nandipura1

 

 

ಮೂಡಿಗೆರೆ ತಾಲ್ಲೂಕು ನಂದೀಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಹಿರಿಯ ಸದಸ್ಯ ಎಂ.ಎಸ್. ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ರಘು ಅವರು ಜೆಡಿಎಸ್ ಪಕ್ಷದೊಳಗಿನ ಒಪ್ಪಂದದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಸದಸ್ಯ ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗುರುವಾರ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ.ಎಸ್. ರಮೇಶ್ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಘೋಷಣೆ ಮಾಡಲಾಯಿತು.

ಚುನಾವಣಾ ಅಧಿಕಾರಿಯಾಗಿ ಮೂಡಿಗೆರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಸುಮಾ ಕಾರ್ಯನಿರ್ವಹಿಸಿದ್ದರು.

ಈ ಭಾಗದಲ್ಲಿ ಜೆಡಿಎಸ್ ನ ಪ್ರಭಾವಿ ಮುಖಂಡರಾಗಿರುವ  ಎಂ.ಎಸ್. ರಮೇಶ್ ಅವರು ಸತತವಾಗಿ ನಾಲ್ಕನೇ ಅವಧಿಗೆ ನಂದೀಪುರ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಇದೀಗ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ಎರಡು ಅವಧಿಗೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ನೂತನ ಅಧ್ಯಕ್ಷರಾಗಿ ಎಂ.ಎಸ್. ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬಿಜೆಪಿ ಮುಖಂಡರ ದೀಪಕ್ ದೊಡ್ಡಯ್ಯ, ಮುಖಂಡರಾದ  ಗಬ್ಬಳ್ಳಿ ಚಂದ್ರೇಗೌಡ, ಎಂ.ಎನ್. ಅಶ್ವಥ್, ಎಂ.ಎಲ್. ಕಲ್ಲೇಶ್, ಎಂ.ಸಿ.ಹೂವಪ್ಪ, ರೆಹಮಾನ್ ಇಂದ್ರವಳ್ಳಿ, ಮನು ಮಾಲಳ್ಳಿ, ಸಂದೀಪ್ ನಂದೀಪುರ, ಯೋಗೇಶ್ ಗೌತಳ್ಳಿ, ಪುಟ್ಟಣ್ಣ ಗೌತಳ್ಳಿ, ಶಂಕರೇಗೌಡ ಮಾಲಳ್ಳಿ, ರುದ್ರೇಶ್ ಕೋಲ್ಗೋಡು, ಮಹಮ್ಮದ್ ಷರೀಫ್ ಕೋಲ್ಗೂಡು, ಲೂಯಿಸ್ ಮಿಸ್ಕಿತ್, ದೇವೇಗೌಡ ಬೊಮ್ಮೇನಹಳ್ಳಿ, ಸುರೇಶ್ ಸಂಗಮಪುರ, ಮಲ್ಲೇಗೌಡ ಇಂದ್ರವಳ್ಳಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಸನ್ನ, ರಘು, ಉಪಾಧ್ಯಕ್ಷೆ ನಳಿನಿ ರಘುನಾಥ್, ಸದಸ್ಯರಾದ ಲೀಲಾ, ಶಶಿಕಲಾ, ಭಾರತಿ, ಸುಂದರೇಶ್ ಹಾಗೂ ಪಿಡಿಓ ಪ್ರತಿಮಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ