jci banakal 3

 

 

ಜೆಸಿಐ ಬಣಕಲ್ ವಿಸ್ಮಯ ಸಂಸ್ಥೆಯ ಜೇಸಿ ಸಪ್ತಾಹದ ಎರಡನೆಯ ದಿನ ನಾಗರೀಕರಿಗೆ ಮಾಹಿತಿ ಮಾರ್ಗದರ್ಶನ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವು ಕೋಳೂರಿನ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.

ತರಬೇತಿದಾರರಾಗಿ ಗ್ರಾಮೀಣ ಕೂಟ ಸ್ವಸಹಾಯ ಸಂಘದ ನಿರ್ದೇಶಕರಾದ ಸುದೀಪ್ ಭಾಗವಹಿಸಿ  ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಜನರು ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಸರಿಯಾದ ವೃತ್ತಿಯನ್ನು ನಡೆಸಲಾಗದೇ ಆರ್ಥಿಕ ತೊಂದರೆಗೆ ಸಿಲುಕುತ್ತಾರೆ. ಜೇಸಿ ಸಂಸ್ಥೆಯಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳು ಜನಸಾಮಾನ್ಯರಿಗೆ ಇಂತಹ ತರಬೇತಿಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ ಕಾರ್ಯವನ್ನು ಮಾಡುತ್ತಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಜೆ ಸಿ ಐ ಬಣಕಲ್ ವಿಸ್ಮಯ ಸಂಸ್ಥೆಯ ಅಧ್ಯಕ್ಷರಾದ ಸುರೇಂದ್ರ ಕೋಳೂರು, ಪೂರ್ವ ಅಧ್ಯಕ್ಷರಾದ ಶರತ್ ಪಲ್ಗುಣಿ, ಲೇಡಿ ಜೆಸಿ ಕಾರ್ಯದರ್ಶಿ ತೀರ್ಥ ಅರವಿಂದ್, ಕಾರ್ಯದರ್ಶಿ ಗಗನ್, ನಿರ್ದೇಶಕರಾದ ಅರವಿಂದ್ ಉಪಸ್ಥಿತರಿದ್ದರು.

ಕಾರ್ಯಕ್ರಮ ಭಾಗವಹಿಸಿದ ಕೋಳೂರು ಗ್ರಾಮದ ಸಮಸ್ತ ನಾಗರಿಕರಿಗೆ ಜೇಸಿ ಅಧ್ಯಕ್ಷ ಸುರೇಂದ್ರ ಕೋಳೂರು ಅಭಿನಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ