ಚಿಕ್ಕಮಗಳೂರಿನ ಹೆಸರಾಂತ ವೈದ್ಯರು, ಆಶಾಕಿರಣ ಅಂಧಮಕ್ಕಳ ಶಾಲೆಯ ಸಂಸ್ಥಾಪಕರು ಆದ ಡಾ. ಜೆ.ಪಿ. ಕೃಷ್ಣೇಗೌಡ ಅವರ ಪುತ್ರಿ ಡಾ. ವರ್ಷಾ ಅಭಿಷೇಕ್ ಗೌಡ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂಎಲ್ಸಿ ಸಿ ಟಿ ರವಿ. ಬಿಜೆಪಿ ಜಿಲ್ಲಾಧ್ಯಕ್ಷರಾದ ಎಂ ಆರ್ ದೇವರಾಜ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಹಾಗೂ ಬಿಜೆಪಿ ಹಲವು ಮುಖಂಡರ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರಿದ್ದಾರೆ.
MBA,PhD ಓದಿರುವ ವರ್ಷಾ, ಸಾಮಾಜಿಕ ಕೆಲಸ ಕಾರ್ಯಗಳ ಕಡೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಡಾ. ವರ್ಷಾ ಅವರು ವಿವಾಹದ ನಂತರ, ಬೆಂಗಳೂರು ಮಹಾನಗರದಲ್ಲಿ ಹತ್ತು ಹಲವು ಕಾರ್ಯಗಳನ್ನು ತನ್ನನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ತನ್ನ ತಂದೆಯಂತೆಯೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಹೊಂದಿದ್ದು, ಇತ್ತೀಚೆಗೆ ಚಿಕ್ಕಮಗಳೂರು ನಗರದ ಸುತ್ತಮುತ್ತ, ತನ್ನ ಕಾರ್ಯ ಚಟುವಟಿಕೆಗಳ ಮೂಲಕ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಡಾ. ವರ್ಷಾ ಸಮಾಜ ಸೇವೆ ನನ್ನ ನೆಚ್ಚಿನ ಆಸಕ್ತಿದಾಯಕ ಕ್ಷೇತ್ರವಾಗಿದೆ. ಈಗಾಗಲೇ ನಾನು ಆಶ್ರಯ ಪೌಂಡೇಷನ್ ಎಂಬ ಸಂಸ್ಥೆಯನ್ನು ಸ್ನೇಹಿತರೊಂದಿಗೆ ಸೇರಿ ಪ್ರಾರಂಭಿಸಿ ಅದರ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದೇನೆ. ವಿಶೇಷವಾಗಿ ಮಹಿಳೆಯರ ಸರ್ವೈಕಲ್ ಕ್ಯಾನ್ಸರ್ ಜಾಗೃತಿ ಮತ್ತು ಚಿಕಿತ್ಸೆ, ಉಚಿತ ಆರೋಗ್ಯ ಶಿಬಿರಗಳು, ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕೋವಿಡ್ ಸಮಯದಲ್ಲಿ ಸುಮಾರು 3 ಸಾವಿರ ಕಿಟ್ ಗಳನ್ನು ವಿತರಣೆ ಮಾಡಿದ್ದೇವೆ. ದೇಶದಾದ್ಯಂತ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದೇವೆ. ಭೂಕಂಪನದಂತಹ ವಿಪತ್ತಿನ ಸಂದರ್ಭದಲ್ಲಿ ನಮ್ಮ ಪೌಂಡೇಷನ್ ಕೆಲಸ ಮಾಡಿದೆ. ನಮ್ಮ ತಂದೆಯವರ ಮಾರ್ಗದರ್ಶನದಲ್ಲಿ ಆಶಾಕಿರಣ ಅಂಧಮಕ್ಕಳ ಶಾಲೆಯ ಪೌಂಡೇಷನ್ ಅಡಿಯಲ್ಲಿಯೂ ಕೆಲಸ ಮಾಡುತ್ತಿದ್ದೇನೆ. ನನಗೆ ನನ್ನ ತಂದೆಯವರ ಸೇವಾ ಕಾರ್ಯಗಳೇ ಸದಾ ಸ್ಪೂರ್ತಿಯಾಗಿವೆ.
ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ, ಪ್ರಧಾನಿ ನರೇಂದ್ರ ಮೋದಿ ಜಿ ಅವರ ನಾಯಕತ್ವವನ್ನು ಮೆಚ್ಚಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದೇನೆ. ಇನ್ನೂ ವ್ಯಾಪಕವಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ರಾಜಕೀಯ ಕ್ಷೇತ್ರದಲ್ಲಿ ಅವಕಾಶ ಇದೆ. ಜನರನ್ನು ಹತ್ತಿರದಿಂದ ಸಂಪರ್ಕಿಸಲು ರಾಜಕೀಯ ಕ್ಷೇತ್ರದಿಂದ ಸಾಧ್ಯ ಈ ನಿಟ್ಟಿನಲ್ಲಿ ನಾನು ಸಿ.ಟಿ.ರವಿಯವರು ಸೇರಿದಂತೆ ಪಕ್ಷದ ಮುಖಂಡರ ಮಾರ್ಗದರ್ಶನ ಮತ್ತು ಶುಭ ಹಾರೈಕೆಯೊಂದಿಗೆ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದೇನೆ ಎಂದರು.



