mahila 4

 

 

ಸಮಾಜದ ವಿವಿಧ ಸ್ಥರಗಳಲ್ಲಿ ಮಹಿಳೆಯರು ಎಷ್ಟರಮಟ್ಟಿಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ ಎಂಬುದರ ಮೇಲೆ ಒಂದು ಸಮಾಜದ ಪ್ರಗತಿಯ ಮಾನದಂಡ ಅವಲಂಭಿತವಾಗಿದೆ, ಮಹಿಳೆಯರಿಗೆ ಸಿಗುವ ಗೌರವ ಮತ್ತು ಅವಕಾಶಗಳು ಸಮಸಮಾಜದ ಕನಸುಗಳು ನನಸಾಗಲು ಪೂರಕ ಎಂದು ಮೂಡಿಗೆರೆ ತಹಸೀಲ್ದಾರ್ ಎಸ್. ಅಶ್ವಿನಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಮಂಗಳವಾರ ಸಂಜೆ ಮೂಡಿಗೆರೆ ಜೇಸಿ ಭವನದಲ್ಲಿ ಜೇಸಿಐ ಮೂಡಿಗೆರೆ ಲೇಡಿ ಜೇಸಿ ವಿಭಾಗದಿಂದ ಹಮ್ಮಿಕೊಂಡಿದ್ದ ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಹಿಳೆಯರು ಅಂಜಿಕೆ ಸ್ವಭಾವ, ಕೀಳರಿಮೆ ಬಿಟ್ಟು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆ ಬರಬೇಕು, ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಷ್ಟೇ ಸಮಾನ ಅವಕಾಶ ಮಹಿಳೆಯರಿಗೆ ಇದೆ, ಇದನ್ನು ಸಮರ್ಪಕವಾಗಿ ಮಹಿಳೆಯರು ಬಳಸಿಕೊಳ್ಳಬೇಕು, ಸಮಾನತೆ ಎಂಬುದು ಕೇವಲ ಘೋಷವಾಕ್ಯದಲ್ಲಿ ಉಳಿಯಬಾರದು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದರು. ಮೂಡಿಗೆರೆ ಜೇಸಿ ಸಂಸ್ಥೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಅತ್ಯಂತ ಶ್ಲಾಘನೀಯ ಎಂದರು.

ಜೇಸಿಐ ಮಹಿಳಾ ವಿಭಾಗದ ರಾಷ್ಟ್ರೀಯ ನಿರ್ದೇಶಕಿ ಶ್ರೀಮತಿ ಯಶಸ್ವಿನಿಯವರು ಮಾತನಾಡಿ ; ಸಮಾಜದಲ್ಲಿ ಮಹಿಳೆ ಹಲವು ವಿಭಿನ್ನ ಪಾತ್ರಗಳನ್ನು ನಿಭಾಯಿಸುತ್ತಾಳೆ, ತಾಯಿಯಾಗಿ, ಮಗಳಾಗಿ, ಮಡದಿಯಾಗಿ, ಸಹೋದರಿಯಾಗಿ ಹೀಗೆ ಸಂಸಾರ ಮತ್ತು ಸಮಾಜದಲ್ಲಿ ನಿರ್ಣಾಯಕ ಪಾತ್ರ ಮಹಿಳೆಯದ್ದಾಗಿದೆ. ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೇ ಸಮಾಜದಲ್ಲಿ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಉತ್ತಮ ಕೃಷಿಕ ಮಹಿಳೆಯಾಗಿ ಜೊತೆಗೆ ವೈವಿದ್ಯಮಯ ಅಡುಗೆ, ಸಾವಯಮ ಕೃಷಿ, ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವ ಹಂತೂರು ಗ್ರಾಮದ ಶ್ರೀಮತಿ ಪುಷ್ಟ ಮಂಜುನಾಥ್ ಮತ್ತು ನಾಟೀವೈದ್ಯೆ ಬೆಟ್ಟಗೆರೆ ಗ್ರಾಮದ ನಾಗರತ್ನ ದೊಡ್ಡಶೆಟ್ಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಲೇಡಿಜೇಸಿ ಅಧ್ಯಕ್ಷೆ ಶ್ರೀಮತಿ ರೇಖಾ ನಾಗರಾಜ್ ಬೆಟ್ಟಗೆರೆ ಅಧ್ಯಕ್ಷತೆ ವಹಿಸಿದ್ದರು. ವೇದಿಯಲ್ಲಿ ಜೇಸಿ ಅಧ್ಯಕ್ಷ ಪ್ರದೀಪ್ ಕುನ್ನಹಳ್ಳಿ, ಲೇಡಿ ಜೇಸಿ ನಿಕಟಪೂರ್ವ ಅಧ್ಯಕ್ಷೆ ದಿವ್ಯಾ ಸುಪ್ರೀತ್, ಸಹಕಾರ್ಯದರ್ಶಿ ನಿಶ್ಚಿತಾ ಯತೀಶ್, ಸಪ್ತಾಹದ ನಿರ್ದೇಶಕಿ ಕೃತಿ ಪ್ರದೀಪ್, ಕಾರ್ಯಕ್ರಮದ ನಿರ್ದೇಶಕಿ ರೇಖಾ ರವಿರಾಜ್, ಕಮಲಾ ಸತೀಶ್, ಜೂನಿಯರ್ ಜೇಸಿ ಅಧ್ಯಕ್ಷೆ ಪ್ರಶಂಸಾ, ಜೂನಿಯರ್ ಜೇಸಿ ಕಾರ್ಯದರ್ಶಿ ಈಶಾನಿ ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ