ಮೂಡಿಗೆರೆ ಟೈಲರ್ ಸಂಘದಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಸಬಾ ಹೋಬಳಿಯ ದುಂಡುಗ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ, ಲೇಖನಿ ಸಾಮಾಗ್ರಿಗಳನ್ನು ನೀಡಿ ಶುಭ ಕೋರಲಾಯಿತು.
ಟೈಲರ ಕ್ಷೇತ್ರ ಸಮಿತಿ ಅಧ್ಯಕ್ಷ ಶಿವೇಗೌಡ, ನಗರಾಧ್ಯಕ್ಷರು ಉಮಾಶಂಕರ್, ಸತೀಶ್, ಷಣ್ಮುಖಾನಂದ, ಗಿರೀಶ್,ಮಂಜು, ಪ್ರಕಾಶ್, ಮಂಜುಳಾ, ಶೃತಿ, ಮೋಹನ್, ನಂದೀಶ್,ಮಮತ, ಸುರೇಶ್, ಜ್ಯೋತಿ, ನರಸಿಂಹ ಟೈಲರ್ ಮುಖ್ಯೋಪಾಧ್ಯಾಯರಾದ ದೇವಕಿ,ಸಹ ಶಿಕ್ಷಕರಾದ ಕೃಷ್ಣ ಉಪಸ್ಥಿತರಿದ್ದರು
ಮುಖ್ಯ ಶಿಕ್ಷಕರು ದೇವಕಿ ಮಾತನಾಡಿ ಬಡ ಮಕ್ಕಳೇ ಇರುವ ಸರ್ಕಾರಿ ಶಾಲೆಗೆ ಬಂದು ಶಿಕ್ಷಣಕ್ಕೆ ಪೂರಕವಾದ ಅಗತ್ಯವಾದ ಪುಸ್ತಕ ಲೇಖನ ಸಾಮಗ್ರಿ, ಮತ್ತು ಸಮವಸ್ತ್ರವನ್ನು ನೀಡಿ ಸಹಕರಿಸಿರುವುದು ಅರ್ಥಪೂರ್ಣ ಸ್ವಾತಂತ್ರ್ಯ ಆಚರಣೆಗೆ ಹಿಡಿದ ಕೈಗನ್ನಡಿ ಹಾಗೂ ಶ್ಲಾಘನೀಯ ಸೇವೆ ಆಗಿದೆ ಎಂದರು.
ನರಸಿಂಹ ಟೈಲರ್ ಮಾತನಾಡಿ ; ಮಕ್ಕಳು ಅತಿಯಾಗಿ ಮೊಬೈಲ್ ಬಳಸದೆ ಶಿಕ್ಷಣದ ಕಡೆ ಗಮನವಿಟ್ಟು ಹೆತ್ತವರಿಗೂ ತಾನು ಕಲಿತ ಶಾಲೆಗೂ ಕೀರ್ತಿ ತರುಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷರಾದ ಶಿವೆಗೌಡ ಮಾತನಾಡಿ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಸಮುದಾಯದ ಏಳಿಗೆಗೆ ಶ್ರಮಿಸಬೇಕೆಂದರು, ನಗರಾಧ್ಯಕ್ಷೆ ಉಮಾಶಂಕರ್ ಮಾತನಾಡಿ ಸಂಘ ನೀಡಿದ ವಸ್ತುಗಳನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡೆದುಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಎಂದು ಶುಭ ಹಾರೈಸಿದರು.




