kaadu 2

 

 

ಆನೆ ಮತ್ತು ಕಾಡು ಪ್ರಾಣಿಗಳ ಹಾವಳಿಯಿಂದ ರೈತರು, ಕಾಫಿ ಬೆಳೆಗಾರರು, ಕೃಷಿ ಕಾರ್ಮಿಕರ ನೂರಾರು ಜೀವ ಹಾನಿ ಮತ್ತು ಬೆಳೆ ನಷ್ಟಕ್ಕೆ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಗ್ರೀನ್ ಆರ್ಮಿ ಇಂಡಿಯಾ ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್ ” ಒತ್ತಾಯಿಸಿದರು.

ಅವರು ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ರಾಜ್ಯದ ಮಲೆನಾಡು ಪ್ರದೇಶದಲ್ಲಿ ಅತಿವೃಷ್ಟಿಯಿಂದ ಅತಿಯಾದ ಶೀತದ ವಾತಾವರಣದಿಂದ ಕಾಫಿ, ಆಡಿಕೆ, ಮೆಣಸು ಸೇರಿದಂತೆ ಇತರೆ ಬೆಳೆಗಳು ಶೇ. 70 ರಷ್ಟು ಕೊಳೆತು ನಾಶವಾಗಿರುವುದರಿಂದ ಕೂಡಲೇ ಪರಿಹಾರ ಘೋಷಣೆ ಮಾಡಬೇಕೆಂದು ಹೇಳಿದರು. ಮಲೆನಾಡಿನಲ್ಲಿ ಆನೆ ಮತ್ತು

ಅರಣ್ಯ  ಇಲಾಖೆ ಆನೆಗಳನ್ನು ತಕ್ಷಣ ಮರಳಿ ಕಾಡಿಗೆ ಸೇ-ರಿಸುವುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆನೆ ಕಾರ್ಯಪಡೆ ರಚಿಸಬೇಕು. ಅರಣ್ಯದಲ್ಲಿ ಮಾಡಿರುವ ಆನೆಗಳ ಕಂದಕ ಬ್ಯಾ-ರಿಕೇಡ್, ಟಿಂಟಿಕಲ್ ಫೆನ್ಸಿಂಗ್ ಇವುಗಳನ್ನು ಸರಿಪಡಿಸುವ ವ್ಯವಸ್ಥೆ ಮಾಡಬೇಕು ಎಂದರು. ರೈತರು ಭತ್ತವನ್ನು ಬೆಳೆಯಲು ಎಕರೆಗೆ 25 ಸಾವಿರ ರೂ. ಸರ್ಕಾರ ಸಹಾಯ ಧನ ಘೋಷಣೆ ಮಾಡಬೇಕು. ರೈತ ಮತ್ತು ಕೃಷಿ ಕಾರ್ಮಿಕರು ಮತ್ತು ಜನಸಾಮಾನ್ಯರ ಪ್ರಾಣ ಹಾನಿಗೆ 30 ಲಕ್ಷ ರೂ. ಪರಿಹಾರ ನೀಡಬೇಕು. ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಹಾಗೂ ರೈತ ಮತ್ತು ಕಾಫಿ ಬೆಳೆಗಾರರು ಬೆಳೆದ ಬೆಳೆಗಳಾದ ಅಡಿಕೆ, ಕಾಫಿ, ಬಾಳೆ, ಮೆಣಸು, ಏಲಕ್ಕಿ ತೆಂಗು ಇತರೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡಿ ಪರಿಹಾರ ನೀಡಬೇಕೆಂದು ಅಗ್ರಹಿಸಿದ್ದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಡಿ.ಎಸ್. ರಮೇಶ್ ದಾರದಹಳ್ಳಿ, ಸುದೀರ್ ಅಣಜೂರ್, ತುಳಸೇಗೌಡ, ರಾಮಚಂದ್ರೇಗೌಡ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ