Gowdahalli society 3

 

 

ಸಹಕಾರ ಕ್ಷೇತ್ರ ಅತ್ಯಂತ ಪವಿತ್ರವಾದುದು, ಪ್ರಾಮಾಣಿಕವಾಗಿ, ಪಕ್ಷಾತೀತವಾಗಿ ಕಾರ್ಯನಿರ್ವಹಿಸುವ ಮೂಲಕ ಸಹಕಾರ ಸಂಘಗಳನ್ನು ಯಶಸ್ವಿಯಾಗಿ ಮುನ್ನಡೆಸಬೇಕು ಎಂದು ಜಿಲ್ಲಾ ಸಹಕಾರ ಯೂನಿಯನ್  ಉಪಾಧ್ಯಕ್ಷ ಮತ್ತು ಗೌಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ. ದಿವಾಕರ್ ಅಭಿಪ್ರಾಯಿಸಿದರು.

ಶುಕ್ರವಾರ ಮೂಡಿಗೆರೆ ತಾಲ್ಲೂಕಿನ ಗೌಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಹಕಾರ ಸಂಘದಲ್ಲಿ ಸದಸ್ಯರ ಸಹಭಾಗಿತ್ವ ಬಹುಮುಖ್ಯವಾಗಿದೆ. ಸದಸ್ಯರಾದವರು ಸಹಕಾರ ಸಂಘದಲ್ಲಿ ನಿರಂತರ ವ್ಯವಹಾರ ಮಾಡಿದರೆ ಇದರಿಂದ ಸದಸ್ಯರಿಗೂ ಹೆಚ್ಚಿನ ಅನುಕೂಲ ಹಾಗೂ ಸಂಘದ ಬೆಳವಣಿಗೆಗೂ ಇದು ಸಹಾಯಕವಾಗುತ್ತದೆ. ಸಹಕಾರ ಸಂಘದ ಮೂಲಕ ರೂ. 3 ಲಕ್ಷದ ವರೆಗೆ ರೈತರಿಗೆ ಬಡ್ಡಿರಹಿತ ಬೆಳೆ ಸಾಲ ನೀಡಲಾಗುತ್ತಿದೆ. ಸರ್ಕಾರ 5 ಲಕ್ಷದ ವರೆಗೆ ಶೂನ್ಯಬಡ್ಡಿದರದಲ್ಲಿ ಸಾಲ ನೀಡುವುದಾಗಿ ಘೋಷಣೆ ಮಾಡಿದೆ ಆದರೆ ಅದು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಹಾಗೆಯೇ ಹೊಸ ಸಾಲ ನೀಡುತ್ತಿಲ್ಲ. ಸರ್ಕಾರ ಆದಷ್ಟು ಬೇಗ ನೀಡಿರುವ ಭರವಸೆಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ಆಗ್ರಹಿಸಿದರು.

ಗೌಡಹಳ್ಳಿ ಸಹಕಾರ ಸಂಘವು ಜಿಲ್ಲೆಯ ಹಿರಿಯ ಸಹಕಾರ ಸಂಘಗಳಲ್ಲಿ ಒಂದಾಗಿದೆ. ಸಂಘಕ್ಕೆ 70 ವರ್ಷಗಳ ಇತಿಹಾಸವಿದೆ. ಹಲವು ಏಳುಬೀಳುಗಳ ನಂತರ ಸಂಘವು ಈಗ ಸದೃಢವಾಗಿ ಬೆಳೆದು ನಿಂತಿದ್ದು, ಪ್ರತಿ ವರ್ಷ ಹೆಚ್ಚಿನ ನಿವ್ವಳ್ಳ ಲಾಭ ಗಳಿಸುತ್ತಿದೆ. ಸಂಘದಲ್ಲಿ ರೈತರಿಗೆ ಸಾಲ ಸೌಲಭ್ಯವಲ್ಲದೇ, ಪಡಿತರ ವಿತರಣೆ, ಗೊಬ್ಬರ ವಿತರಣೆ, ಸುಣ್ಣ, ಪ್ಲಾಸ್ಟಿಕ್ ಚೀಲಗಳ ವಿತರಣೆ, ಹಿಟ್ಟಿನ ಗಿರಣಿ ಸೇವೆ ಒದಗಿಸುತ್ತಿದೆ. ರೈತರ ಅನುಕೂಲಕ್ಕಾಗಿ ಊರುಬಗೆಯಲ್ಲಿ ಗೊಬ್ಬರದ ಗೋದಾಮು ನಿರ್ಮಾಣ ಮಾಡಲಾಗಿದೆ. ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಲ್ಲಿ ನೂರಾರು ರೈತರು ವಿಮೆ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು. 2024-25ನೇ ಸಾಲಿನಲ್ಲಿ ಸಂಘವು 18 ಲಕ್ಷ ನಿವ್ವಳ್ಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 8 ರಷ್ಟು ಡಿವಿಡೆಂಟ್ ಘೋಷಣೆ ಮಾಡಲಾಗಿದೆ ಎಂದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಹೆಚ್.ಜಿ. ವೆಂಕಟೇಶ್ ಹೊನ್ನೇಕೂಲ್, ನಿರ್ದೇಶಕರಾದ ಕೃಷ್ಣೇಗೌಡ ಬೈರಾಪುರ, ಕೆ.ಎಲ್. ಚಂದ್ರೇಗೌಡ ಕುಂಬರಡಿ, ವಿನೇಶ್ ಬೈದುವಳ್ಳಿ, ಸಂತೋಷ್ ಮೇಕನಗದ್ದೆ, ಜಿ.ಟಿ. ರಮೇಶ್ ಗೌಡಹಳ್ಳಿ, ಅರುಣ್ ಮಡ್ಡೀಕೆರೆ, ನಿಂಗಪ್ಪ ಹೊಸಕೆರೆ, ಶ್ರೀಮತಿ ಜಯಮ್ಮ ಗೌಡಹಳ್ಳಿ, ಶ್ರೀಮತಿ ಸುಮಾ ರವಿ   ಗೌಡಹಳ್ಳಿ ಉಪಸ್ಥಿತರಿದ್ದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್. ಅಶೋಕ್ ಕುಮಾರ್, ಸಂಘದ ಸದಸ್ಯ ಎಸ್.ಇ. ಸುರೇಶ್ ಸತ್ತಿಗನಹಳ್ಳಿ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಸಂಘದ ಜಮಾಖರ್ಚು ಮಂಡಿಸಿದರು. ಸಂಘದ ಸಿಬ್ಬಂದಿ ಶ್ರೀಮತಿ ಗೀತಾ ವಾರ್ಷಿಕ ವರದಿ ಮಂಡಿಸಿದರು, ಸುಚಿತ್ರ ಪ್ರಸನ್ನ ಪ್ರಾರ್ಥನೆ ನೆರವೇರಿಸಿದರು. ಪ್ರಸನ್ನ ನಿರೂಪಿಸಿ, ಕೆ.ಪಿ.ನಾಗೇಶ್ ಕುಂಬರಡಿ ವಂದಿಸಿದರು.

 

ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್. ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ  ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ