌ ಅವರನ್ನು ಪ್ರಸಿದ್ಧ್‌ ಕೃಷ್ಣ   ಬೌಲ್ಡ್‌ ಮಾಡಿದರು. 10ನೇಯವರಾಗಿ ಗಂಭೀರವಾಗಿ ಗಾಯಗೊಂಡಿದ್ದ ಕ್ರೀಸ್‌ ವೋಕ್ಸ್‌ ಮೈದಾನಕ್ಕೆ ಇಳಿದಿದ್ದರು. ಸಿರಾಜ್‌ 17 ರನ್‌ ಹೊಡೆದಿದ್ದ ಗಸ್ ಅಟ್ಕಿನ್ಸನ್ ಬೌಲ್ಡ್‌ ಮಾಡುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು.

ಸಿರಾಜ್‌ 5 ವಿಕೆಟ್‌ ಕಿತ್ತರೆ ಪ್ರಸಿದ್ಧ್‌ ಕೃಷ್ಣ 4 ವಿಕೆಟ್‌ ಪಡೆದರು. ಈ ಪಂದ್ಯದಲ್ಲಿ 9  ವಿಕೆಟ್‌ ಪಡೆದ ಸಿರಾಜ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಸರಣಿಯಲ್ಲಿ ಇಂಗ್ಲೇಂಡ್ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ಹ್ಯಾರಿ ಬ್ರೂಕ್‌ ಹಾಗೂ ಭಾರತ ಪರವಾಗಿ ಅತಿಹೆಚ್ಚು ರನ್ ಗಳಿಸಿದ ನಾಯಕ ಶುಭ್ಮನ್ ಗಿಲ್  ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಸಂಕ್ಷಿಪ್ತ ಸ್ಕೋರ್‌
ಭಾರತ ಮೊದಲ ಇನ್ನಿಂಗ್ಸ್‌ 224/10
ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ 247/10
ಭಾರತ ಎರಡನೇ ಇನ್ನಿಂಗ್ಸ್‌ 396/10
ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ 367/10

https://x.com/SonySportsNetwk/status/1952327225866322022?ref_src=twsrc%5Etfw%7Ctwcamp%5Etweetembed%7Ctwterm%5E1952327225866322022%7Ctwgr%5E89be4d1b9b3333c52ecfd4b56aa48c8d173d2734%7Ctwcon%5Es1_c10&ref_url=https%3A%2F%2Fpublictv.in%2Fengland-vs-india-5th-test-at-london-india-won-by-6-runs%2F

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ