ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೂಡಿಗೆರೆ ವೇಣುಗೋಪಾಲ ದೇವಸ್ಥಾನದಲ್ಲಿ ಪುಟಾಣಿಗಳಿಗೆ ರಾಧೆ ಮತ್ತು ಶ್ರೀ ಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು.
ಮೂಡಿಗೆರೆ ಪಟ್ಟಣ ಹಾಗೂ ಸುತ್ತಮುತ್ತಲಿನ ನೂರಾರು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ತಮ್ಮ ಮಕ್ಕಳನ್ನು ವೈವಿದ್ಯಮಯವಾದ ವೇಷಗಳಿಂದ ತಯಾರಿ ಮಾಡಿ ಪೋಷಕರು ಕರೆತಂದಿದ್ದರು. ರಾಧೆ ಮತ್ತು ಶ್ರೀ ಕೃಷ್ಣನ ವೇಷದಲ್ಲಿ ತಮ್ಮ ಮಕ್ಕಳ ಮುಗ್ಧ ನೋಟವನ್ನು ಕಂಡು ಪೋಷಕರು ಪುಳಕಿತರಾದರು.
ಶ್ರೀ ವೇಣುಗೋಪಾಲ ಸ್ವಾಮಿ ದೇವಾಸ್ಥಾನ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.



