ಮೂಡಿಗೆರೆ ತಾಲೂಕು ಟೈಲರ್ ಕ್ಷೇತ್ರ ಸಮಿತಿ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷರಾದ ಹೆಚ್.ಎಂ ಶಿವೇಗೌಡ ರವರ ಅಧ್ಯಕ್ಷತೆಯಲ್ಲಿ ಹಳೆಮೂಡಿಗೆರೆ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.
ವಲಯ ಪದಾಧಿಕಾರಿಗಳಾದ ಶಂಕರ್, ಮೇರಿ ಶೈಲಾ, ಮಂಜುಳಾ, ಉಮಾ ಶಂಕರ್, ರಾಜ್, ಗೋಪಾಲ್, ಗಿರೀಶ್, ಷಣ್ಮುಖಾನಂದ, ಸತೀಶ್, ಪ್ರಕಾಶ್, ಮೋಹನ್, ಕೃಷ್ಣ, ಮಂಜುಳಾ, ವನಿತಾ, ಸುಜಾತಾ, ನರಸಿಂಹ ಟೈಲರ್ ಉಪಸ್ಥಿತರಿದ್ದರು.
ಬಣಕಲ್,ಜನ್ನಾಪುರ, ಆಲ್ದೂರು, ಮೂಡಿಗೆರೆ ನಗರ, ಜಾವಳಿ,ಬಿಳಗುಳ, ಕ್ಷೇತ್ರ ಟೈಲರ್ ಸಂಘದ ಪದಾಧಿಕಾರಿಗಳು ಆಗಮಿಸಿ ತಮ್ಮ ವಲಯದ ಕಾರ್ಯಚಟುವಟಿಕೆಗಳ ವರದಿ ಮಂಡಿಸಿದರು
ಇದೆ ಸಂದರ್ಭದಲ್ಲಿ ಜಿಲ್ಲಾ ಸಮಿತಿಗೆ ಪುಟ್ಟಸ್ವಾಮಿ, ಜ್ಯೋತಿ, ಪೂರ್ಣೇಶ್, ಸುಜಾತಾ, ಜಗದೀಶ್ ಆಯ್ಕೆ ಮಾಡಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವೇಗೌಡರು ವೃತ್ತಿ ಬಾಂಧವರು ಎಲ್ಲರೂ ಒಗ್ಗಟ್ಟಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ ಸಮಾಜದ ಋಣ ತೀರಿಸಬೇಕಿದೆ, ಮುಂದಿನ ದಿನಗಳಲ್ಲಿ
ಮೂಡಿಗೆರೆ ಟೈಲರ್ ಸಂಘ ದ ಬೆಳ್ಳಿ ಹಬ್ಬ ಆಚರಣೆಯ ಹಿನ್ನೆಲೆಯಲ್ಲಿ ಟೈಲರ್ ಸ್ಮರಣೆ ಸಂಚಿಕೆ ಬಿಡುಗಡೆ ಮಾಡಲು ತಾಲೂಕಿನ ವೃತ್ತಿ ಬಾಂಧವರು ಸಲಹೆ ಸಹಕಾರ ನೀಡಿ ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು.
ಸ್ಮರಣೆ ಸಂಚಿಕೆಯ ಪ್ರಧಾನ ಸಂಪಾದಕರಾಗಿ ನರಸಿಂಹ ಟೈಲರ್ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.




