ಚಿಕ್ಕಮಗಳೂರು ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ ಮತ್ತು ಜುಲೈ-2025 ತಿಂಗಳಲ್ಲಿ ಚಿಕ್ಕಮಗಳೂರು ವೇಣುಗೋಪಾಲ ದೇವಾಲಯದ ಸಮೀಪ ಎರಡು ಮನೆಗಳಲ್ಲಿ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದ ಪ್ರಕರಣದಲ್ಲಿ ಡಿ.ವೈ.ಎಸ್.ಪಿ. ಚಿಕ್ಕಮಗಳೂರು ಉಪವಿಭಾಗ ರವರ ನೇತೃತ್ವದ ಪೊಲೀಸ್ ತಂಡವು ಓರ್ವ ಆರೋಪಿಯನ್ನು ದಸ್ತಗಿರಿ ಮಾಡಿರುತ್ತಾರೆ.
ಆರೋಪಿಯಿಂದ ರೂ. 6 ಲಕ್ಷ ಮೌಲ್ಯದ 71 ಗ್ರಾಂ ತೂಕದ ಚಿನ್ನಾಭರಣಗಳು, ರೂ. 25,000/- ಮೌಲ್ಯದ 100 ಗ್ರಾಂ ತೂಕದ ಬೆಳ್ಳಿ ಆಭರಣಗಳು, ಕಳವು ಮಾಡಲು ಉಪಯೋಗಿಸಿದ್ದ ಒಂದು ಲಕ್ಷ ಮೌಲ್ಯದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ಸೇರಿದಂತೆ ಒಟ್ಟು ರೂ. 7.25 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿರುತ್ತಾರೆ.
ಪೊಲೀಸ್ ತಂಡದಲ್ಲಿ ಡಿ.ವೈ.ಎಸ್.ಪಿ. ಶೈಲೇಂದ್ರ ಹೆಚ್ ಎಂ, ಸಿಪಿಐ ವಿಜಯಕುಮಾರ ಎಂ ಬಿರಾದಾರ, ಪಿ.ಎಸ್.ಐ. ಗಳಾದ ಕೀರ್ತಿಕುಮಾರ್, ಅಜರುದ್ದೀನ್ ಮತ್ತು ನಾಗೇಶ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ರವೀಂದ್ರ, ಮಧುಸೂಧನ್, ಲಿಂಗಮೂರ್ತಿ, ಮಾಲತೇಶ, ಜಯರಾಮ, ಸತೀಶ್ ಮತ್ತು ಇಬ್ರಾಹಿಂ ರವರು ಕಾರ್ಯನಿರ್ವಹಿಸಿರುತ್ತಾರೆ.



