ಮೂಡಿಗೆರೆ ತಾಲೂಕು ಬೆಳೆಗಾರರ ಸಂಘ ಮತ್ತು ಮೂಡಿಗೆರೆ ನಗರ ಟೈಲರ್ ಸಮಿತಿ ವತಿಯಿಂದ 79 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಬೆಳೆಗಾರರ ಸಂಘದ ಕಟ್ಟಡದ ಆವರಣದಲ್ಲಿ ಇರುವ ಧ್ವಜಸ್ತಂಭದಲ್ಲಿ ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ.ಆರ್.ಬಾಲಕೃಷ್ಣ ಧ್ವಜಾರೋಹಣ ನೆರವೇರಿಸಿ ಮಾತನಾಡಿ ; ನಮ್ಮ ಭಾರತ ದೇಶವು ಸ್ವಾತಂತ್ರ್ಯ ಪಡೆದ ನಂತರ ಹಲವಾರು ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡುತ್ತಿದೆ. ಇಂದು ವಿಶ್ವದ ಅಗ್ರಗಣ್ಯ ರಾಷ್ಟ್ರಗಳಲ್ಲಿ ನಮ್ಮ ದೇಶವೂ ಒಂದೆಂದು ಗುರುತಿಸಿಕೊಂಡಿದೆ. ತಂತ್ರಜ್ಞಾನ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ನಮ್ಮ ದೇಶದ ಸಾಧನೆಯನ್ನು ಕಂಡು ವಿಶ್ವವೇ ಬೆರಗಾಗಿದೆ. ನಮ್ಮ ದೇಶದಲ್ಲಿ ಕೃಷಿಕರು ಇನ್ನೂ ಸಾಕಷ್ಟು ಸಮಸ್ಯೆಗಳಲ್ಲಿಯೇ ಇದ್ದಾರೆ. ಸರ್ಕಾರಗಳು ಕೃಷಿ ಕ್ಷೇತ್ರದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಜನರು ದೇಶಪ್ರೇಮ ಬೆಳೆಸಿಕೊಂಡು ಪ್ರತಿಯೊಬ್ಬರು ದೇಶದ ಉನ್ನತಿಗಾಗಿ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಕೆಜಿಎಫ್ ಅಧ್ಯಕ್ಷರಾದ ಹಳಸೆ ಶಿವಣ್ಣ, ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್, ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಬಿ.ಎಸ್ ಜಯರಾಂ, ಹಿರಿಯರಾದ ಜಿ.ಹೆಚ್. ಹಾಲಪ್ಪಗೌಡ, ಮೋಹನ್ ಲಾಲ್ ಜೈನ್, ಡಿ.ಎಸ್.ರಘು, ರೇವಣ್ಣಗೌಡ, ಬಿ. ಬಸವರಾಜು, ಬ್ರಿಜೇಶ್ ಕಡಿದಾಳು, ಟೈಲರ್ ಸಂಘದ ನಗರ ಅಧ್ಯಕ್ಷರಾದ ಶ್ರೀಮತಿ ಉಮಾ ಶಂಕರ್, ಹೆಚ್.ಎಂ ಶಿವೇಗೌಡ, ಮನು, ಪೂರ್ಣೇಶ್, ನರಸಿಂಹ, ಬಸವರಾಜ್, ಮಂಜುಳಾ, ಗಿರೀಶ್ ,ಮಂಜು, ಷಣ್ಮುಖಾನಂದ,ಪ್ರಕಾಶ್, ಶೃತಿ, ಗೋಪಾಲ್, ಯೋಗೇಶ್,ಮತ್ತಿತರರು ಉಪಸ್ಥಿತರಿದ್ದರು.




